`ರೇಡಿಯೋ ಮಿರ್ಚಿ 104.8’ಕ್ಕೆ ಯದುವೀರ್ ಚಾಲನೆ
ಮೈಸೂರು

`ರೇಡಿಯೋ ಮಿರ್ಚಿ 104.8’ಕ್ಕೆ ಯದುವೀರ್ ಚಾಲನೆ

April 3, 2019

ಮೈಸೂರು: ಮೈಸೂರು ಆಕಾಶವಾಣಿ ಎಫ್‍ಎಂ 100.6, ರೆಡ್ ಎಫ್‍ಎಂ 93.5, ಬಿಗ್ ಎಫ್‍ಎಂ 92.7 ನಂತರ ಮೈಸೂರಿನಲ್ಲಿ ಮತ್ತೊಂದು ಎಫ್‍ಎಂ ರೇಡಿಯೋ `ರೇಡಿಯೋ ಮಿರ್ಚಿ 104.8’ ಆರಂಭವಾಗಿದೆ.

ಮೈಸೂರಿನ ನಾಲ್ಕನೇ ಎಫ್‍ಎಂ ರೇಡಿಯೋ ಸ್ಟೇಷನ್ `ರೇಡಿಯೋ ಮಿರ್ಚಿ 104.8’ಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ಖಾಸಗಿ ಹೋಟೆಲ್‍ನಲ್ಲಿ ವಿಧ್ಯುಕ್ತ ಚಾಲನೆ ನೀಡಿದರು.

ಮೈಸೂರು ಆಕಾಶವಾಣಿಯ ಆರಂ ಭದ ದಿನಗಳು ಮತ್ತು ತಮ್ಮ ತಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಿದ ಯದುವೀರ್, ಇಷ್ಟೊಂದು ಖ್ಯಾತಿ ಉಳ್ಳ ರಾಷ್ಟ್ರೀಯ ಎಫ್‍ಎಂ ಮೈಸೂರಿನಲ್ಲಿ ಕಾರ್ಯಾ ಚರಣೆ ಪ್ರಾರಂಭಿಸಿರುವುದು ನಿಜಕ್ಕೂ ತುಂಬಾ ಖುಷಿಯಾಗಿದೆ. ಈ ಸ್ಟೇಷನ್ ನಲ್ಲಿ ಆರ್‍ಜೆ ಆಗಲು ಅವಕಾಶ ಸಿಕ್ಕಿರು ವುದು, ನನ್ನ ಕೆಲ ದಿನಗಳ ಇಚ್ಛೆಯೂ ಆಗಿತ್ತು. ರೇಡಿಯೋ ಮಿರ್ಚಿ ಖಂಡಿತ ವಾಗಿ ಶೀಘ್ರವೇ ಮೈಸೂರಿನ ಸಾಮಾಜಿಕ ಮತ್ತು ಸಾಂಸ್ಕøತಿಕ ಭಾಗವಾಗಲಿದೆ. ಇದರ ಜೊತೆಯಲ್ಲಿ ಅರಮನೆ ಮತ್ತು ಮೈಸೂ ರಿನ ಸಂಸ್ಕøತಿಯನ್ನು ಬಿಂಬಿಸುವ ಕೆಲಸ ಈ ರೇಡಿಯೋ ಮಾಡಲಿದೆ. ಪ್ರತಿ ಭಾನು ವಾರ ತಾವು ಮೈಸೂರು ಡೈರಿ ಕಾರ್ಯ ಕ್ರಮದಲ್ಲಿ ಮೈಸೂರಿನ ಇತಿಹಾಸ, ಪರಂ ಪರೆ ಇನ್ನಿತರ ವಿಚಾರಗಳ ಕುರಿತ ಚರ್ಚೆ ನಡೆಸಲಿರುವುದಾಗಿ ತಿಳಿಸಿದರು. ಮೈಸೂ ರಿನ ಸಂಸ್ಕøತಿ, ಇತಿಹಾಸವನ್ನು ಬಿಂಬಿ ಸುವ ಈ ರೇಡಿಯೋ ಸ್ಟೇಷನ್‍ನ್ನು ಮೈಸೂರಿನ ಜನತೆ ಸಂತಸದಿಂದ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಮಿರ್ಚಿ ಕರ್ನಾಟಕದ ಕ್ಲಸ್ಟರ್ ಮುಖ್ಯಸ್ಥ ಭಾನು ಪ್ರತಾಪಸಿಂಗ್ ಚೌಹಾಣ್ ಮಾತ ನಾಡಿ, ಭಾರತದಾದ್ಯಂತ 63 ನಗರದಲ್ಲಿ 73 ಫ್ರೀಕ್ವೆನ್ಸಿಗಳನ್ನು ಹೊಂದಿರುವ ರೇಡಿಯೋ ಮಿರ್ಚಿ, ಕೇಳುಗರಿಗೆ ಅತ್ಯುತ್ತಮ ಮನೋ ರಂಜನೆ, ನೀಡುವುದೇ ನಮ್ಮ ಧ್ಯೇಯ. ಕೇವಲ ಹಾಡುಗಳು, ಆರ್‍ಜೆಗಳ ಮಾತಿ ನಿಂದಷ್ಟೇ ಅಲ್ಲದೆ ಜನರ ಹತ್ತಿರಕ್ಕೆ ಹೋಗು ವಂತಹ ಕಾರ್ಯಕ್ರಮಗಳನ್ನು ನೀಡಲಿದೆ. ಸಮಕಾಲೀನ ಸಂಗೀತ, ಹಾಸ್ಯ, ಸ್ಯಾಂಡಲ್ ವುಡ್ ಸುದ್ದಿ, ಹರಟೆ, ಮಾಹಿತಿ, ಇನ್ನೂ ಹತ್ತು ಹಲವು ವಿಷಯಗಳನ್ನು ರೇಡಿಯೋ ಮಿರ್ಚಿ ಮೈಸೂರು ಜನರ ಮುಂದಿಡ ಲಿದೆ ಎಂದರು. ಈ ಸಂದರ್ಭದಲ್ಲಿ ಆರ್‍ಜೆ ಗಳು, ಕಾರ್ಯಕ್ರಮ ನಿರ್ವಾಹಕರು ಇನ್ನಿ ತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »