ಎ.ಮಂಜು ಅವರಿಂದ ಕಾಂಗ್ರೆಸ್ಸಿಗರ ಸ್ವಾಭಿಮಾನಕ್ಕೆ ಧಕ್ಕೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ
ಹಾಸನ

ಎ.ಮಂಜು ಅವರಿಂದ ಕಾಂಗ್ರೆಸ್ಸಿಗರ ಸ್ವಾಭಿಮಾನಕ್ಕೆ ಧಕ್ಕೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ

April 2, 2019

ಅರಸೀಕೆರೆ: ರಾಜ್ಯದಲ್ಲಿ ಎರಡು ಪಕ್ಷಗಳು ಒಂದಾಗಿ, ಒಬ್ಬ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಜಾತ್ಯಾತೀತ ಸಿದ್ಧಾಂತ ಮೇಲೆ ಲೋಕಸಭಾ ಚುನಾವಣೆ ಕಣಕ್ಕೆ ನಿಂತಿರುವ ನನಗೆ ಅರಸೀಕೆರೆ ಕ್ಷೇತ್ರದ ಜನತೆ ಆಶೀರ್ವದಿಸ ಬೇಕು ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.

ತಾಲೂಕಿನ ಈಶಾನ್ಯ ಭಾಗವಾದ ಬೊಮ್ಮ ಸಮುದ್ರ ಗ್ರಾಮದಲ್ಲಿರುವ ಶ್ರೀ ಚನ್ನಬಸ ವೇಶ್ವರ ಸ್ವಾಮಿಗೆ ಸೋಮವಾರದಂದು ಪೂಜೆ ಸಲ್ಲಿಸಿ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಎ.ಮಂಜು ಹಾಗೂ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಹೆಸರನ್ನು ಪ್ರಸ್ತಾಪಿಸದೇ ಅವರುಗಳ ವಿರುದ್ಧ ಹರಿ ಹಾಯ್ದರು. ಕಾಂಗ್ರೆಸ್ಸಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಎ.ಮಂಜು ಮಾಡಿ ದ್ದಾರೆ. ಈ ಗಂಭೀರ ವಿಚಾರ ಹಾಸನ ಜಿಲ್ಲೆಯ ಕಾಂಗ್ರೇಸ್ ನಾಯಕರಿಗೆ ಸದಾ ನೆನಪಿರಬೇಕು. ಸಂವಿಧಾನ ಸುಡುತ್ತೇನೆ ಎನ್ನುವ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಜನಮನ್ನಣೆ ಸಿಗುವುದಿಲ್ಲ ಎಂದು ಅರಿವಿ ದ್ದರೂ ಈ ಬಾರಿಯ ಚುನಾವಣೆಯಲ್ಲಿ ದೊಂಬರಾಟ ಮಾಡುತ್ತಿದ್ದಾರೆ ಎಂದರು.

