ಹಿರಿಯ ರಂಗಕರ್ಮಿ ಎಸ್.ಮಾಲತಿ  ನಿಧನಕ್ಕೆ ರಂಗಾಯಣ ನಿರ್ದೇಶಕಿ ಸಂತಾಪ
ಮೈಸೂರು

ಹಿರಿಯ ರಂಗಕರ್ಮಿ ಎಸ್.ಮಾಲತಿ ನಿಧನಕ್ಕೆ ರಂಗಾಯಣ ನಿರ್ದೇಶಕಿ ಸಂತಾಪ

April 2, 2019

ಮೈಸೂರು: ಹಿರಿಯ ರಂಗಕರ್ಮಿ ಎಸ್.ಮಾಲತಿ ಅವರ ನಿಧನಕ್ಕೆ ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಂ ಸಂತಾಪ ವ್ಯಕ್ತಪಡಿಸಿದ್ದಾರೆ. ರಂಗಭೂಮಿಯನ್ನು ತನ್ನದಾಗಿಸಿ ಕೊಳ್ಳುವ ಮಹಿಳೆಯರೇ ಕಡಿಮೆ. ಅಂಥದ್ದರಲ್ಲಿ ದಿಟ್ಟ ರಂಗ ಹೆಜ್ಜೆಯನ್ನಿಡುತ್ತಾ ರಾಜ್ಯಾದ್ಯಂತ ನಾಟಕ ಸಂಘಗಳನ್ನು ಕಟ್ಟುತ್ತಾ, ನಾಟಕ ನಿರ್ದೇಶನ ಮಾಡುತ್ತಾ, ಕತೆ, ನಾಟಕ, ವಿಮರ್ಶೆ ಗಳನ್ನು ಬರೆಯುತ್ತಾ, ಅಭಿನಯ ಕಲಿಸುತ್ತಾ ರಂಗಭೂಮಿಯನ್ನು ತಮ್ಮದಾಗಿಸಿಕೊಳ್ಳುವ ಮಹಿಳೆಯರಿಗೆ ಪ್ರೇರಣೆಯಾಗಿ ಮಾರ್ಗ ದರ್ಶನ ನೀಡುತ್ತಿದ್ದರು. ಎಸ್.ಮಾಲತಿಯವರ ನಿಧನದಿಂದ ರಂಗಾಯಣಕ್ಕಷ್ಟೇ ಅಲ್ಲ. ಇಡೀ ಕರ್ನಾಟಕ ರಂಗಭೂಮಿಗೆ ದೊಡ್ಡ ಆಘಾತ ಮತ್ತು ನಷ್ಟ ಉಂಟಾಗಿದೆ. ಅಂತಹ ಸ್ತ್ರೀ ಚೇತನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Translate »