ಮೈಸೂರು: ಏಪ್ರಿಲ್ ಫೂಲ್ ಮಾಡುವ ಬದಲಿಗೆ ಹೆಚ್ಚು ಬಿಸಿಲಿನ ಧಗೆಯಿರುವ ಏಪ್ರಿಲ್ ತಿಂಗಳಲ್ಲಿ ಏಪ್ರಿಲ್ ಕೂಲ್ ಮಾಡಿ. ಅದಕ್ಕಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಿದರೆ ಅವುಗಳು ಬೆಳೆದು ವಾತಾವರಣ ತಂಪಾಗುತ್ತದೆ ಎಂದು ಬ್ರಾಹ್ಮಣ ಮಹಾಸಭಾ ಮೈಸೂರು ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು. ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮಿ ಯವರ 112ನೇ ಜಯಂತಿ ಅಂಗವಾಗಿ ಮೈಸೂರಿನ ಪ್ರಜ್ಞಾವಂತ ನಾಗರಿಕ ವೇದಿಕೆ ಚಾಮುಂಡಿಪುರಂನ ತಗಡೂರು ರಾಮಚಂದ್ರರಾವ್ ವೃತ್ತದಲ್ಲಿ ಆಯೋ ಜಿಸಿದ್ದ `ಪರಿಸರ ಗಂಗೆ’ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಶ್ರೀಗಳ ಹೆಸರಿನಲ್ಲಿ ಬಾದಾಮಿ…
ಕ್ರೆಸ್ಟಾ ಸ್ಪರ್ಧೆಯ ವಿಜೇತರು
April 2, 2019ಮೈಸೂರು: ಬೆಳೆಯುತ್ತಿರುವ ಯುವಕರು ತಮ್ಮ ಜೀವನದಲ್ಲಿ ಹಲವು ಬದಲಾವಣೆಗಳ ಮೂಲಕ ಮುನ್ನುಗ್ಗಿದ್ದರೆ ಅದು ಅವರ ಭವಿಷ್ಯವನ್ನು ವ್ಯಾಖ್ಯಾನಿಸುತ್ತದೆ. ವಿನೂತನ ಚಿಂತನಾ ಮಾರ್ಗ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ ಸುದೀರ್ಘ ಅವಧಿಯ ಜೀವನವನ್ನು ಉತ್ತಮವಾಗಿ ರೂಪಿಸುತ್ತದೆ. ಇದನ್ನು ಅರಿತ ಕ್ರೆಸ್ಟಾ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್ ಅದಕ್ಕಾಗಿ ಎಸ್‍ಕೆಪಡೆ ಎಂಬ ವಿನೂತನ ಕಾರ್ಯಕ್ರಮ ವನ್ನು ಆಯೋಜಿಸಿತ್ತು. ಮೈಸೂರಿನ ಅನೇಕ ಕಾಲೇಜುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವಿದ್ಯಾರ್ಥಿಗಳ ವಿನೂತನ ಕೌಶಲಗಳನ್ನು ಪ್ರದರ್ಶಿಸಿದವು. ಎರಡು ದಿನಗಳ ಕಾರ್ಯಕ್ರಮ ನಿರಂತರವಾಗಿ 36 ಗಂಟೆಗಳ ಕಾಲ ನಡೆಯಿತು….