ಇವರಿಬ್ಬರಿಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ರಾಜಕೀಯ ಅನುಭವ ದಷ್ಟು ವಯಸ್ಸಾಗಿಲ್ಲ. ಕಾಂಗ್ರೆಸ್‍ನವರಿಗೆ ಸ್ವಾಭಿಮಾನ ಇದೆ. ನಮ್ಮನ್ನು ಸಮಾನ ವಾಗಿ ಕಾಣಿ ಎಂದು ಹೇಳಿದ ಜಿ.ಪಂ ಸದಸ್ಯ ಶಿವಪ್ಪರ ಮಾತಿಗೆ ವೇದಿಕೆಯಲ್ಲೆ ತಿರುಗೇಟು ಕೊಟ್ಟ ಪ್ರಜ್ವಲ್ ರೇವಣ್ಣ ನಿಮ್ಮ ಪಕ್ಷದಲ್ಲೇ ಇದ್ದು ನಿಮ್ಮ ಪಕ್ಷದಲ್ಲೇ ಬೆಳೆದು ಈಗ ನಿಮಗೆ ದ್ರೋಹ ಮಾಡಿದ ಮಂಜು ಕೋಮುವಾದಿ ಪಕ್ಷಕ್ಕೆ ಸೇರಿದ್ದಾರೆ. ಅದ ಕ್ಕಿಂತ ನಾವು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಯುಂಟು ಮಾಡಿದ್ದೀವಾ? ಎಂದು ತಿರುಗಿ ಪ್ರಶ್ನೆ ಮಾಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತ ನಾಡಿ, ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ ನಿವಾರಣೆ ಮಾಡುತ್ತೇನೆ ಎಂದು ಬೊಬ್ಬಿಡುತ್ತಿದ್ದ ಮೋದಿ ನೇತೃತ್ವದ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಕಿಂಚಿತ್ತಾ ದರೂ ಗಮನ ಹರಿಸದೇ ಮೋಸ ಮಾಡಿ ದ್ದಾರೆ. ಗಂಗಾ ನದಿಯನ್ನು ಕೃಷ್ಣ ನದಿ ಯೊಂದಿಗೆ ಜೋಡಣೆ ಮಾಡುತ್ತೇನೆ ಎಂದ ಅಂದಿನ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಕನಸನ್ನು ಯಾಕೆ ಇನ್ನೂ ಪ್ರಾರಂಭಿಸಿಲ್ಲ ಎಂಬುದನ್ನು ಬಹಿರಂಗ ಪಡಿಸಬೇಕು. ನದಿ ಜೋಡಣೆಯನ್ನು ಅನು ಷ್ಠಾನಕ್ಕೆ ತಂದಲ್ಲಿ ದೇಶದಲ್ಲಿ ಇರುವ ಬರ ಗಾಲ, ಅಂತರ್ಜಲ ಸಮಸ್ಯೆಗೆ ಪರಿಹಾರ ಸಿಕ್ಕಿ ರೈತಾಪಿ ಜನರು ನಿಟ್ಟುಸಿರು ಬಿಡಲಿ ದ್ದಾರೆ. ಕಾರವಾರದ ಸಂಸದ ಅನಂತ್ ಹೆಗ್ಗಡೆ ಈ ದೇಶದ ಸಂವಿಧಾನವನ್ನು ಬದ ಲಾಯಿಸುತ್ತೇವೆ ಎಂದು ಹೇಳಿಕೆ ನೀಡಿ ದ್ದರೂ, ಮುಂದಿನ ಬಾರಿ ಇದೇ ಮೋದಿ ನೇತೃತ್ವದ ಅಧಿಕಾರಕ್ಕೆ ಬಂದಲ್ಲಿ ಸಂವಿ ಧಾನ ಬದಲಾವಣೆ ಮತ್ತು ದೀನ ದಲಿ ತರಿಗೆ ಅನ್ಯಾಯ ಮಾಡಲು ಹೇಸುವು ದಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೈಗೊಂಬೆಯಾಗಿರುವ ಮೋದಿ ಕೇಂದ್ರ ಸರ್ಕಾರ ಬೇಕಾ ಎಂಬುದನ್ನು ಮತ ದಾರರು ಆಲೋಚನೆ ಮಾಡಬೇಕು. ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಎಲ್ಲಾ ಜಾತಿ ಮತ ಪಂಥಗಳಿಗೆ ಸ್ಥಾನಗಳನ್ನು ನೀಡಿ ಗೌರವಿಸ ಲಾಗುತ್ತಿದೆ. ಅದನ್ನು ಕಡಿವಾಣ ಹಾಕಲು ಪ್ರಯತ್ನಿಸುತ್ತಿರುವ ಬಿಜೆಪಿ ಕೇಂದ್ರ ಸರ್ಕಾರಕ್ಕೆ ಅವಕಾಶವನ್ನು ನೀಡಬಾರದು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಅಭ್ಯ ರ್ಥಿಯಾದ ನಮ್ಮ ಹಾಸನ ಲೋಕಸಭಾ ಚುನಾವಣೆ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನವರಿಗೆ ಆಶೀರ್ವದಿಸಿ ಪ್ರಾದೇಶಿಕ ಪಕ್ಷ ವಾದ ಜೆಡಿಎಸ್ ಮತ್ತು ರಾಷ್ಟ್ರೀಯ ಪಕ್ಷದ ಕಾಂಗ್ರೇಸ್ ಪಕ್ಷಗಳ ಮೈತ್ರಿಗೆ ಶಕ್ತಿಯನ್ನು ನೀಡಬೇಕು. ಸಾಮರಸ್ಯ ಎನ್ನುವುದು ಏನಾದರೂ ಇದ್ದರೆ ಅದು ನಮ್ಮ ಮೈತ್ರಿ ಪಕ್ಷಗಳಲ್ಲಿ ಮಾತ್ರ ಕಾಣಬಹುದು. ರೈತ ವರ್ಗದವರು ಮತ್ತು ಶ್ರಮಿಕ ವರ್ಗದವರು ಎಂದೆಂದಿಗೂ ಬಿಜೆಪಿಗೆ ಮತವನ್ನು ಹಾಕುವುದಿಲ್ಲ ಎಂದರು.

ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಜಿ.ಪಂ ಸದಸ್ಯ ಶಿವಪ್ಪ, ಬಿಳಿಚೌಡಯ್ಯ, ಮಾಡಾಳು ಸ್ವಾಮಿ ಮಾತನಾಡಿದರು. ಕಾಂಗೈ-ಜೆಡಿಎಸ್ ಮುಖಂಡರಾದ ಶಶಿ ಧರ್, ಗಂಡಸಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೆಟ್ರೋಬಾಬು, ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿ ವಾಸ್, ಮಲ್ಲೇನಹಳ್ಲಿ ಶಿವಶಂಕರ್, ಗಂಜಿ ಗೆರೆ ಚಂದ್ರಶೇಖರ್, ಬಾಣಾವರ ಶ್ರೀನಿ ವಾಸ, ಶಿವಮೂರ್ತಿ, ಧರ್ಮಶೇಖರ್, ಧರ್ಮೇಶ್, ನಗದರಸಭೆ ಸದಸ್ಯರಾದ ಜಿ.ಟಿ.ಗಣೇಶ್, ವೆಂಕಟಮುನಿ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

Translate »