`ಸಹಕಾರ-ಸುಸ್ಥಿರ ಅಭಿವೃದ್ಧಿ’ ಕುರಿತ  ಅಂತಾರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ
ಮೈಸೂರು

`ಸಹಕಾರ-ಸುಸ್ಥಿರ ಅಭಿವೃದ್ಧಿ’ ಕುರಿತ ಅಂತಾರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ

April 2, 2019

ಮೈಸೂರು: ಕರ್ನಾ ಟಕ ಸ್ಟೇಟ್ ಸೌಹಾರ್ದ ಫೆಡರಲ್ ಕೋ-ಆಪರೇಟಿವ್ ಲಿಮಿಟೆಡ್, ಯೂನಿವ ರ್ಸಿಟಿ ಆಫ್ ಪೊಟೆನ್ಷಿಯಲ್ ಫಾರ್ ಎಕ್ಸಲೆನ್ಸ್ ಸಹಯೋಗದಲ್ಲಿ ಮೈಸೂರು ವಿವಿಯ ಥರ್ಡ್ ಸೆಕ್ಟರ್ ರೀಸರ್ಚ್ ರೀಸೋರ್ಸ್ ಸೆಂಟರ್ ವತಿಯಿಂದ ಮೈಸೂರು ವಿವಿ ವಿಜ್ಞಾನ ಭವನ ಸಭಾಂಗಣದಲ್ಲಿ ಸೋಮವಾರ `ಸಹಕಾರ ಮತ್ತು ಸುಸ್ಥಿರ ಅಭಿವೃದ್ಧಿ’ ಕುರಿತ ಅಂತಾ ರಾಷ್ಟ್ರೀಯ ಕಾರ್ಯಾಗಾರ ನಡೆಯಿತು.

ಇರಾನ್, ಯೆಮನ್, ಅಫ್ಘಾನಿಸ್ತಾನ, ಭಾರತ ಸೇರಿದಂತೆ 65 ಮಂದಿ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಕಾರ್ಯಾಗಾರಕ್ಕೆ ಮೈಸೂರು ವಿವಿ ಕುಲ ಪತಿ ಪ್ರೊ.ಜಿ.ಹೇಮಂತಕುಮಾರ್ ದೀಪ ಬೆಳಗಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಜಾಗತಿಕ ಮೆಚ್ಚುಗೆ ಪಡೆದ ವಿದ್ವಾಂಸರು ಮತ್ತು ಸಹ ಕಾರ ಚಳವಳಿಯ ನಾಯಕರನ್ನು ಒಳಗೊಂ ಡಂತೆ ರೂಪಿಸಿರುವ ಕಾರ್ಯಾಗಾರದಲ್ಲಿ ಸಂಶೋಧಕರು ಬಹಳಷ್ಟು ಕಲಿಯಲು ಅವಕಾಶವಿದೆ ಎಂದರು. ಆಸ್ಟ್ರೇಲಿಯಾದ ನ್ಯೂಕೇಸ್ಟಲ್ ವಿಶ್ವವಿದ್ಯಾನಿಲಯದ ಪ್ರೊ. ಮಾರಿಸ್ ಅಲ್ಟಮಾನ್, ಏಷಿಯಾ ಫೆಸಿಫಿಕ್‍ನ ಇಂಟರ್ ನ್ಯಾಷನಲ್ ಕೋ-ಆಪರೇಟಿವ್ ಅಲಿಯನ್ಸ್‍ನ ಪ್ರಾದೇಶಿಕ ನಿರ್ದೇಶಕ ಬಾಲು ಐಯ್ಯರ್, ಆಸ್ಟ್ರೇಲಿಯಾದ ನ್ಯೂಕೇಸ್ಟಲ್ ವಿವಿಯ ಪ್ರೊ. ಆಂತೊಣಿ ಜೆನ್ಸನ್, ಜಪಾ ನಿನ ಹೊಸಿಯ್ ವಿವಿಯ ಪ್ರೊ.ಅಕಿರಾ ಕುರಿಮೊಟೊ, ರಾಬ್ಬಿ ತುಳಸ್ ಅವರು ತಮ್ಮ ವಿಚಾರಗಳನ್ನು ಮಂಡಿಸಿದರು. ಪ್ಲಾನಿಂಗ್, ಮಾನಿಟರಿಂಗ್ ಅಂಡ್ ಇವಾಲ್ಯುಯೇ ಷನ್ ಬೋರ್ಡ್ (ಪಿಎಂಇಬಿ) ನಿರ್ದೇಶಕ ಪ್ರೊ.ಯಶವಂತ್ ಡೋಂಗ್ರೆ, ಪ್ರೊ.ಎಂ. ಇಂದಿರಾ, ಪ್ರೊ.ರಶ್ಮಿ ಅರಸ್ ಉಪಸ್ಥಿತರಿದ್ದರು.

Translate »