ಅದೃಶ್ಯ ಮತದಾರರು ಮೋದಿಯವರ ಬೆನ್ನಿಗೆ ನಿಲ್ಲಲಿದ್ದಾರೆ:ಆರ್.ರಘು ಕೌಟಿಲ್ಯ
ಮೈಸೂರು

ಅದೃಶ್ಯ ಮತದಾರರು ಮೋದಿಯವರ ಬೆನ್ನಿಗೆ ನಿಲ್ಲಲಿದ್ದಾರೆ:ಆರ್.ರಘು ಕೌಟಿಲ್ಯ

April 3, 2019

ಮೈಸೂರು: ಈ ಬಾರಿಯ ಚುನಾ ವಣೆಯಲ್ಲಿ ಅದೃಶ್ಯ ಮತದಾರರು (ಕಾಯಕ ಸಮಾಜಗಳು) ನರೇಂದ್ರ ಮೋದಿ ಹಾಗೂ ಬಿಜೆಪಿ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರರೂ ಆದ ರಾಜ್ಯ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್.ರಘು (ಕೌಟಿಲ್ಯ) ತಿಳಿಸಿದ್ದಾರೆ.

ಹಿಂದುಳಿದ ಸಮುದಾಯಗಳ ಏಳಿಗೆ ಗಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಹಮ್ಮಿ ಕೊಂಡಿದ್ದ ಜನಪರ ಕಾರ್ಯಕ್ರಮಗಳು ನರೇಂದ್ರ ಮೋದಿ ಸರ್ಕಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿವೆ ಎಂದು ಅವರು ಹೇಳಿದರು.

ಮಂಗಳವಾರ ಪಿರಿಯಾಪಟ್ಟಣ ತಾಲೂಕಿನ ಸತ್ತೇಗಾಲ ಸೇರಿದಂತೆ ಹಲವು ಗ್ರಾಮಗಳಲ್ಲಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಪರವಾಗಿ ಕಾಯಕ ಸಮಾಜಗಳ ಮತದಾರರನ್ನು ಸಂಘಟಿಸಿ ಮತ ಯಾಚಿಸಿದ ಅವರು ಕಾಯಕ ಸಮಾಜಗಳು ಮೋದಿ ಬೆಂಬಲಕ್ಕಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಮಾಜಿಕ ನ್ಯಾಯದ ಆಡಳಿತ ನೀಡಿದ ಅರಸು ಅವರ ಕಲ್ಪನೆಯ ಕಾರ್ಯಕ್ರಮ ಗಳು ಕಳೆದ ಐದು ವರ್ಷಗಳ ಆಡಳಿತಾ ವಧಿಯಲ್ಲಿ ಜಾರಿಗೆ ಬಂದಿವೆ. ಕರ್ನಾಟಕ ದಲ್ಲಿ ಯಾವುದೇ ಮನೆಯಾಗಲೀ, ಗುಡಿ ಸಲಾಗಲೀ ಕತ್ತಲಲ್ಲಿ ಇರಬಾರದು ಎಂಬ ಕಾಳಜಿಯಿಂದ ಭಾಗ್ಯಜ್ಯೋತಿ ಯೋಜನೆ ಜಾರಿಗೆ ತಂದು ಮನೆ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಇಂದು ಅಂಥದ್ದೇ ಯೋಜನೆಯನ್ನು ಸೌಭಾಗ್ಯ ಜ್ಯೋತಿ ಎಂಬ ಹೆಸರಿನಲ್ಲಿ ದೇಶಾದ್ಯಂತ ಜಾರಿಗೆ ತಂದ ಮೋದಿಯವರು ಬಡ ಜನರ ಪಾಲಿನ ಆಶಾಕಿರಣವಾಗಿ ಹೊರ ಹೊಮ್ಮಿದ್ದಾರೆ ಎಂದು ರಘು ಹೇಳಿದರು.

ಉಜ್ವಲಾ ಯೋಜನೆಯಡಿ ಬಡವರ ಮನೆ ಮನೆಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡುವ ಮೂಲಕ ಸವಲತ್ತು, ಸೌಲಭ್ಯಗಳು ಕೇವಲ ಉಳ್ಳವರಿಗೆ ಮಾತ್ರ ಮೀಸಲಲ್ಲ ಎಂದು ಮೋದಿಯವರು ಸಾಬೀತು ಪಡಿಸಿದ್ದಾರೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಸಂಸತ್ತಿನಲ್ಲಿ ಅನುಮೋದನೆ ಸಿಗಬೇಕಾಗಿದೆ.

ಭವಿಷ್ಯದಲ್ಲಿ ಇಂಥ ಹಲವು ಯೋಜನೆ ಗಳು ಜಾರಿಯಾಗಿ ಹಿಂದುಳಿದ ಸಮು ದಾಯಗಳಿಗೆ ಹೆಚ್ಚಿನ ಶಕ್ತಿ ಬರುವಂತಾ ಗಲು ಈ ಬಾರಿ ಮೋದಿಯವರನ್ನು ಬೆಂಬ ಲಿಸಿ ಬಲಿಷ್ಠ ಭಾರತ ಕಟ್ಟಲು ಸಂಕಲ್ಪ ಮಾಡಬೇಕು ಎಂದ ಅವರು, ಸಂಸದ ರಾಗಿ ಪ್ರತಾಪ್ ಸಿಂಹ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಓರ್ವ ಕ್ರಿಯಾಶೀಲ, ಸಮರ್ಥ ಸಂಸದರಾಗಿ ಹೊರಹೊಮ್ಮಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿ ಇರುವಂತೆ ಮಾಡಲು ಮೈಸೂರು ಮಹತ್ತರ ಪಾತ್ರ ವಹಿಸಬೇಕಾಗಿದ್ದು ಅದಕ್ಕಾಗಿ ಪ್ರತಾಪ್ ಸಿಂಹ ಅವರನ್ನು ಗೆಲ್ಲಿಸಬೇಕು ಎಂದು ರಘು ಮನವಿ ಮಾಡಿದರು.

Translate »