ಇಗ್ನೋ ಪ್ರಾಂತೀಯ ನಿರ್ದೇಶಕರಾಗಿ ಜಿ.ಹೆಚ್.ಇಮ್ರಾಪೂರ ಅಧಿಕಾರ ಸ್ವೀಕಾರ
ಮೈಸೂರು

ಇಗ್ನೋ ಪ್ರಾಂತೀಯ ನಿರ್ದೇಶಕರಾಗಿ ಜಿ.ಹೆಚ್.ಇಮ್ರಾಪೂರ ಅಧಿಕಾರ ಸ್ವೀಕಾರ

April 2, 2019

ಮೈಸೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ (ಇಗ್ನೋ) ಬೆಂಗಳೂರು ಪ್ರಾದೇಶಿಕ ಕೇಂದ್ರಕ್ಕೆ ಜಿ.ಹೆಚ್.ಇಮ್ರಾಪೂರ ಅವರು ಪ್ರಾಂತೀಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.ಗದಗ ಜಿಲ್ಲೆ, ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದವರಾದ ಜಿ.ಹೆಚ್. ಇಮ್ರಾಪೂರ ಅವರು ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಸೈನ್ಸ್ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ ಜೊತೆಗೆ ಗಣಿತಶಾಸ್ತ್ರದಲ್ಲಿ ವ್ಯಾಸಂಗ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಹೊಸ ದಿಲ್ಲಿ ವಿಶ್ವವಿದ್ಯಾ ನಿಲಯದಿಂದ ಸ್ನಾತಕೋತ್ತರ ಅಂತರ ಶಿಕ್ಷಣ ಪದವಿ ಹಾಗೂ ಮುಂಬೈ ವಿವಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಎಂ.ಫಿಲ್ ಪದವಿ ಪಡೆದ ಪ್ರಥಮ ಕನ್ನಡಿಗರಿದ್ದಾರೆ.

Translate »