ಗರ್ಭಧಾರಣಾ, ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಉಲ್ಲಂಘನೆ
ಮೈಸೂರು

ಗರ್ಭಧಾರಣಾ, ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಉಲ್ಲಂಘನೆ

April 2, 2019

ಮೈಸೂರು: ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ 1994 ಉಲ್ಲಂಘನೆ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೈಸೂರು ಜಿಲ್ಲೆಯ 84 ಡಯೋಗ್ನಾಸ್ಟಿಕ್ ಸೆಂಟರ್‍ಗಳಿಗೆ ನೋಟೀಸ್ ಜಾರಿ ಮಾಡಿದೆ.

1994ರಲ್ಲಿ ಜಾರಿಗೆ ಬಂದಿರುವ ಗರ್ಭಧಾರಣಾ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನ(ಲಿಂಗ ಆಯ್ಕೆ ನಿಷೇಧ) ಕಾಯ್ದೆಯ ನ್ವಯ ಗೌಪ್ಯತೆ ಕಾಪಾಡಬೇಕಾದ ಆಸ್ಪತ್ರೆಗಳು ಹಾಗೂ ಡಯಾಗ್ನಾಸ್ಟಿಕ್ ಸೆಂಟರ್‍ಗಳ ರೇಡಿಯಾಲಜಿ ವೈದ್ಯರು ಹಾಗೂ ರೇಡಿಯಾ ಗ್ರಾಫರ್‍ಗಳು ಹಣದ ಆಸೆಗಾಗಿ ಕಾಯ್ದೆ ಉಲ್ಲಂಘಿಸುತ್ತಿದ್ದಾರೆ ಎಂಬ ಮೌಖಿಕ ದೂರುಗಳು ಹಾಗೂ ಗುಮಾನಿ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದ ಜಿಲ್ಲಾ ಸಲಹಾ ಸಮಿತಿ ನೋಟೀಸ್ ಜಾರಿ ಮಾಡಿ ನಿಗದಿತ ಸಮಯದೊಳಗೆ ಸಮ ಜಾಯಿಷಿ ನೀಡುವಂತೆ ಸೂಚಿಸಿದೆ.

1994ರಲ್ಲೇ ಗರ್ಭಧಾರಣಾ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಕಾಯ್ದೆ (ಪ್ರೀ ಕನ ಸೀವ್ ಅಂಡ್ ಪ್ರೀನೇಟಲ್ ಡಯೋಗ್ನಾಸ್ಟಿಕ್ ಆ್ಯಕ್ಟ್)ಯು ಮಹಾ ರಾಷ್ಟ್ರದಲ್ಲಿ ಮೊದಲ ಜಾರಿಗೆ ಬಂದಿತಾದರೂ, 1996, 2004 ಮತ್ತು 2014ರಲ್ಲಿ ಹಂತ ಹಂತವಾಗಿ ತಿದ್ದುಪಡಿಯಾಗಿ ದೇಶದಾ ದ್ಯಂತ ಸಂಪೂರ್ಣವಾಗಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸ ಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 244 ನೋಂದಾಯಿತ ಸ್ಕ್ಯಾನಿಂಗ್ ಸೆಂಟರ್‍ಗಳಿದ್ದು ಪ್ರಸ್ತುತ 183 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಆ ಪೈಕಿ 15 ಸರ್ಕಾರಿ ಆಸ್ಪತ್ರೆಗಳ ಸ್ಕ್ಯಾನಿಂಗ್ ಮಿಷನ್ ಗಳಾಗಿವೆ. 64 ರೇಡಿಯಾಲಜಿಸ್ಟ್‍ಗಳು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಪರಿಶೀಲನಾ ಮತ್ತು ಮಾನಿ ಟರಿಂಗ್ ಸಮಿತಿಗಳು ಅಸ್ತಿತ್ವದಲ್ಲಿದ್ದು, ಪ್ರಸವ ಪೂರ್ವ ಲಿಂಗ ಪತ್ತೆ ಉಲ್ಲಂಘನೆಯಾಗದಂತೆ ಡಯೋಗ್ನಾಸ್ಟಿಕ್ ಸೆಂಟರ್ ಗಳ ಮೇಲೆ ನಿಗಾ ಇರಿಸಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಪರಿ ಶೀಲನೆ ನಡೆಸಿ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ವಹಿಸಲು ಈ ಸಮಿತಿಗೆ ಅಧಿಕಾರವಿದೆ. ಜಿಲ್ಲೆಯ ಗಡಿ ಪ್ರದೇಶ ಗಳು ಹಾಗೂ ಹೋಬಳಿ ಮಟ್ಟದ ಗ್ರಾಮೀಣ ಭಾಗದ ಖಾಸಗಿ ಆಸ್ಪತ್ರೆಗಳು ಮತ್ತು ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಆರೋಗ್ಯ ತಪಾಸಣೆಗೆ ಬರುವ ಗರ್ಭಿಣಿ ಸ್ತ್ರೀಯರಿಗೆ ಪ್ರಸವ ಪೂರ್ವದಲ್ಲಿ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡುತ್ತಿರುವ ಕುರಿತಂತೆ ಮಾಹಿತಿ ನೀಡಲಾಗುತ್ತಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಸಮಿತಿಯು ಜಿಲ್ಲೆ 84 ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಗರ್ಭಿಣಿ ಸ್ತ್ರೀಯರ ಸ್ಕ್ಯಾನಿಂಗ್ ರಿಪೋರ್ಟ್‍ಗಳನ್ನು `ಬಾಲಿಕಾ’ ಎಂಬ ಸಾಫ್ಟ್‍ವೇರ್‍ನಲ್ಲಿ ಆನ್‍ಲೈನ್ ಮೂಲಕ ಅದೇ ದಿನ ಸಂಜೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲವು ವಿಧಾನವನ್ನು ಸರಿಯಾಗಿ ಅಳವಡಿಸಿ ರಿಪೋರ್ಟ್ ಕಳುಹಿಸದೆ ಲೋಪ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಪರಿ ಶೀಲನಾ ಮತ್ತು ಮಾನಿಟರಿಂಗ್ ಕಮಿಟಿ ಮುಖ್ಯಸ್ಥ ಡಾ.ಶಿವ ಕುಮಾರ್ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮೊಹ ಮದ್ ಶಿರಾಜ್ ಅಹಮದ್ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು.

2011ರ ಜನಗಣತಿಯನ್ವಯ 1 ಸಾವಿರ ಪುರುಷರಿಗೆ 961 ಮಹಿಳೆಯರಿದ್ದಾರೆ ಎಂಬ ಮಾಹಿತಿ ಇದೆ. ಭ್ರೂಣಲಿಂಗ ಪತ್ತೆಯಿಂದಾಗಿ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿರುವುದ ರಿಂದ ಸಮಾಜದಲ್ಲಿ ಸ್ತ್ರೀ ಸಂಬಂಧಿತ ಅಪರಾಧ ಕೃತ್ಯಗಳು ನಡೆಯಬಹುದೆಂಬ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

Translate »