ಚುನಾವಣಾ ಅಕ್ರಮಗಳ ಕಡಿವಾಣಕ್ಕೆ ಕಠಿಣ ಕ್ರಮಕೈಗೊಳ್ಳಲು ಡಿಸಿ ಸೂಚನೆ
ಹಾಸನ

ಚುನಾವಣಾ ಅಕ್ರಮಗಳ ಕಡಿವಾಣಕ್ಕೆ ಕಠಿಣ ಕ್ರಮಕೈಗೊಳ್ಳಲು ಡಿಸಿ ಸೂಚನೆ

April 2, 2019

ಹಾಸನ: ಲೋಕಸಭಾ ಚುನಾವಣೆ ಯಲ್ಲಿ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬೀಳಬೇಕು. ಅದಕ್ಕಾಗಿ ಮಾದರಿ ನೀತಿ ಸಂಹಿತೆ ಜಾರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾದರಿ ನೀತಿ ಸಂಹಿತೆ ಜಾರಿ ತಂಡವೂ ತಾಲೂಕುವಾರು ನೋಡಲ್ ಅಧಿಕಾರಿಗಳು, ಸಹಾಯಕ ಚುನಾ ವಣಾಧಿಕಾರಿಗಳು ಮತ್ತು ತಹಶೀಲ್ದಾರರ ಸಭೆ ನಡೆಸಿದ ಅವರು, ಚುನಾವಣಾ ಅಕ್ರಮಗಳ ಸ್ವರೂಪ ಬದಲಾಗುತ್ತಿದ್ದು, ಎಲ್ಲವನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕು ಎಂದರು.

ಚೆಕ್‍ಪೋಸ್ಟ್‍ಗಳಲ್ಲಿನ ತಪಾಸಣೆ ತೀವ್ರಗೊಳ್ಳ ಬೇಕು, ವಾಹನ ದಟ್ಟಣೆಯನ್ನು ಗಮನದಲ್ಲಿರಿಸಿ ಕೊಂಡು ಎಲ್ಲಾ ವಾಹನಗಳನ್ನು ತಪಾಸಣೆ ಮಾಡ ಬೇಕು. ಟ್ರಕ್, ಲಾರಿ, ಪೊಲೀಸ್ ವಾಹನಗಳನ್ನು ತಪಾಸಣೆಗೊಳಪಡಿಸಬೇಕು. ಆದರೆ ಆಂಬುಲೆನ್ಸ್ ಗಳಲ್ಲಿ ರೋಗಿಗಳ ಪರಿಸ್ಥಿತಿ ಗಮನದಲ್ಲಿ ಇರಿಸಿ ಕೊಂಡು ವಿಶೇಷ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಚುನಾವಣಾ ಆಯೋಗ ನಿಗದಿಪಡಿಸಿರುವವ ರನ್ನು ಹೊರತಾಗಿ ಗಣ್ಯಾತಿ ಗಣ್ಯರಿಗೆ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಭದ್ರತಾ ವಾಹನ ಗಳನ್ನು ಒದಗಿಸುವ ಅಗತ್ಯವಿಲ್ಲ ಮತ್ತು ವಿವಿಐಪಿ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದರು.

ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ವೆಬ್‍ಕ್ಯಾಮರಾ ಅಳವಡಿಸಲಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ಗಂಟೆಗಳ ಕಾಲ ಅವುಗಳ ಚಟುವಟಿಕೆಗಳ ಬಗ್ಗೆ ನಿಗಾವಹಿಸಬೇಕು. ಇದಕ್ಕಾಗಿ ಈಗಾಗಲೇ ತಂಡವೊಂದನ್ನು ರಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