`ಸಹಕಾರ-ಸುಸ್ಥಿರ ಅಭಿವೃದ್ಧಿ’ ಕುರಿತ ಅಂತಾರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ
April 2, 2019ಮೈಸೂರು: ಕರ್ನಾ ಟಕ ಸ್ಟೇಟ್ ಸೌಹಾರ್ದ ಫೆಡರಲ್ ಕೋ-ಆಪರೇಟಿವ್ ಲಿಮಿಟೆಡ್, ಯೂನಿವ ರ್ಸಿಟಿ ಆಫ್ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್ ಸಹಯೋಗದಲ್ಲಿ ಮೈಸೂರು ವಿವಿಯ ಥರ್ಡ್ ಸೆಕ್ಟರ್ ರೀಸರ್ಚ್ ರೀಸೋರ್ಸ್ ಸೆಂಟರ್ ವತಿಯಿಂದ ಮೈಸೂರು ವಿವಿ ವಿಜ್ಞಾನ ಭವನ ಸಭಾಂಗಣದಲ್ಲಿ ಸೋಮವಾರ `ಸಹಕಾರ ಮತ್ತು ಸುಸ್ಥಿರ ಅಭಿವೃದ್ಧಿ’ ಕುರಿತ ಅಂತಾ ರಾಷ್ಟ್ರೀಯ ಕಾರ್ಯಾಗಾರ ನಡೆಯಿತು. ಇರಾನ್, ಯೆಮನ್, ಅಫ್ಘಾನಿಸ್ತಾನ, ಭಾರತ ಸೇರಿದಂತೆ 65 ಮಂದಿ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಕಾರ್ಯಾಗಾರಕ್ಕೆ ಮೈಸೂರು ವಿವಿ ಕುಲ ಪತಿ ಪ್ರೊ.ಜಿ.ಹೇಮಂತಕುಮಾರ್…
ಗರ್ಭಧಾರಣಾ, ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಉಲ್ಲಂಘನೆ
April 2, 2019ಮೈಸೂರು: ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ 1994 ಉಲ್ಲಂಘನೆ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೈಸೂರು ಜಿಲ್ಲೆಯ 84 ಡಯೋಗ್ನಾಸ್ಟಿಕ್ ಸೆಂಟರ್‍ಗಳಿಗೆ ನೋಟೀಸ್ ಜಾರಿ ಮಾಡಿದೆ. 1994ರಲ್ಲಿ ಜಾರಿಗೆ ಬಂದಿರುವ ಗರ್ಭಧಾರಣಾ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನ(ಲಿಂಗ ಆಯ್ಕೆ ನಿಷೇಧ) ಕಾಯ್ದೆಯ ನ್ವಯ ಗೌಪ್ಯತೆ ಕಾಪಾಡಬೇಕಾದ ಆಸ್ಪತ್ರೆಗಳು ಹಾಗೂ ಡಯಾಗ್ನಾಸ್ಟಿಕ್ ಸೆಂಟರ್‍ಗಳ ರೇಡಿಯಾಲಜಿ ವೈದ್ಯರು ಹಾಗೂ ರೇಡಿಯಾ ಗ್ರಾಫರ್‍ಗಳು ಹಣದ ಆಸೆಗಾಗಿ ಕಾಯ್ದೆ ಉಲ್ಲಂಘಿಸುತ್ತಿದ್ದಾರೆ ಎಂಬ ಮೌಖಿಕ ದೂರುಗಳು ಹಾಗೂ…
ಏ.8ರಂದು ಸಿಪಿಕೆ 80ರ ಸಂಭ್ರಮ
April 2, 2019ಮೈಸೂರು: ಮೈಸೂರಿನ ಅರಸು ಜಾಗೃತಿ ಅಕಾಡೆಮಿ ಮತ್ತು ನೃಪತುಂಗ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿ ಡಾ. ಸಿ.ಪಿ.ಕೆ. ಅವರ 80ನೇ ಹುಟ್ಟುಹಬ್ಬ ವನ್ನು ಏ.8ರಂದು ಸಂಜೆ 4 ಗಂಟೆಗೆ ಜೆಎಲ್‍ಬಿ ರಸ್ತೆ ಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಸಿಪಿಕೆ ಚುಟುಕು ತೋರಣ ಮತ್ತು ಕಾವ್ಯಕ್ಕೆ ಗುರು ಕೃತಿಗಳನ್ನು ಲೋಕಾರ್ಪಣೆ…
ಏ.5ರಿಂದ ಮೈಸೂರಲ್ಲಿ `ಆರೋಗ್ಯವೇ ಭಾಗ್ಯ’ ಕುರಿತ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನ
April 2, 2019ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಸಹಯೋಗ ದೊಂದಿಗೆ ಸೌಖ್ಯ ಫೌಂಡೇಷನ್ ವತಿಯಿಂದ ಮೈಸೂರಿನ ರಿಯೋ ಮೆರಿಡಿಯನ್ ಹೋಟೆಲ್‍ನಲ್ಲಿ ಏ.5ರಿಂದ ಮೂರು ದಿನಗಳ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಿಎಸ್‍ಎಸ್ ಸಂಸ್ಥೆಯ ಶ್ರೀಹರಿ ತಿಳಿಸಿದರು. ಆರೋಗ್ಯವೇ ಭಾಗ್ಯ ವಿಷಯ ಕುರಿತ ಈ ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಮಲೇ ಷಿಯಾ ಮತ್ತು ಇಂಡೋನೇಷಿಯಾ ಇನ್ನಿತರ ರಾಷ್ಟ್ರಗಳ ತಜ್ಞರು ಸೇರಿದಂತೆ 400ಕ್ಕೂ ಹೆಚ್ಚಿನ ಆಸಕ್ತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ…
ಇಗ್ನೋ ಪ್ರಾಂತೀಯ ನಿರ್ದೇಶಕರಾಗಿ ಜಿ.ಹೆಚ್.ಇಮ್ರಾಪೂರ ಅಧಿಕಾರ ಸ್ವೀಕಾರ
April 2, 2019ಮೈಸೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ (ಇಗ್ನೋ) ಬೆಂಗಳೂರು ಪ್ರಾದೇಶಿಕ ಕೇಂದ್ರಕ್ಕೆ ಜಿ.ಹೆಚ್.ಇಮ್ರಾಪೂರ ಅವರು ಪ್ರಾಂತೀಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.ಗದಗ ಜಿಲ್ಲೆ, ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದವರಾದ ಜಿ.ಹೆಚ್. ಇಮ್ರಾಪೂರ ಅವರು ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಸೈನ್ಸ್ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ ಜೊತೆಗೆ ಗಣಿತಶಾಸ್ತ್ರದಲ್ಲಿ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಹೊಸ ದಿಲ್ಲಿ ವಿಶ್ವವಿದ್ಯಾ…
ಕೋರೋನರಿ ಸ್ಟೆಂಟ್ ಬೆಲೆ ಶೇ.4.2 ಏರಿಕೆ
April 2, 2019ನವದೆಹಲಿ: ಹೃದಯಕ್ಕೆ ಅಳ ವಡಿಸುವ ಕೋರೋನರಿ ಸ್ಟೆಂಟ್ ಬೆಲೆ ಇಂದಿನಿಂದ ಶೇ.4.2 ಏರಿಕೆಯಾಗಿದೆ. ಕಳೆದ ವರ್ಷದ ಸಗಟು ಬೆಲೆ ಸೂಚಿಗೆ ಅನುಗುಣವಾಗಿ ಶೇ.4.2ರಷ್ಟನ್ನು ಏರಿ ಸಲು ಡ್ರಗ್ ರೆಗ್ಯುಲೇಟರ್ ಅನುಮತಿ ನೀಡಿದೆ. ಬೇರೆ ಮೆಟಲ್ ಸ್ಟೆಂಟ್ (ಬಿಎಂಎಸ್)ನ ಬೆಲೆ ರೂ. 