ಕೆಲಸದ ಆಮಿಷವೊಡ್ಡಿ ಯುವತಿಯರನ್ನು  ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ  ಮೈಸೂರಿನ ಓರ್ವ ಸೇರಿ ಮೂವರ ಸೆರೆ
ಮೈಸೂರು

ಕೆಲಸದ ಆಮಿಷವೊಡ್ಡಿ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮೈಸೂರಿನ ಓರ್ವ ಸೇರಿ ಮೂವರ ಸೆರೆ

April 3, 2019

ಮೈಸೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಹೊರ ರಾಜ್ಯ ಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೈಸೂರಿನ ಓರ್ವ ಸೇರಿದಂತೆ ಮೂವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಇಲವಾಲದ ಕಾಶಿ(21), ಚನ್ನರಾಯಪಟ್ಟಣದ ದೀಪಕ್ ಅಲಿ ಯಾಸ್ ದೀಪಕ್‍ಗೌಡ(30) ಹಾಗೂ ಕೆ.ಆರ್.ಪೇಟೆಯ ಪ್ರಜ್ವಲ್ (21) ಬಂಧಿತ ಆರೋಪಿಗಳು. ಬೆಂಗಳೂರಿನ ಸೋಲದೇವನಹಳ್ಳಿಯ ಚಿಕ್ಕಸಂದ್ರದಲ್ಲಿರುವ ಮನೆಯೊಂದರಲ್ಲಿ ಕೂಡಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರು.

ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು, ಮೂವ ರನ್ನು ಬಂಧಿಸಿ ಹೊರ ರಾಜ್ಯದ ಯುವತಿಯರನ್ನು ರಕ್ಷಿಸಿದ್ದಾರೆ. ಆರೋಪಿ ತರಿಂದ 3 ಮೊಬೈಲ್ ಫೋನ್, 3,500 ರೂ. ನಗದು ಸೇರಿದಂತೆ ಇತರ ವಸ್ತು ಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಸನದಲ್ಲಿ ಈ ಮೊದಲು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ದೀಪಕ್, ನಂತರ ಬೆಂಗಳೂರಿನ ಚಿಕ್ಕಸಂದ್ರದಲ್ಲಿ ಮನೆ ಯೊಂದನ್ನು ಬಾಡಿಗೆಗೆ ಪಡೆದು, ಕೆಲಸದ ಆಮಿಷವೊಡ್ಡಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದರು ಎಂಬುದು ದಾಳಿಯಿಂದ ತಿಳಿದು ಬಂದಿದೆ. ಬಂಧಿತರ ಪೈಕಿ ಮೈಸೂರು ತಾಲೂಕು ಇಲವಾಲದ ಕಾಶಿ ಎಂಬ ಯುವಕ ಸಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದು, ಆತ, ಐಷಾರಾಮಿ ಜೀವನ ನಡೆಸಲು ಈ ದಂಧೆಯಲ್ಲಿ ತೊಡಗಿದ್ದ ಎಂಬುದು ಸಿಸಿಬಿ ಪೊಲೀಸರಿಗೆ ತಿಳಿದು ಬಂದಿದೆ.

Translate »