ಫ್ಲೈಯಿಂಗ್ ಸ್ಕ್ವಾಡ್, ಸ್ಪಾಟಿಕ್ ಮತ್ತು ಸರ್ವೆ ಲೆನ್ಸ್ ತಂಡಗಳು ತಮ್ಮ ಕರ್ತವ್ಯ ನಿರ್ವಹಣೆ ವೇಳೆ ವಿಶೇಷ ಜಾಗೃತಿ ಹೊಂದಿರಬೇಕು. ಸಹಾ ಯಕ ಚುನಾವಣಾಧಿಕಾರಿಗಳು ಪ್ರತಿದಿನ ಸಂಜೆ ಈ ತಂಡಗಳಿಗೆ ನಾಳಿನ ಸಂಚಾರ ಮಾರ್ಗ ಹಾಗೂ ಕಾರ್ಯಕ್ರಮಗಳ ಪಟ್ಟಿ ಸಿದ್ಧಪಡಿಸಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇರಲೇಬೇಕು. ಗ್ರಾಮ ಪಂಚಾಯಿತಿ ಪಿಡಿಓಗಳು ಇದನ್ನು ಖಾತರಿಪಡಿಸಬೇಕು. ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಆಯಾಯ ಮತಗಟ್ಟೆಗಳಲ್ಲಿ ಕಾಫಿ, ಟೀ, ಊಟ, ತಿಂಡಿಗಳ ಪೂರೈಕೆಯಾಗಬೇಕು. ಇದಕ್ಕಾಗಿ ಅಕ್ಷರ ದಾಸೋಹ ಅಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಅನುದಾನ ಬಿಡುಗಡೆ ಮಾಡ ಲಾಗುವುದು ಎಂದು ತಿಳಿಸಿದರು.

ಮದ್ಯ ಮಾರಾಟದ ಬಗ್ಗೆ ವಿಶೇಷ ನಿಗಾ: ಜಿಲ್ಲೆಯಾ ದ್ಯಂತ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟದ ಬಗ್ಗೆ ಹದ್ದಿನ ಕಣ್ಣು ಇರಿಸಬೇಕು. ಎಲ್ಲಾ ವಿದಧ ಪರವಾನಗಿಗಳಿಗೆ ವಿಧಿಸಿರುವ ಷರತ್ತುಗಳು ಕಡ್ಡಾಯ ವಾಗಿ ಪಾಲನೆಯಾಗಬೇಕು. ನಿಯಮ ಉಲ್ಲಂಘನೆ ಯಾಗುವ ಪ್ರಕರಣಗಳಲ್ಲಿ ಪರವಾನಗಿ ರದ್ದು ಪಡಿಸ ಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವೈನ್ ಸ್ಟೋರ್ ಮತ್ತು ಎಂಎಸ್‍ಐಎಲ್‍ನಲ್ಲಿ ಕೇವಲ ಮದ್ಯ ಪಾರ್ಸಲ್ ಮಾರಾಟ ಮಾಡ ಬಹುದು, ಅಲ್ಲಿಯೇ ಕುಡಿಯಲು ನೀಡುವಂತಿಲ್ಲ. ಬಾರ್‍ಗಳಲ್ಲಿ ಮದ್ಯ ಅಲ್ಲೇ ಮಾರಾಟ ಮಾಡ ಬೇಕಿದ್ದು, ಹೊರಗೆ ಪಾರ್ಸಲ್‍ಗಳನ್ನು ನೀಡಲು ಅವಕಾಶವಿಲ್ಲ. ಅದೇ ರೀತಿ ರೆಸಾರ್ಟ್ ಲಾಡ್ಜ್‍ಗಳಲ್ಲಿ ನಿರ್ದಿಷ್ಟ ನಿಯಮಗಳಿದ್ದು ಅದನ್ನು ಪಾಲಿಸಲೇ ಬೇಕು. ಮಾರಾಟ, ಎತ್ತುವಳಿ, ಸ್ಟಾಕ್ ವಹಿ, ರಶೀದಿ ಗಳು ತಾಳೆಯಾಗುವಂತಿರಬೇಕು. ಟೋಕನ್ ನೀಡಿ ಮದ್ಯ ಪಡೆಯುವ ಪ್ರಕಿಯೆಗಳ ಬಗ್ಗೆ ವಿಶೇಷ ನಿಗಾವಹಿಸಬೇಕು ಎಂದು ತಿಳಿಸಿದರು.

