ಕುಟುಂಬ ರಾಜಕೀಯ ಕೊನೆಗೊಳಿಸಿ: ಶಾಸಕ ಪ್ರೀತಮ್ ಗೌಡ
ಹಾಸನ

ಕುಟುಂಬ ರಾಜಕೀಯ ಕೊನೆಗೊಳಿಸಿ: ಶಾಸಕ ಪ್ರೀತಮ್ ಗೌಡ

April 2, 2019

ಸಕಲೇಶಪುರ: ಜಿಲ್ಲೆಯಲ್ಲಿ ಕುಟುಂಬ ರಾಜಕೀಯವನ್ನು ಕೊನೆಗೊಳಿಸುವುದಕ್ಕೆ ಸುವರ್ಣ ಅವಕಾಶ ಸಿಕ್ಕಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ಪಕ್ಷದ ಪರ ಕಾರ್ಯನಿರ್ವಹಿಸಬೇಕೆಂದು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಗೌಡ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್‍ನಲ್ಲಿ ಆಯೋ ಜಿಸಲಾಗಿದ್ದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಜೆಡಿ ಎಸ್ ಪಕ್ಷ ಬಾರಿ ಅನ್ಯಾಯ ಮಾಡಿದ್ದು 6 ಬಾರಿ ಶಾಸಕರಾಗಿರುವ ಎಚ್.ಕೆ ಕುಮಾರ ಸ್ವಾಮಿರವರಿಗೆ ಸಚಿವ ಸ್ಥಾನ ನೀಡದೆ ವಂಚಿಸ ಲಾಗಿದೆ. ರೇವಣ್ಣವರಿಗೆ ಸಚಿವ ಸ್ಥಾನ ನೀಡುವ ಬದಲು ಒಬ್ಬ ದಲಿತ ಶಾಸಕ ರಿಗೆ ನೀಡಬಹುದಿ ತ್ತಲ್ಲ ಎಂದು ಜಿಲ್ಲೆಯ ದಲಿತ ನಾಯಕರು ಪ್ರಶ್ನೆ ಮಾಡಬೇಕು, ಜಿಲ್ಲೆಯಲ್ಲಿ ದಲಿತ ಸಮುದಾಯದ ನಾಯ ಕರನ್ನು ತುಳಿಯುತ್ತಿರುವುದಕ್ಕೆ ಇದೇ ಉದಾ ಹರಣೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಎರಡನೇ ಹಂತದ ನಾಯಕರ ಹಾಗೂ ಕಾರ್ಯಕರ್ತರ ಉಳಿವಿಗಾಗಿ ಈ ಬಾರಿ ಜೆಡಿಎಸ್ ಪಕ್ಷವನ್ನು ಸೋಲಿಸಲು ಎಲ್ಲರೂ ಒಗ್ಗೂಡಬೇಕಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಸಹ ಈ ಬಾರಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದು ದೇಶದ ಉಳಿವಿಗಾಗಿ ಪ್ರಧಾನಿ ನರೇಂದ್ರಮೋದಿ ಮತ್ತೊಮ್ಮೆ ಆಯ್ಕೆಯಾಗಲು ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ನಾರ್ವೆ ಸೋಮಶೇಖರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನವಿಲೆ ಅಣಪ್ಪ, ಅಲೂರು ಮಂಡಲ ಅಧ್ಯಕ್ಷ ಲೊಕೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಾಗೇಶ್, ಅಮಿತ್ ಶೆಟ್ಟಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿಮೆಂಟ್ ಮಂಜುನಾಥ್, ಉದ್ಯಮಿ ಉದಯ್ ಗೌಡ ಮುಂತಾದವರು ಹಾಜರಿದ್ದರು.

Translate »