ಮೈಸೂರು

ಮೈತ್ರಿ ಧರ್ಮ ಪಾಲನೆ ಸಂದೇಶ  ಸಾರುತ್ತಿರುವ ಕೆ.ವಿ.ಮಲ್ಲೇಶ್
ಮೈಸೂರು

ಮೈತ್ರಿ ಧರ್ಮ ಪಾಲನೆ ಸಂದೇಶ ಸಾರುತ್ತಿರುವ ಕೆ.ವಿ.ಮಲ್ಲೇಶ್

April 3, 2019

ಮೈಸೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಬಿಜೆಪಿ ವಿರುದ್ಧ ಹೋರಾಟ ನಡೆಸಲಾಗು ತ್ತಿದೆ. ಆದರೆ ಅಲ್ಲಲ್ಲಿ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಅಸ ಮಾಧಾನ ಹೊರಹಾಕುತ್ತಿರುವುದು ಗೊಂದಲ ಸೃಷ್ಟಿಸಿದೆ. ಈ ಪರಿಸ್ಥಿತಿಯಲ್ಲಿ ಉಭಯ ಪಕ್ಷಗಳ ನಾಯಕರು ಎಲ್ಲಾ ಕಾರ್ಯಕರ್ತರನ್ನೂ ಮೈತ್ರಿ ಧರ್ಮದಡಿ ಒಗ್ಗೂಡಿಸಿಕೊಂಡು, ಚುನಾವಣೆ ನಡೆಸಲು ಕಸರತ್ತು ಮುಂದುವರೆಸಿದ್ದಾರೆ. ಈ ನಡುವೆ ಮೈಸೂರಿನಲ್ಲಿ ಜೆಡಿಎಸ್ ಮುಖಂಡರೊಬ್ಬರು ಮೈತ್ರಿ ಧರ್ಮ ಪರಿ ಪಾಲನೆಯ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ದ್ವಿಚಕ್ರ ವಾಹನದಲ್ಲಿ…

ಏ.8ರಿಂದ ಮೈಸೂರಲ್ಲಿ  ಮೈತ್ರಿ ಅಭ್ಯರ್ಥಿ ಪರ ಪ್ರಚಾರ
ಮೈಸೂರು

ಏ.8ರಿಂದ ಮೈಸೂರಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ

April 3, 2019

ಮೈಸೂರು: -ಏಪ್ರಿಲ್ 8ರಿಂದ ಮೈಸೂರು-ಚಾಮರಾಜ ನಗರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ಎರಡೂ ಪಕ್ಷಗಳ ಮುಖಂಡರುಗಳೊಂದಿಗೆ ಪ್ರಚಾರ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದ ಅವರು ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿದ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದರು. ನಿನ್ನೆ (ಸೋಮವಾರ) ತಡ ರಾತ್ರಿವರೆಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ತಮ್ಮನ್ನು ಭೇಟಿ ಮಾಡಿ, ಸುದೀರ್ಘ ಮಾತುಕತೆ ನಡೆಸಿದರು….

ಕಾರು ಅಪಘಾತ: ಸಚಿವ ಜಿಟಿಡಿ ಪಾರು
ಮೈಸೂರು

ಕಾರು ಅಪಘಾತ: ಸಚಿವ ಜಿಟಿಡಿ ಪಾರು

April 3, 2019

ಮೈಸೂರು: ರಸ್ತೆ ಅಪಘಾತದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಅಪಾಯದಿಂದ ಪಾರಾಗಿ ದ್ದಾರೆ. ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಇಂದು ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಸಚಿವರು ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇ ಶ್ವರಿ ದರ್ಶನ ಪಡೆದು, ಪುತ್ರ ಜಿ.ಡಿ. ಹರೀಶ್ ಗೌಡ, ಆಪ್ತ ಸಹಾಯಕ ಹನುಮೇಶ್ ಹಾಗೂ ಗನ್‍ಮ್ಯಾನ್ ಜೊತೆ ಇನ್ನೋವಾ ಕಾರಿನಲ್ಲಿ ರಿಂಗ್ ರಸ್ತೆ ಮೂಲಕ ಚುನಾವಣಾ ಪ್ರಚಾರಕ್ಕೆಂದು ಮಂಡ್ಯಕ್ಕೆ ತೆರಳುತ್ತಿದ್ದರು. ಬೆಂಗಳೂರು-ಮೈಸೂರು ರಸ್ತೆಗೆ ತಿರುವು…

ಹಿನಕಲ್‍ನಲ್ಲಿ ಪ್ರತಾಪ್ ಸಿಂಹ ಪ್ರಚಾರ
ಮೈಸೂರು

ಹಿನಕಲ್‍ನಲ್ಲಿ ಪ್ರತಾಪ್ ಸಿಂಹ ಪ್ರಚಾರ

April 3, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಇಂದು ಹಿನಕಲ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಬೆಳಿಗ್ಗೆ ಹಿನಕಲ್‍ನ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅರುಣ್ ಕುಮಾರ್‍ಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಹೇಮಂತ ಕುಮಾರ್ ಗೌಡ ಅವರೊಂದಿಗೆ ಹುಣಸೂರು ರಸ್ತೆ, ನಾಯ ಕರ ಬೀದಿ, ಲಿಂಗಾಯಿತರ ಬೀದಿ ಸೇರಿ ದಂತೆ ಹಲವು ಕಡೆ ಪ್ರಚಾರ ನಡೆಸಿದರು. ಪ್ರಮುಖ ಮುಖಂಡರನ್ನು ಭೇಟಿ ಮಾಡಿದ ಪ್ರತಾಪ್ ಸಿಂಹ,…

