ಉತ್ತಮ ಪ್ರಜಾಕೀಯ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ: ಉಪೇಂದ್ರ
ಮೈಸೂರು

ಉತ್ತಮ ಪ್ರಜಾಕೀಯ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ: ಉಪೇಂದ್ರ

April 3, 2019

ಮೈಸೂರು: ಉತ್ತಮ ಪ್ರಜಾಕೀಯ ಪಕ್ಷದಿಂದ ಮೈಸೂರು ಸೇರಿ ದಂತೆ ರಾಜ್ಯದ ಎಲ್ಲಾ 28 ಕ್ಷೇತ್ರಗಳ ಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈಗಾಗಲೇ 14 ಜನರ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ಚಿತ್ರನಟ ಉಪೇಂದ್ರ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮದು ರಾಜಕೀಯ ಪಕ್ಷವಲ್ಲ. ಜನಾಡಳಿತ ಪಕ್ಷವಾಗಿ ಬೆಳೆಯಬೇಕು. ಪಾರ್ಟಿ ಫಂಡ್ ಇಲ್ಲದೇ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ ಎಂದರು.
ಕಾರ್ಮಿಕನಾಗಿ ಹಾಗೂ ಸತ್ಯ ನಿಷ್ಠೆ ಯಿಂದ ಕಾರ್ಯ ನಿರ್ವಹಿಸಲು, ರಾಷ್ಟ್ರದ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಲು ರಾಜನಾಗುವುದಿಲ್ಲ. ಬದಲಿಗೆ ಸೇವಕ ನಾಗಿ ಪಾರದರ್ಶಕವಾಗಿ ಕಾರ್ಯ ನಿರ್ವ ಹಿಸುವುದಾಗಿ ಹೇಳಿದರು.

ನಮ್ಮ ಪಕ್ಷದಲ್ಲಿ ಪ್ರಣಾಳಿಕೆ ಇರಲ್ಲ. ಜನರ ಹೇಳಿಕೆಯೇ ಪ್ರಣಾಳಿಕೆ. ನ್ಯಾಯಾ ಲಯದಲ್ಲಿ ಪ್ರಣಾಳಿಕೆಗೆ ಸಂಬಂಧಿಸಿದ ಕಾರ್ಯಕ್ರಮಗಳು ರಿಜಿಸ್ಟರ್ ಆಗಬೇಕು. ಅವುಗಳನ್ನು ಪ್ರತಿನಿಧಿಗಳು ಜಾರಿಗೊಳಿ ಸಲಿಲ್ಲವೆಂದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತಹ ಬದಲಾವಣೆ ತರಬೇಕಾಗಿದೆ ಎಂದರು.

ಪ್ರಜೆಗಳೇ ನಮ್ಮ ಸ್ಟಾರ್‍ಗಳು: ನಮ್ಮ ಪಕ್ಷದ ಪರವಾಗಿ ಯಾವುದೇ ಸ್ಟಾರ್‍ಗಳು ಪ್ರಚಾರ ನಡೆಸುವುದಿಲ್ಲ. ಸಿನಿಮಾದಲ್ಲಿ ಮಾತ್ರ ಸ್ಟಾರ್‍ಗಳು. ನಮಗೆ ಸುಮಲತಾ ಅಥವಾ ಪ್ರಕಾಶ್ ರೈ ರೀತಿಯಲ್ಲಿ ಸ್ಟಾರ್ ಪ್ರಚಾರಕರು ಬೇಕಿಲ್ಲ. ನಮ್ಮ ಪಕ್ಷದಲ್ಲಿ ಪ್ರಜೆಗಳೇ ಸ್ಟಾರ್‍ಗಳು. ಮಾಧ್ಯಮದವರ ಮೂಲಕ ನಮ್ಮ ವಿಚಾರಗಳನ್ನು ಜನರಿಗೆ ತಲುಪಲು ಹೊರಟಿದ್ದೇವೆಯೇ ಹೊರತು ಯಾವುದೇ ಜಾಥಾ ಮತ್ತು ಸಮಾವೇಶಗಳಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಆಶಾರಾಣಿ ಉಪಸ್ಥಿತರಿದ್ದರು.

Translate »