ಹಳೇ ಮೈಸೂರು ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳಿಂದ  ಯಾವೊಬ್ಬ ಮಹಿಳಾ ಅಭ್ಯರ್ಥಿ ಸ್ಪರ್ಧೆ ಇಲ್ಲ
ಮೈಸೂರು

ಹಳೇ ಮೈಸೂರು ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಯಾವೊಬ್ಬ ಮಹಿಳಾ ಅಭ್ಯರ್ಥಿ ಸ್ಪರ್ಧೆ ಇಲ್ಲ

April 3, 2019

ಮೈಸೂರು: ಎಲ್ಲ ರಾಜಕೀಯ ಪಕ್ಷಗಳೂ ವಿಧಾನಸಭೆ ಹಾಗೂ ಲೋಕ ಸಭೆಯಲ್ಲಿ ಮಹಿಳೆಯರಿಗೆ 33% ಪ್ರತಿ ನಿಧಿತ್ವ ಮೀಸಲಿಡಲು ಒತ್ತಾಯಿಸುತ್ತವೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಈ ಬಾರಿ ಯಾವುದೇ ರಾಷ್ಟ್ರೀಯ ಪಕ್ಷವೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಹಳೇ ಮೈಸೂರು ಪ್ರಾಂತ್ಯಕ್ಕೆ ಒಳ ಪಡುವ ಮೂರೂ ಲೋಕಸಭಾ ಕ್ಷೇತ್ರ ಗಳಾದ ಹಾಸನ, ಮಂಡ್ಯ, ಚಾಮ ರಾಜನಗರ ಮತ್ತು ಮೈಸೂರು ಕ್ಷೇತ್ರ ಗಳಲ್ಲಿ, ಮೂವರು ಮಹಿಳಾ ಅಭ್ಯರ್ಥಿ ಗಳು ಮೈಸೂರಿನಿಂದ ಹಾಗೂ ನಾಲ್ಕು ಅಭ್ಯರ್ಥಿಗಳು ಮಂಡ್ಯದಿಂದ ಕಣದಲ್ಲಿ ದ್ದಾರೆ. ಆದರೆ ಈ ಅಭ್ಯರ್ಥಿಗಳು ಸ್ವತಂತ್ರ ಇಲ್ಲವೆ ಸಣ್ಣಪುಟ್ಟ ಪಕ್ಷದ ಅಭ್ಯರ್ಥಿಗಳು.

ಮೈಸೂರಿನಲ್ಲಿ, ಉತ್ತಮ ಪ್ರಜಾ ಕೀಯ ಪಕ್ಷದ ಅಭ್ಯರ್ಥಿಯಾಗಿ ಆಶಾರಾಣಿ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)ದಿಂದ ಪಿ.ಎಸ್.ಸಂಧ್ಯಾ ಹಾಗೂ ಎನ್.ಕೆ.ಕಾವೇರಮ್ಮ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಸ್ವತಂತ್ರ ಮಹಿಳಾ ಅಭ್ಯರ್ಥಿಗಳ ಹೆಸರೂ ಸುಮಲತಾ (ಸುಮಲತಾ ಅಂಬ ರೀಶ್, ಪಿ.ಸುಮಲತಾ, ಸುಮಲತಾ ಮಂಜೇ ಗೌಡ ಮತ್ತು ಸುಮಲತಾ). ಇಲ್ಲಿ ಮತ ದಾರರಿಗೆ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರನ್ನು ಹುಡುಕಿ ಮತ ಹಾಕುವುದು ಕಷ್ಟದ ಸಂಗತಿಯಾಗಿದೆ. ಸಾಕಷ್ಟು ಗೊಂದಲ ಉಂಟು ಮಾಡಲಿದೆ. ಈ ಹಿಂದೆ ಹಳೆ ಮೈಸೂರು ಪ್ರಾಂತ್ಯದಲ್ಲಿ ನಡೆದ ಲೋಕ ಸಭಾ ಚುನಾವಣೆಗಳಲ್ಲಿ ಮಂಡ್ಯ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳಿಂದ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಸಂಸತ್‍ಗೆ ಕಳುಹಿಸಲಾಗಿತ್ತು. ಸಿನಿಮಾ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ 2013ರಲ್ಲಿ ಕಾಂಗ್ರೆಸ್ಸಿನಿಂದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಒಮ್ಮೆ ಗೆಲುವು ಕಂಡಿದ್ದರು.

ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಸೋತಿದ್ದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ಪುತ್ರಿ, ಚಂದ್ರಪ್ರಭಾ ಅರಸ್ (ದಿವಂಗತ) ಕಾಂಗ್ರೆಸ್ಸಿನಿಂದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಚಂದ್ರ ಪ್ರಭಾ ಅರಸುರವರು ರಾಜಮನೆತನದ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರನ್ನು 1991ರ ಲೋಕಸಭಾ ಚುನಾ ವಣೆಯಲ್ಲಿ ಸೋಲಿಸಿದ್ದರು. ಈ ಮಧ್ಯೆ ಹಿಂದೆ ನಡೆದ ಅನೇಕ ವಿಧಾನ ಸಭಾ ಚುನಾವಣೆ ಗಳಲ್ಲಿ ಮಹಿಳೆಯರು ಅಭ್ಯರ್ಥಿಗಳಾಗಿ ಸ್ಪರ್ಧಿಸಿ, ಮಂಡ್ಯ, ಚಾಮರಾಜನಗರ ಮತ್ತು ಮೈಸೂರು ಕ್ಷೇತ್ರಗಳಿಂದ ಗೆದ್ದು ಬಂದಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆಯಿಂದ ದಿವಂಗತ ಕೆ.ಎಸ್.ನಾಗ ರತ್ನಮ್ಮ, ಗೀತಾ ಮಹದೇವಪ್ರಸಾದ್, ಹನೂರಿನಿಂದ ಪರಿಮಳಾನಾಗಪ್ಪ ಹಾಗೂ ಕೊಳ್ಳೇಗಾಲ ಕ್ಷೇತ್ರ ದ್ವಿಸದಸ್ಯ ಸ್ಥಾನ ಹೊಂದಿದ್ದ 1957ರಲ್ಲಿ ಕೆಂಪಮ್ಮ ಆಯ್ಕೆ ಯಾಗಿದ್ದರು. ಮಂಡ್ಯ ಜಿಲ್ಲೆಯನ್ನು ತೆಗೆದುಕೊಂಡರೆ ವಿಜಯಲಕ್ಷ್ಮಿ ಬಂಡೀ ಸಿದ್ದೇಗೌಡ, ಪಾರ್ವತಮ್ಮ ಶ್ರೀಕಂಠಯ್ಯ, ದಮಯಂತಿ ಬೋರೇಗೌಡ (ಮೂವರು ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರ) ಪ್ರಭಾವತಿ ಜಯರಾಂ (ಮಂಡ್ಯ), ನಾಗಮಣಿ ನಾಗೇಗೌಡ (ಕಿರುಗಾವಲು) ಹಾಗೂ ಕಲ್ಪನಾ ಸಿದ್ದರಾಜು (ಮದ್ದೂರು) ಅವರು, ತಮ್ಮ ಪತಿ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳನ್ನು ಕ್ರಮೇಣ ಪ್ರತಿನಿಧಿಸಿದ್ದರು. ಇವರ ಗೆಲುವಲ್ಲಿ ಬಹುತೇಕ ಅನು ಕಂಪದ ಅಲೆಯ ಪಾತ್ರವೇ ಅಧಿಕವಾಗಿತ್ತು.

Translate »