ರಾಜಕೀಯ ವೈರತ್ವದಿಂದ ಅಭಿವೃದ್ಧಿ ಕಾಣದ ಮಂಡ್ಯ ಗ್ರಾಮಗಳ ಪುನಶ್ಚೇತನಕ್ಕೆ ಆದ್ಯತೆ
ಮೈಸೂರು

ರಾಜಕೀಯ ವೈರತ್ವದಿಂದ ಅಭಿವೃದ್ಧಿ ಕಾಣದ ಮಂಡ್ಯ ಗ್ರಾಮಗಳ ಪುನಶ್ಚೇತನಕ್ಕೆ ಆದ್ಯತೆ

April 5, 2019

ಬೆಂಗಳೂರು: ಸಂಸದರಾಗಿ ಆಯ್ಕೆ ಗೊಂಡರೆ ರಾಜಕೀಯ ವೈರತ್ವದಿಂದ ಅಭಿವೃದ್ಧಿಯೇ ಕಾಣದ ಗ್ರಾಮಗಳ ಪುನ ಶ್ಚೇತನಕ್ಕೆ ಆದ್ಯತೆ ನೀಡುವುದಾಗಿ ಚಿತ್ರನಟಿ ಸುಮಲತಾ ಅಂಬರೀಶ್ ಇಂದಿಲ್ಲಿ ತಿಳಿಸಿದ್ದಾರೆ.

ಪತಿ ಅಂಬರೀಶ್ ಮಂಡ್ಯ ಜಿಲ್ಲೆಯ ಬಗ್ಗೆ ಕನಸುಗಳ ಸರಮಾಲೆ ಹೊತ್ತುಕೊಂಡಿದ್ದರು. ಆದರೆ ಅವರಿಗೆ ಆ ಕನಸುಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಅಂತಹ ಕನಸುಗಳನ್ನು ನನಸು ಮಾಡಲು ಮೊದಲ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‍ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪತಿ ಇದ್ದಾಗ ಜಿಲ್ಲೆಯ ಪ್ರವಾಸ ಕೈಗೊಂಡಿರಲಿಲ್ಲ. ಆದರೆ ಚುನಾ ವಣೆಗಾಗಿ ಹಳ್ಳಿ ಹಳ್ಳಿಗೆ ಸುತ್ತಿದ ಸಂದರ್ಭದಲ್ಲಿ ಅಲ್ಲಿನ ರಾಜಕೀಯ ವೈರತ್ವ ಎದ್ದು ಕಾಣುತ್ತದೆ.

ಇಂತಹ ವೈರತ್ವದಿಂದ ಕೆಲವು ಗ್ರಾಮಗಳಿಗೆ ರಸ್ತೆಯೂ ಇಲ್ಲ, ಕುಡಿಯುವ ನೀರು ಇಲ್ಲ. ಮೊದಲೇ ವಿದ್ಯುತ್ ಇಲ್ಲ. ಈ ಜನ ಯಾರನ್ನು ವಿರೋಧ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಂಬ ರೀಶ್ ರಾಜಕೀಯದಲ್ಲಿ ತುಂಬಾ ಯೋಜಿತರಾಗಿ ಹೋಗಿದ್ದರೆ, ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸು ತ್ತಿದ್ದರು. ನಾನೂ ಕೂಡ ಮುಂದಾಲೋಚನೆ ಇಲ್ಲದೆ ಜಿಲ್ಲೆಯ ಭಾವನಾತ್ಮಕ ಕರೆಗೆ ಸ್ಪಂದಿಸಿ ಚುನಾವಣಾ ಕಣಕ್ಕಿಳಿದಿದ್ದೇನೆ. ತಮಗೆ ಮತ ನೀಡಿಲ್ಲ ಎಂದು ಕೆಲವು ಗ್ರಾಮಗಳಿಗೆ ಮೂಲ ಸೌಕರ್ಯವನ್ನೇ ಕಲ್ಪಿಸಿಲ್ಲ. ಅಂತಹ ಬಹು ಹಳ್ಳಿಗಳ ಕಾಂಗ್ರೆಸ್ ಕಾರ್ಯಕರ್ತರು ಧ್ವಜ ಹಿಡಿದು, ನನ್ನ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನು ನಾನು ಬೇಡ ಎನ್ನಲೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವಾಗ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಇದರಿಂದ ಮಂಡ್ಯ ಸೇರಿ ಹಲವೆಡೆ ಅಸಮಾಧಾನ ಹೆಚ್ಚಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಜೆಡಿಎಸ್ ಬೆಂಬಲಿಸುವ ಮನಸ್ಸಿಲ್ಲ. ನಾನು ಕೈಗೊಂಡ ಭಾವನಾತ್ಮಕ ನಿರ್ಧಾರ ಸರಿಯೋ ಇಲ್ಲವೋ ಗೊತ್ತಾಗಿರಲಿಲ್ಲ. ಆದರೆ ಈಗ ನನ್ನ ನಿರ್ಧಾರ ಸರಿಯಾದದ್ದು ಅನ್ನಿಸುತ್ತಿದೆ. ಅಲ್ಲಿನ ಜನರಿಗೆ ಎಷ್ಟು ಸಹಾಯ ಮಾಡುತ್ತೇನೋ ಗೊತ್ತಿಲ್ಲ. ಆದರೆ ಸಾಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಪಕ್ಷೇತರ ಅಭ್ಯರ್ಥಿ ಆಗಿ ಸಾಕಷ್ಟು ಒತ್ತಡ ಎದುರಿಸುತ್ತಿದ್ದೇನೆ. ಇದು ಕಷ್ಟದ ಆಯ್ಕೆ, ಬಯಸಿದ ಆಯ್ಕೆ ಅಲ್ಲ. ಏನು ಮಾಡಬೇಕೆಂದು ಜನರನ್ನು ಕೇಳಿದಾಗ ಕಾಂಗ್ರೆಸ್‍ನಿಂದ ನಿಲ್ಲಿ ಇಲ್ಲವಾದರೆ ಪಕ್ಷೇತರವಾಗಿ ನಿಲ್ಲಿ ಎಂದು ಸಲಹೆ ಕೊಟ್ಟಿದ್ದರು. ಅದರಂತೆ ನಿಂತೆ.

Translate »