ಪೆಟ್ರೋಲ್ ಬಂಕ್‍ಗಳಲ್ಲಿ ಉಚಿತ ಅಥವಾ ಟೋಕನ್ ವ್ಯವಸ್ಥೆಯಲ್ಲಿ ಪೆಟ್ರೋಲ್ ಹಾಕುವುದು ವಾಣಿಜ್ಯ ಮಳಿಗೆಗಳಲ್ಲಿ ಗಿಫ್ಟ್ ನೀಡಿಕೆಗೆ ಕೂಪನ್ ಆಧಾರ ದಲ್ಲಿ ಸರಕು ನೀಡಿಕೆಗಳ ನಡೆಯಬಹುದು ಅದರ ಬಗ್ಗೆ ಎಚ್ಚರವಹಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿಗಳು ಮತ್ತು ತಹಶೀಲ್ದಾರರು ಎಲ್ಲಾ ಮತಗಟ್ಟೆಗಳ ಸುಸ್ಥಿತಿ ಬಗ್ಗೆ ಖಾತರಿ ನೀಡಬೇಕು. ಏ.4ರೊಳಗೆ ಲಿಖಿತ ವರದಿ ಸಲ್ಲಿಸಬೇಕು ಎಂದು ಹೇಳಿದರು.
ನಗದು ವ್ಯವಹಾರ ಹಾಗೂ ಹಣ ವರ್ಗಾವಣೆ ಬಗ್ಗೆ ಕಣ್ಗಾವಲು: ಎಲ್ಲಾ ಬ್ಯಾಂಕ್‍ಗಳಲ್ಲಿ 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿ ವಾಟು ಮತ್ತು ಹಣ ವರ್ಗಾವಣೆ ಬಗ್ಗೆ ಕಣ್ಗಾ ವಲು ವಹಿಸಬೇಕು. ಒಂದು ಖಾತೆಯಿಂದ ಹಲವು ಖಾತೆಗೆ ಹಣವರ್ಗಾವಣೆಯಾಗುತ್ತಿದ್ದರೆ ಅದನ್ನು ವರದಿ ಮಾಡಬೇಕು. ವಹಿವಾಟುಗಳೇನೂ ನಡೆ ಯದೇ ಇದ್ದರೆ ಆ ಬಗ್ಗೆಯೂ ಲಿಖಿತ ದೃಢೀ ಕರಣವನ್ನು ನೀಡಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.

ಸಿ. ವಿಜಿಲ್(VIGIL) ಬಗ್ಗೆ ಜಾಗೃತಿ ಮೂಡಿ ಸಲು ಸೂಚನೆ: ಇದೇ ವೇಳೆ ಜಿಲ್ಲಾ ಚುನಾವಣಾ ಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಸಿ.ವಿಜಿಲ್ ಆ್ಯಪ್‍ನ ಬಳಕೆ ಈ ವರೆಗೆ ಜಿಲ್ಲೆಯಲ್ಲಿ ಹೆಚ್ಚಿನ ದೂರು ದಾಖಲಾದರೂ ಪರಿಣಾಮಕಾರಿ ಯಾಗಿ ಆಗಿಲ್ಲ. ಅದರ ಸಮರ್ಪಕ ಸದ್ಬಳಕೆ ಬಗ್ಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಹೆಚ್ಚಿಸಬೇಕು. ಆಮೂಲಕ ಚುನಾವಣಾ ಅಕ್ರಮ ಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುವಂ ತಾಗಬೇಕು. ಹಾಗಾಗಿ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳಿಗೆ ಈ ಆ್ಯಪ್ ಬಳಕೆ ಬಗ್ಗೆ ತಿಳಿಸಿ, ಹಳ್ಳಿ ಗಳಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸುವಂತೆ ಉಪವಿಭಾಗಾಧಿಕಾರಿಗಳು ಮತ್ತು ತಹಶೀ ಲ್ದಾರರಿಗೆ ಸೂಚಿಸಿದರು. ಹೆದ್ದಾರಿ ಫಲಕಗಳ ಮೂಲಕವು ಪ್ರಚಾರ ನಡೆಸಲು ತಿಳಿಸಲಾಯಿತು.

ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ.ಎಲ್. ವೈಶಾಲಿ, ಪ್ರೆಬೆ ಷನರಿ ಐ.ಎ.ಎಸ್ ಅಧಿಕಾರಿ ಪ್ರಿಯಾಂಗ, ವಿವಿಧ ಸಮಿತಿಗಳ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಗಳು, ತಹಶೀಲ್ದಾರರು ಸಭೆಯಲ್ಲಿ ಹಾಜರಿದ್ದರು.

Translate »