ತಮ್ಮ ಕುಟುಂಬದ ಅಭಿವೃದ್ಧಿಗಾಗಿ  ದೇವೇಗೌಡರಿಂದ ಹೊಂದಾಣಿಕೆ ರಾಜಕೀಯ ಬಿಜೆಪಿ ಅಭ್ಯರ್ಥಿ ಎ.ಮಂಜು ಕಿಡಿ
ಹಾಸನ

ತಮ್ಮ ಕುಟುಂಬದ ಅಭಿವೃದ್ಧಿಗಾಗಿ ದೇವೇಗೌಡರಿಂದ ಹೊಂದಾಣಿಕೆ ರಾಜಕೀಯ ಬಿಜೆಪಿ ಅಭ್ಯರ್ಥಿ ಎ.ಮಂಜು ಕಿಡಿ

April 2, 2019

ಅರಕಲಗೂಡು: ಕುಟುಂಬದವರ ರಾಜಕೀಯ ಉನ್ನ ತಿಗೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಅನುಭ ವಿಸಿದ ಮೇಲೆ ದೂರ ತಳ್ಳುವ ಕುತಂತ್ರ ಗಾರಿಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರದಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ಟೀಕಿಸಿದರು.

ಸೋಮವಾರ ಪಟ್ಟಣದ ಚನ್ನ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸ್ವಂತ ಶಕ್ತಿಯಿಂದ ದೇವೇಗೌಡರು ರಾಜಕೀಯ ಅಧಿಕಾರ ಹೊಂದಿಲ್ಲ. ಅದು ಹೊಂದಾಣಿಕೆಯಿಂದ ಮಾತ್ರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಬೆಂಬಲದಿಂದ ದೇವೇಗೌಡರು ಪ್ರಧಾನಿಯಾದರು. ರಾಜ್ಯದಲ್ಲಿಯೂ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮಗ ರೇವಣ್ಣನನ್ನು ಮಂತ್ರಿ ಮಾಡಿದರು. ಇದರ ಮುಂದುವರಿದ ಭಾಗವಾಗಿ ಮತ್ತೋರ್ವ ಮಗ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿಸಿದ್ದಾರೆ. ರೇವಣ್ಣ ಪುನಃ ಮಂತ್ರಿಯಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಮೊಮ್ಮಕ್ಕಳನ್ನು ಹಾಸನ ಮತ್ತು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿ ಮೂರನೇ ತಲೆಮಾರಿನ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಇಡೀ ಕುಟುಂಬವನ್ನು ರಾಜಕಾರಣಕ್ಕೆ ತರುತ್ತಿರುವುದು ಸಮಾಜ ಸೇವೆ ಮಾಡಲು ಅಲ್ಲ. ಅದು ಕುಟುಂಬ ರಾಜಕಾರಣದ ವಿಸ್ತರಣೆಯಾ ಗಿದೆ ಎಂದು ವ್ಯಂಗ್ಯವಾಡಿದ ಅವರು, ಪ್ರಜ್ವಲ್ ರೇವಣ್ಣಗೆ 10 ಹಸು ಗಳಿಂದ 9 ಕೋಟಿ ಆದಾಯ ಬಂದಿದೆ ಎಂದು ಅಫಿ ಡವಿಟ್‍ನಲ್ಲಿ ಸಲ್ಲಿಸಿದ್ದಾರೆ. ಕೇವಲ ಹತ್ತು ಹಸುಗಳಿಂದ 9 ಕೋಟಿ ರೂ. ಆದಾಯ ಬರುವ ಮಾರ್ಗವನ್ನು ಸಾರ್ವಜನಿಕವಾಗಿ ಪ್ರಜ್ವಲ್ ರೇವಣ್ಣ ರೈತರಿಗೆ ತಿಳಿಸಿಕೊಟ್ಟರೇ, ನಮ್ಮ ಬಡ ರೈತರು ಕೂಡ ಆರ್ಥಿಕ ವಾಗಿ ಸಬಲರಾಗಲಿದ್ದಾರೆ. ಈ ಕುರಿತು ಹೋರಾಟ ಮುಂದುವರಿಸ ಲಾಗುವುದು ಎಂದು ಮಂಜು ಸವಾಲು ಹಾಕಿದರು.

ವಿಧಾನ ಪರಿಷತ್ ಸದಸ್ಯೆ ತಾರಾ ಮಾತನಾಡಿ, ಇಡೀ ಪ್ರಪಂಚವೇ ಮೋದಿಯವರನ್ನು ಎದುರು ನೋಡುತ್ತಿದೆ. ಇದಕ್ಕೆ ಕಾರಣ ಅವರು ಕಳೆದ ಐದು ವರ್ಷಗಳಲ್ಲಿ ಅನುಷ್ಠಾನಕ್ಕೆ ತಂದ ಯೋಜನೆಗಳು ದೇಶದ ಅಭಿವೃದ್ಧಿ ಕಾರಣವಾಗಿದೆ. ರಾಷ್ಟ್ರ ಮತ್ತು ರಾಜ್ಯದಲ್ಲಿನ ರಾಜ ಕಾರಣದಲ್ಲಿ 3ಜಿ, 4ಜಿ ರಾಜಕಾರಣ ಆರಂಭಗೊಂಡಿದೆ. ಮುಂದೆ 5ಜಿ ಕೂಡ ಬರುವ ಸಾಧ್ಯತೆ ಇದೆ. ಇದಕ್ಕೆ ಯುವ ಸಮುದಾಯ ಅವಕಾಶ ಮಾಡಿಕೊಡಬಾರದು. ಮೊಬೈಲ್ ಬಳಕೆಯಲ್ಲಿ ಈ 3ಜಿ, 4ಜಿ ಇರಲಿ, ರಾಜಕಾರಣದಲ್ಲಿ ಸುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ನೆಹರು ಮತ್ತು ದೇವೇಗೌಡರ ಕುಟುಂಬದ ರಾಜಕಾರಣದ ಬೆಳವಣಿಗೆಯನ್ನು ಪರೋಕ್ಷವಾಗಿ ಟೀಕಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಪ್ರೀತಂಗೌಡ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ನವಿಲೆ ಅಣ್ಣಪ್ಪ, ತಾಪಂ ಸದಸ್ಯ ಮರೀಗೌಡ ಇತರರು ಉಪಸ್ಥಿತರಿದ್ದರು.

Translate »