ಉತ್ತಮ ಪ್ರಜಾಕೀಯ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ: ಉಪೇಂದ್ರ
ಮೈಸೂರು

ಉತ್ತಮ ಪ್ರಜಾಕೀಯ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ: ಉಪೇಂದ್ರ

April 3, 2019

ಮೈಸೂರು: ಉತ್ತಮ ಪ್ರಜಾಕೀಯ ಪಕ್ಷದಿಂದ ಮೈಸೂರು ಸೇರಿ ದಂತೆ ರಾಜ್ಯದ ಎಲ್ಲಾ 28 ಕ್ಷೇತ್ರಗಳ ಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈಗಾಗಲೇ 14 ಜನರ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ಚಿತ್ರನಟ ಉಪೇಂದ್ರ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮದು ರಾಜಕೀಯ ಪಕ್ಷವಲ್ಲ. ಜನಾಡಳಿತ ಪಕ್ಷವಾಗಿ ಬೆಳೆಯಬೇಕು. ಪಾರ್ಟಿ ಫಂಡ್ ಇಲ್ಲದೇ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ ಎಂದರು….

ಹಳೇ ಮೈಸೂರು ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳಿಂದ  ಯಾವೊಬ್ಬ ಮಹಿಳಾ ಅಭ್ಯರ್ಥಿ ಸ್ಪರ್ಧೆ ಇಲ್ಲ
ಮೈಸೂರು

ಹಳೇ ಮೈಸೂರು ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಯಾವೊಬ್ಬ ಮಹಿಳಾ ಅಭ್ಯರ್ಥಿ ಸ್ಪರ್ಧೆ ಇಲ್ಲ

April 3, 2019

ಮೈಸೂರು: ಎಲ್ಲ ರಾಜಕೀಯ ಪಕ್ಷಗಳೂ ವಿಧಾನಸಭೆ ಹಾಗೂ ಲೋಕ ಸಭೆಯಲ್ಲಿ ಮಹಿಳೆಯರಿಗೆ 33% ಪ್ರತಿ ನಿಧಿತ್ವ ಮೀಸಲಿಡಲು ಒತ್ತಾಯಿಸುತ್ತವೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಈ ಬಾರಿ ಯಾವುದೇ ರಾಷ್ಟ್ರೀಯ ಪಕ್ಷವೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಹಳೇ ಮೈಸೂರು ಪ್ರಾಂತ್ಯಕ್ಕೆ ಒಳ ಪಡುವ ಮೂರೂ ಲೋಕಸಭಾ ಕ್ಷೇತ್ರ ಗಳಾದ ಹಾಸನ, ಮಂಡ್ಯ, ಚಾಮ ರಾಜನಗರ ಮತ್ತು ಮೈಸೂರು ಕ್ಷೇತ್ರ ಗಳಲ್ಲಿ, ಮೂವರು ಮಹಿಳಾ ಅಭ್ಯರ್ಥಿ ಗಳು ಮೈಸೂರಿನಿಂದ ಹಾಗೂ ನಾಲ್ಕು ಅಭ್ಯರ್ಥಿಗಳು ಮಂಡ್ಯದಿಂದ…

ಅದೃಶ್ಯ ಮತದಾರರು ಮೋದಿಯವರ ಬೆನ್ನಿಗೆ ನಿಲ್ಲಲಿದ್ದಾರೆ:ಆರ್.ರಘು ಕೌಟಿಲ್ಯ
ಮೈಸೂರು

ಅದೃಶ್ಯ ಮತದಾರರು ಮೋದಿಯವರ ಬೆನ್ನಿಗೆ ನಿಲ್ಲಲಿದ್ದಾರೆ:ಆರ್.ರಘು ಕೌಟಿಲ್ಯ

April 3, 2019

ಮೈಸೂರು: ಈ ಬಾರಿಯ ಚುನಾ ವಣೆಯಲ್ಲಿ ಅದೃಶ್ಯ ಮತದಾರರು (ಕಾಯಕ ಸಮಾಜಗಳು) ನರೇಂದ್ರ ಮೋದಿ ಹಾಗೂ ಬಿಜೆಪಿ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರರೂ ಆದ ರಾಜ್ಯ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್.ರಘು (ಕೌಟಿಲ್ಯ) ತಿಳಿಸಿದ್ದಾರೆ. ಹಿಂದುಳಿದ ಸಮುದಾಯಗಳ ಏಳಿಗೆ ಗಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಹಮ್ಮಿ ಕೊಂಡಿದ್ದ ಜನಪರ ಕಾರ್ಯಕ್ರಮಗಳು ನರೇಂದ್ರ ಮೋದಿ ಸರ್ಕಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿವೆ ಎಂದು ಅವರು ಹೇಳಿದರು. ಮಂಗಳವಾರ ಪಿರಿಯಾಪಟ್ಟಣ ತಾಲೂಕಿನ…