8,261 ಇದ್ದು, ಆದರೆ, ಡ್ರಗ್ ಎಲ್ಯೂಟಿಂಗ್ ಸ್ಟೆಂಟ್ (ಡಿಇಎಸ್) ಬೆಲೆಯನ್ನು ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್‍ಪಿಪಿಎ) ನೂತನ ದರ ಪಟ್ಟಿ ಪ್ರಕಾರ 30,080 ರೂ. ಗಳಿಗೆ ನಿಗದಿಪಡಿಸಿದೆ. ಡಿಇಎಸ್ ವರ್ಗವು ಮೆಟಾಲಿಕ್ ಡಿಇಎಸ್ ಮತ್ತು…
ಹಿರಿಯ ರಂಗಕರ್ಮಿ ಎಸ್.ಮಾಲತಿ ನಿಧನಕ್ಕೆ ರಂಗಾಯಣ ನಿರ್ದೇಶಕಿ ಸಂತಾಪ
April 2, 2019ಮೈಸೂರು: ಹಿರಿಯ ರಂಗಕರ್ಮಿ ಎಸ್.ಮಾಲತಿ ಅವರ ನಿಧನಕ್ಕೆ ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಂ ಸಂತಾಪ ವ್ಯಕ್ತಪಡಿಸಿದ್ದಾರೆ. ರಂಗಭೂಮಿಯನ್ನು ತನ್ನದಾಗಿಸಿ ಕೊಳ್ಳುವ ಮಹಿಳೆಯರೇ ಕಡಿಮೆ. ಅಂಥದ್ದರಲ್ಲಿ ದಿಟ್ಟ ರಂಗ ಹೆಜ್ಜೆಯನ್ನಿಡುತ್ತಾ ರಾಜ್ಯಾದ್ಯಂತ ನಾಟಕ ಸಂಘಗಳನ್ನು ಕಟ್ಟುತ್ತಾ, ನಾಟಕ ನಿರ್ದೇಶನ ಮಾಡುತ್ತಾ, ಕತೆ, ನಾಟಕ, ವಿಮರ್ಶೆ ಗಳನ್ನು ಬರೆಯುತ್ತಾ, ಅಭಿನಯ ಕಲಿಸುತ್ತಾ ರಂಗಭೂಮಿಯನ್ನು ತಮ್ಮದಾಗಿಸಿಕೊಳ್ಳುವ ಮಹಿಳೆಯರಿಗೆ ಪ್ರೇರಣೆಯಾಗಿ ಮಾರ್ಗ ದರ್ಶನ ನೀಡುತ್ತಿದ್ದರು. ಎಸ್.ಮಾಲತಿಯವರ ನಿಧನದಿಂದ ರಂಗಾಯಣಕ್ಕಷ್ಟೇ ಅಲ್ಲ. ಇಡೀ ಕರ್ನಾಟಕ ರಂಗಭೂಮಿಗೆ ದೊಡ್ಡ ಆಘಾತ ಮತ್ತು ನಷ್ಟ ಉಂಟಾಗಿದೆ. ಅಂತಹ…
ಜನತೆಗೆ ಸರ್ಕಾರದ ಸಾಧನೆ ಮನದಟ್ಟು ಮಾಡಿ
April 2, 2019ಸ್ಥಳೀಯ ಜನಪ್ರತಿನಿಧಿಗಳಿಗೆ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮನವಿ ತಿ.ನರಸೀಪುರ: ಕಾಂಗ್ರೆಸ್ ಅಭಿವೃದ್ಧಿ ಮಾನದಂಡದ ಮೇಲೆ ಸಾರ್ವತ್ರಿಕ ಲೋಕಸಭಾ ಚುನಾವಣೆ ಎದುರಿಸುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳಾದ ಪುರಸಭಾ ಸದಸ್ಯರು ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ಸಾಧನೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟು ಅಧಿಕ ಮತಗಳ ಪಡೆಯಬೇಕು ಎಂದು ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮನವಿ ಮಾಡಿದರು. ಪಟ್ಟಣದ ಶ್ರೀ ಚಿಕ್ಕಮ್ಮತಾಯಿ ಯಾತ್ರಿ ಭವನದಲ್ಲಿ ಸೋಮವಾರ ನಡೆದ ಪುರಸಭೆ ಸದಸ್ಯರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ…










