ಕ್ರೆಸ್ಟಾ ಸ್ಪರ್ಧೆಯ ವಿಜೇತರು
ಮೈಸೂರು

ಕ್ರೆಸ್ಟಾ ಸ್ಪರ್ಧೆಯ ವಿಜೇತರು

April 2, 2019

ಮೈಸೂರು: ಬೆಳೆಯುತ್ತಿರುವ ಯುವಕರು ತಮ್ಮ ಜೀವನದಲ್ಲಿ ಹಲವು ಬದಲಾವಣೆಗಳ ಮೂಲಕ ಮುನ್ನುಗ್ಗಿದ್ದರೆ ಅದು ಅವರ ಭವಿಷ್ಯವನ್ನು ವ್ಯಾಖ್ಯಾನಿಸುತ್ತದೆ. ವಿನೂತನ ಚಿಂತನಾ ಮಾರ್ಗ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ ಸುದೀರ್ಘ ಅವಧಿಯ ಜೀವನವನ್ನು ಉತ್ತಮವಾಗಿ ರೂಪಿಸುತ್ತದೆ. ಇದನ್ನು ಅರಿತ ಕ್ರೆಸ್ಟಾ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್ ಅದಕ್ಕಾಗಿ ಎಸ್‍ಕೆಪಡೆ ಎಂಬ ವಿನೂತನ ಕಾರ್ಯಕ್ರಮ ವನ್ನು ಆಯೋಜಿಸಿತ್ತು. ಮೈಸೂರಿನ ಅನೇಕ ಕಾಲೇಜುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವಿದ್ಯಾರ್ಥಿಗಳ ವಿನೂತನ ಕೌಶಲಗಳನ್ನು ಪ್ರದರ್ಶಿಸಿದವು.

ಎರಡು ದಿನಗಳ ಕಾರ್ಯಕ್ರಮ ನಿರಂತರವಾಗಿ 36 ಗಂಟೆಗಳ ಕಾಲ ನಡೆಯಿತು. ಎನ್‍ಪಿಎಸ್ ಶಾಲೆಯ ಮೊಹಮ್ಮದ್ ಸಲ್ಮಾನ್ ಮತ್ತು ಸ್ಕಂದನ್.ಯು.ಕೆ ಭೀಮಬಲದ ಟೈಟಲ್ ಮುಡಿಗೇರಿಸಿಕೊಂಡರು. ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್‍ನ ವರುಣ್.ಎಂ.ಡಿ ಟ್ರೇಟರ್ ಕ್ಯಾಟಗರಿಯಲ್ಲಿ ವಿಜೇತರಾದರು ಎಂದು ಕ್ರೆಸ್ಟಾ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ನ ಸಿಇಒ ಶಾಂಭವ್ ಶಾ, ಕ್ರೆಸ್ಟಾ ತಿಳಿಸಿಕೊಟ್ಟರು.

Translate »