ಈ ಬಾರಿ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು: ಚಿತ್ರನಟಿ ತಾರಾ ವಿಶ್ವಾಸಈ ಬಾರಿ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು: ಚಿತ್ರನಟಿ ತಾರಾ ವಿಶ್ವಾಸ
ಹಾಸನ

ಈ ಬಾರಿ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು: ಚಿತ್ರನಟಿ ತಾರಾ ವಿಶ್ವಾಸಈ ಬಾರಿ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು: ಚಿತ್ರನಟಿ ತಾರಾ ವಿಶ್ವಾಸ

April 2, 2019

ಹಾಸನ: ಜಿಲ್ಲೆಯಲ್ಲಿ ಈ ಬಾರಿ ಬದಲಾ ವಣೆಯ ಗಾಳಿ ಬೀಸಿದ್ದು, ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಎ. ಮಂಜು ಗೆಲುವು ಸಾಧಿಸಲಿದ್ದಾರೆ ಎಂದು ಚಲನ ಚಿತ್ರ ನಟಿ ತಾರಾ ವಿಶ್ವಾಸ ವ್ಯಕ್ತಪಡಿಸಿದರು.

ಅರಕಲಗೂಡು, ಹಳ್ಳಿ ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು, ಹಾಸನದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿ, ಹಾಸನದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಲಿದೆ. ಮೋದಿ ಅಲೆ ಕಡಿಮೆಯಾಗಿದೆ ಅನ್ನೋದು ಸುಳ್ಳು ಹೇಳಿಕೆಗಳಾಗಿದ್ದು, ಕರ್ನಾಟಕದಲ್ಲಿ ಡಾ.ರಾಜ ಕುಮಾರ್ ಹೆಸರಿನಲ್ಲಿ ಹೇಗೆ ಶಕ್ತಿ ಇದೆ. ಅದೇ ರೀತಿ ದೇಶದಲ್ಲಿ ಮೋದಿಯವರ ಹೆಸರಲ್ಲಿ ಮೋಡಿ ಇದೆ ಎಂದರು. ಹಾಸನ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಪಡೆಯಲಿದ್ದು, ಯಡಿ ಯೂರಪ್ಪ ಅವರು ಮತ್ತೆ ಸಿಎಂ ಆಗೋದು ನನಗೂ ಸಂತೋ ಷದ ವಿಷಯವಾಗಿದೆ ಎಂದು ಭರವಸೆ ನುಡಿದರು. ದೇಶದ ಸರ್ವಾಂಗೀಣ ಅಭಿವೃದ್ಧಿಗೆ 5 ವರ್ಷ ಸಾಕಾಗುವುದಿಲ್ಲ. ಮತ್ತೆ ಐದು ವರ್ಷ ಅವಕಾಶ ಕೊಡ ಬೇಕು. ಹಾಗಾಗಿ ನಾವು ಮೋದಿ ಹೆಸರನ್ನು ಎಲ್ಲೆಡೆ ಚಲಾವಣೆ ಮಾಡುತ್ತಿದ್ದೇವೆ. ನರೇಂದ್ರ ಮೋದಿ ಅಭಿವೃದ್ಧಿ ಕೆಲಸಗಳು ಜನರ ಮನದಲ್ಲಿ ಇದ್ದು, ಮತ್ತೆ ಪ್ರಧಾನಿಯಾಗುವುದು ಸತ್ಯ.

ನಮ್ಮ ವರಿಷ್ಠರು ಸೂಚನೆ ಕೊಟ್ಟರೆ ಮಂಡ್ಯದಲ್ಲಿ ಸುಮ ಲತಾ ಪರ ಪ್ರಚಾರ ಮಾಡುವೆ! ನನ್ನ ಪಕ್ಷ ಯಾರ ಪರ ಪ್ರಚಾರ ಮಾಡಿ ಅನ್ನುತ್ತೋ ಹಾಗೆ ಮಾಡುವೆ. ಸುಮ ಲತಾ, ನಿಖಿಲ್ ಇಬ್ಬರೂ ಸಿನಿಮಾ ಕ್ಷೇತ್ರದವರೇ ಆಗಿದ್ದಾರೆ ಎಂದರು. ಇದು ದೇಶದ ಚುನಾವಣೆ, ಮೋದಿ ಅವರ ಮರು ಆಯ್ಕೆಯನ್ನು ಅನೇಕರು ಬಯಸಿದ್ದಾರೆ ಎಂದು ಪ್ರಧಾನಿಯ ನಾಮಬಲ ಗುಣಗಾನವನ್ನು ಚಿತ್ರನಟಿ ತಾರಾ ಅವರು ಮಾಡಿದರು. ಅನಂತ್ ಕುಮಾರ್ ಪತ್ನಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ನೋ ಕಾಮೆಂಟ್ ಎಂದು ಹೇಳುವ ಮೂಲಕ ಪತ್ರಕರ್ತರ ಪ್ರಶ್ನೆಗೆ ವಿರಾಮ ಹೇಳಿದರು.

Translate »