ಖಾಯಂ ಜನತಾ ನ್ಯಾಯಾಲಯದಲ್ಲಿ  9 ಬಗೆಯ ಸಾರ್ವಜನಿಕ ಉಪಯುಕ್ತ ಸೇವೆ
ಮೈಸೂರು

ಖಾಯಂ ಜನತಾ ನ್ಯಾಯಾಲಯದಲ್ಲಿ 9 ಬಗೆಯ ಸಾರ್ವಜನಿಕ ಉಪಯುಕ್ತ ಸೇವೆ

April 3, 2019

ಮೈಸೂರು: ಖಾಯಂ ಜನತಾ ನ್ಯಾಯಾಲಯ (Permanent Lok Adalat)ಗಳ ಮೂಲಕ 9 ಬಗೆಯ ಸಾರ್ವಜನಿಕ ಉಪಯುಕ್ತ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್ ಕುಮಾರ್ ಹಂಚಾತೆ ಇಂದಿಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ಹೈಕೋರ್ಟ್‍ನಲ್ಲಿರುವ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳ ಕೋರ್ಟ್ ಗಳಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಯಲ್ಲಿ ಪಾಲ್ಗೊಂಡಿದ್ದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. 2003ರಲ್ಲಿ ಸ್ಥಾಪನೆಯಾದ ಖಾಯಂ ಜನತಾ…

`ರೇಡಿಯೋ ಮಿರ್ಚಿ 104.8’ಕ್ಕೆ ಯದುವೀರ್ ಚಾಲನೆ
ಮೈಸೂರು

`ರೇಡಿಯೋ ಮಿರ್ಚಿ 104.8’ಕ್ಕೆ ಯದುವೀರ್ ಚಾಲನೆ

April 3, 2019

ಮೈಸೂರು: ಮೈಸೂರು ಆಕಾಶವಾಣಿ ಎಫ್‍ಎಂ 100.6, ರೆಡ್ ಎಫ್‍ಎಂ 93.5, ಬಿಗ್ ಎಫ್‍ಎಂ 92.7 ನಂತರ ಮೈಸೂರಿನಲ್ಲಿ ಮತ್ತೊಂದು ಎಫ್‍ಎಂ ರೇಡಿಯೋ `ರೇಡಿಯೋ ಮಿರ್ಚಿ 104.8’ ಆರಂಭವಾಗಿದೆ. ಮೈಸೂರಿನ ನಾಲ್ಕನೇ ಎಫ್‍ಎಂ ರೇಡಿಯೋ ಸ್ಟೇಷನ್ `ರೇಡಿಯೋ ಮಿರ್ಚಿ 104.8’ಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ಖಾಸಗಿ ಹೋಟೆಲ್‍ನಲ್ಲಿ ವಿಧ್ಯುಕ್ತ ಚಾಲನೆ ನೀಡಿದರು. ಮೈಸೂರು ಆಕಾಶವಾಣಿಯ ಆರಂ ಭದ ದಿನಗಳು ಮತ್ತು ತಮ್ಮ ತಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಿದ ಯದುವೀರ್, ಇಷ್ಟೊಂದು ಖ್ಯಾತಿ…

ಕೆಲಸದ ಆಮಿಷವೊಡ್ಡಿ ಯುವತಿಯರನ್ನು  ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ  ಮೈಸೂರಿನ ಓರ್ವ ಸೇರಿ ಮೂವರ ಸೆರೆ
ಮೈಸೂರು

ಕೆಲಸದ ಆಮಿಷವೊಡ್ಡಿ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮೈಸೂರಿನ ಓರ್ವ ಸೇರಿ ಮೂವರ ಸೆರೆ

April 3, 2019

ಮೈಸೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಹೊರ ರಾಜ್ಯ ಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೈಸೂರಿನ ಓರ್ವ ಸೇರಿದಂತೆ ಮೂವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಇಲವಾಲದ ಕಾಶಿ(21), ಚನ್ನರಾಯಪಟ್ಟಣದ ದೀಪಕ್ ಅಲಿ ಯಾಸ್ ದೀಪಕ್‍ಗೌಡ(30) ಹಾಗೂ ಕೆ.ಆರ್.ಪೇಟೆಯ ಪ್ರಜ್ವಲ್ (21) ಬಂಧಿತ ಆರೋಪಿಗಳು. ಬೆಂಗಳೂರಿನ ಸೋಲದೇವನಹಳ್ಳಿಯ ಚಿಕ್ಕಸಂದ್ರದಲ್ಲಿರುವ ಮನೆಯೊಂದರಲ್ಲಿ ಕೂಡಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು, ಮೂವ ರನ್ನು ಬಂಧಿಸಿ ಹೊರ ರಾಜ್ಯದ ಯುವತಿಯರನ್ನು…

1 1,054 1,055 1,056 1,057 1,058 1,611
Translate »