ಖಾಯಂ ಜನತಾ ನ್ಯಾಯಾಲಯದಲ್ಲಿ  9 ಬಗೆಯ ಸಾರ್ವಜನಿಕ ಉಪಯುಕ್ತ ಸೇವೆ
ಮೈಸೂರು

ಖಾಯಂ ಜನತಾ ನ್ಯಾಯಾಲಯದಲ್ಲಿ 9 ಬಗೆಯ ಸಾರ್ವಜನಿಕ ಉಪಯುಕ್ತ ಸೇವೆ

April 3, 2019

ಮೈಸೂರು: ಖಾಯಂ ಜನತಾ ನ್ಯಾಯಾಲಯ (Permanent Lok Adalat)ಗಳ ಮೂಲಕ 9 ಬಗೆಯ ಸಾರ್ವಜನಿಕ ಉಪಯುಕ್ತ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್ ಕುಮಾರ್ ಹಂಚಾತೆ ಇಂದಿಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಹೈಕೋರ್ಟ್‍ನಲ್ಲಿರುವ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳ ಕೋರ್ಟ್ ಗಳಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಯಲ್ಲಿ ಪಾಲ್ಗೊಂಡಿದ್ದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

2003ರಲ್ಲಿ ಸ್ಥಾಪನೆಯಾದ ಖಾಯಂ ಜನತಾ ನ್ಯಾಯಾಲಯವು ಕಲಂ 22 3(ಬಿ)ಯಲ್ಲಿ ವಿವರಿಸಿರುವಂತೆ ಪ್ರಯಾಣಿ ಕರು ಅಥವಾ ಸರಕನ್ನು ವಾಯುಮಾರ್ಗ, ರಸ್ತೆ ಅಥವಾ ಜಲ ಮಾರ್ಗಗಳಲ್ಲಿ ಸಾಗಿ ಸುವ ಸೇವೆ, ಅಂಚೆ ಅಥವಾ ದೂರ ವಾಣಿ, ವಿದ್ಯುತ್, ಬೆಳಕು ಅಥವಾ ನೀರು ಸರಬರಾಜು ಮಾಡುವ ಸಂಸ್ಥೆ, ಸಾರ್ವಜ ನಿಕ ಸಂರಕ್ಷಣೆ ಅಥವಾ ನೈರ್ಮಲ್ಯ, ಆಸ್ಪತ್ರೆ ಸೇವೆ, ವಿಮೆ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು, ವಸತಿ ಮತ್ತು ರಿಯಲ್ ಎಸ್ಟೇಟ್ ಸೇವೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ದೂರು, ತಕರಾರುಗಳನ್ನು ವಿಚಾರಣೆ ನಡೆಸಿ ಉಭಯತ್ರರ ಸಮ್ಮತಿ ಮೇರೆಗೆ ತೀರ್ಪು ನೀಡಲಾಗುವುದು ಎಂದು ತಿಳಿಸಿದರು.

ಈ ನ್ಯಾಯಾಲಯಕ್ಕೆ ಬರುವ ಪ್ರಕರಣ ಗಳಲ್ಲಿ ವಿವಾದಕ್ಕೊಳಗಾದ ಸ್ವತ್ತಿನ ಮೌಲ್ಯ ಹಾಗೂ ಹಣಕಾಸು ಸಂಸ್ಥೆಗಳ ವ್ಯವಹಾರ 1 ಕೋಟಿ ರೂ.ಗಳಿಗೆ ಮೀರದಂತಿರ ಬೇಕು. ನಿವೃತ್ತ ನ್ಯಾಯಾಧೀಶ ಹಾಗೂ ಇಬ್ಬರು ಪರಿಣಿತರು ಕಾರ್ಯನಿರ್ವ ಹಿಸುವ ಖಾಯಂ ಜನತಾ ನ್ಯಾಯಾಲ ಯದಲ್ಲಿ ಕನಿಷ್ಠ 1 ತಿಂಗಳು ಹಾಗೂ ಗರಿಷ್ಠ 3 ತಿಂಗಳೊಳಗಾಗಿ ವಿಚಾರಣೆ ನಡೆಸಿ ತೀರ್ಪು ನೀಡಲಿದ್ದು, ಅದೇ ಅಂತಿಮ ವಾಗಿರುತ್ತದೆ. ಮೇಲ್ಮನವಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ಸಂಜೀವ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲೆಲ್ಲಿ ಸ್ಥಾಪನೆ: ಮೈಸೂರು, ಕೊಡಗು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಗೆ ಮೈಸೂರಿನ ಜಯನಗರ (ಮಳಲವಾಡಿ)ದಲ್ಲಿರುವ ಹೊಸ ನ್ಯಾಯಾ ಲಯ ಕಟ್ಟಡದಲ್ಲಿ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ, ಚಿತ್ರದುರ್ಗ, ಕೋಲಾರ ಮತ್ತು ತುಮಕೂರು ಜಿಲ್ಲೆಯ ವರಿಗೆ ಬೆಂಗಳೂರಲ್ಲಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಮಂಗಳೂರಲ್ಲಿ, ಬಳ್ಳಾರಿ, ಧಾರವಾಡ, ದಾವಣಗೆರೆ, ಹಾವೇರಿ, ಗದಕ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಗಳಿಗೆ ಧಾರವಾಡದಲ್ಲಿ ಹಾಗೂ ಕಲಬುರಗಿ, ವಿಜಯಪುರ, ಬೀದರ್, ರಾಯಚೂರು ಜಿಲ್ಲೆಗಳಿಗಾಗಿ ಕಲಬುರಗಿಯಲ್ಲಿ ಖಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ.

ವಕೀಲರು ಬೇಡ: ಸಾರ್ವಜನಿಕ ಉಪ ಯುಕ್ತತೆಯ 9 ಬಗೆಗಿನ ಸೇವೆಗಳಲ್ಲಿ ಯಾವುದೇ ವ್ಯತ್ಯಯ, ತೊಂದರೆಯಾಗಿ ದ್ದಲ್ಲಿ ದೂರುದಾರರು ಬಿಳಿ ಹಾಳೆಯಲ್ಲಿ ಅಗತ್ಯ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಿದರೆ ಸಾಕು, ವಕೀಲರೂ ಬೇಡ, ಶುಲ್ಕ ಕೊಡುವಂತಿಲ್ಲ. ನ್ಯಾಯಾಲಯದ ಶುಲ್ಕವೂ ಇರುವುದಿಲ್ಲ. ದೂರುದಾರರೇ ವಾದ ಮಾಡಬಹುದು. ಉಭಯತ್ರರನ್ನು ವಿಚಾರಣೆ ನಡೆಸಿ ದಾಖಲೆ ಪತ್ರಗಳು ಹಾಗೂ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಪರಸ್ಪರ ಒಪ್ಪಿಗೆ ಮೇರೆಗೆ ತೀರ್ಪು ನೀಡಲಾ ಗುವುದು. ಖಾಯಂ ಜನತಾ ನ್ಯಾಯಾಲಯಕ್ಕೆ ತೃಪ್ತಿಯಾಗುವಂತೆ ಹೇಳಿಕೆಗಳನ್ನು ದಾಖಲಿಸಿದ ಮೇಲೆ, ದಸ್ತಾವೇಜುಗಳನ್ನು ಸಲ್ಲಿಸಿದ ನಂತರ ವಿವಾದದ ಸಂದರ್ಭಗಳನ್ನು ಪರಿಗಣಿಸಿ ಇಲ್ಲಿ ಅಂತಿಮ ತೀರ್ಪು ನೀಡಲಾಗುವುದು.

ವಿವಾದಗಳನ್ನು ಉಭಯ ಪಾರ್ಟಿಗಳು ಸೌಹಾರ್ದಯುತವಾಗಿ, ಸ್ವತಂತ್ರವಾಗಿ ಹಾಗೂ ನಿಷ್ಪಕ್ಷಪಾತವಾಗಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ನೀಡಲಾಗು ವುದು. ಎದುರಾಳಿ ಹಾಜರಾಗದಿದ್ದರೆ ಅಥವಾ ಒಪ್ಪಿಗೆ ಸೂಚಿಸದಿದ್ದಲ್ಲಿ ಪ್ರಕರಣದ ಗುಣಾವಗುಣಗಳಿಗೆ ಅನುಗುಣವಾಗಿ ವಿವಾದವನ್ನು ಇತ್ಯರ್ಥಗೊಳಿಸಲಾಗುತ್ತದೆ.

ಇಲ್ಲಿ ನೀಡುವ ಐತೀರ್ಪನ್ನು ಸಿವಿಲ್ ಕೋರ್ಟಿನ ಡಿಕ್ರಿಯೆಂದೇ ಪರಿಭಾವಿಸಲಾ ಗುವುದು. ಅದನ್ನು ಯಾವುದೇ ಮೂಲ ದಾವೆಯಲ್ಲಿ ಪ್ರಶ್ನಿಸುವಂತಿಲ್ಲ. ಜಿಲ್ಲಾ ಗ್ರಾಹಕರ ನ್ಯಾಯಾಲಯವು ನಡೆಸು ವಂತೆಯೇ ಖಾಯಂ ಜನತಾ ನ್ಯಾಯಾ ಲಯವು ಪ್ರಕರಣ ಕೈಗೆತ್ತಿಕೊಳ್ಳುತ್ತದೆಯಾ ದರೂ ಇಲ್ಲಿ ಕೇವಲ 9 ಬಗೆಯ ವಿವಾದ ಗಳನ್ನು ಮಾತ್ರ ಇತ್ಯರ್ಥಗೊಳಿಸಲಾಗುತ್ತದೆ.

ಲೋಕ ಅದಾಲತ್‍ನಲ್ಲಿ ಎರಡೂ ಕಡೆ ಯವರು ಸಮ್ಮತಿಸಿದಲ್ಲಿ ಮಾತ್ರ ಇತ್ಯರ್ಥ ವಾಗ ಲಿದೆ. ಆದರೆ ಇಲ್ಲಿ ಪ್ರಕರಣದ ಗುಣಾವ ಗುಣಗಳ ಆಧಾರದ ಮೇಲೆ ತೀರ್ಪು ನೀಡಲಾಗುತ್ತದೆ. ಸಾರ್ವಜನಿಕರು ಈ ಉಚಿತ ಕಾನೂನು ಸೇವೆಗಳನ್ನು ಪಡೆದುಕೊಂಡು ಖಾಯಂ ಜನತಾ ನ್ಯಾಯಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಂಜೀವ ಕುಮಾರ್ ಹಂಚಾತೆ ಅವರು ತಿಳಿಸಿದರು.

ಮೈಸೂರು ನ್ಯಾಯಾಲಯದಲ್ಲಿ ಪತ್ರಿಕಾ ಗೋಷ್ಠಿ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ದೇವಮಾನೆ ಅವರು ಉಪಸ್ಥಿತರಿದ್ದರು.

Translate »