ಮೈಸೂರು: ಅಪಘಾತ ಸಂಭವಿಸುವ ಮೈಸೂರಿನ ಆಯ್ದ `ಟಿ’ ಜಂಕ್ಷನ್‍ಗಳಲ್ಲಿ ಸಂಚಾರ ಪೊಲೀ ಸರು ಹಾಗೂ ಕೆಲ ಖಾಸಗಿ ಕಂಪನಿಗಳು ಅಳವಡಿಸಿರುವ ಕಾನ್ವೆಕ್ಸ್ ಕನ್ನಡಿಗಳು (ಉಬ್ಬು ಕನ್ನಡಿಗಳು-ತೀಕ್ಷ್ಣ ಪ್ರತಿಫಲಕ ಗಳು) ಅವಘಡಗಳನ್ನು ತಪ್ಪಿಸುತ್ತಿವೆ. ಮೂರು ದಾರಿಗಳು ಕೂಡುವ ಸ್ಥಳ ಗಳಲ್ಲಿ ಎಡ ಮತ್ತು ಬಲ ಬದಿ ಬರುವ ವಾಹನಗಳು ಕಾಣಿಸದೇ ಅಪಘಾತಕ್ಕೆ ಕಾರಣವಾಗುತ್ತದೆ. ದುರಂತಗಳನ್ನು ತಡೆ ಯಲು ಈ ಹಿಂದೆಯೇ ಸಂಚಾರ ಪೊಲೀಸರು ಸಾರ್ವಜನಿಕ ರಸ್ತೆಯ ಟಿ-ಜಂಕ್ಷನ್‍ಗಳು ಹಾಗೂ ಖಾಸಗಿ ಕಂಪನಿ ಗಳು ಮುಖ್ಯ ರಸ್ತೆಗೆ ಹೊಂದಿಕೊಂಡಂತಿ ರುವ…
ಸಮಾನತೆಗಾಗಿ ಮೀಸಲಾತಿ ಅವಶ್ಯ
February 28, 2019ಮೈಸೂರು: ಆಧು ನಿಕ ಭಾರತದ ಹೆಸರಿನಲ್ಲಿ ಮೀಸಲಾತಿ ಯನ್ನು ವಿರೋಧಿಸುವ ಜಾತಿ ಮತ್ಸರ ವಾದಿಗಳು ಶತಮಾನಗಳಿಂದ ಶೋಷ ಣೆಗೆ ಒಳಗಾಗಿರುವ ತಳ ಸಮುದಾಯ ವನ್ನು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಿಂದ ದೂರವಿಟ್ಟು ಚಾಕರಿಗೆ ಮಾತ್ರ ಬಳಸಿಕೊಳ್ಳುವ ಸಂಚು ನಡೆಸುತ್ತಿ ದ್ದಾರೆ ಎಂದು ಪ್ರಗತಿಪರ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ದೂರಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗವು ಹರ್ಮನ್ ಮೋಗ್ಲಿಂಗ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ `ಪ್ರಸಕ್ತ ಮೀಸ ಲಾತಿ ನೀತಿ, ಸಮಸ್ಯೆಗಳು…
ಮೈಸೂರಲ್ಲಿ ಭಾರೀ ಭದ್ರತೆ, ಕಟ್ಟೆಚ್ಚರ
February 28, 2019ಮೈಸೂರು: ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಿ, ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಿಂದ ಬಂದ ನಿರ್ದೇಶನದಂತೆ ಮಂಗಳವಾರ ಬೆಳಿಗ್ಗೆಯಿಂದಲೇ ರಾಜ್ಯದಾ ದ್ಯಂತ ಕಟ್ಟೆಚ್ಚರ ವಹಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನಿಗಾ ಇರಿಸಲಾಗುತ್ತಿದೆ. ಅದರಂತೆ ಮೈಸೂ ರಿನ ರೈಲು ನಿಲ್ದಾಣ, ಬಸ್ ಸ್ಟ್ಯಾಂಡ್ ಗಳು, ರೈಲ್ವೇ ವರ್ಕ್‍ಶಾಪ್, ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ವಾಣಿಜ್ಯ ಕೇಂದ್ರಗಳಾದ ದೇವರಾಜ…
ಮಾ.20ರಿಂದ ಮೈಸೂರು ರಂಗಾಯಣದಿಂದ ಮತ್ತೆ ರಾಮಾಯಣ ರಂಗ ಯಾತ್ರೆ
February 28, 2019ಮೈಸೂರು: ವೈಚಾರಿಕ ದೃಷ್ಟಿಕೋನದೊಂದಿಗೆ ಸಮಾನತೆ ಸಂದೇಶ ಸಾರಿರುವ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ರಂಗರೂಪ ಕೊಟ್ಟು ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿ 30 ಪ್ರದರ್ಶನ ನೀಡಿದ ರಂಗಾಯಣ ಇದೀಗ ಮತ್ತೊಮ್ಮೆ ರಾಮಾಯಣದ ರಂಗಯಾತ್ರೆಗೆ ಸಜ್ಜುಗೊಂಡಿದೆ. ರಾಷ್ಟ್ರಕವಿ ಕುವೆಂಪು ಅವರ `ಶ್ರೀರಾಮಾ ಯಣ ದರ್ಶನಂ’ ಮಹಾಕಾವ್ಯ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿ 50 ವರ್ಷಗಳು ಸಂದಿದ ಸ್ಮರ ಣಾರ್ಥ ಮೈಸೂರು ರಂಗಾಯಣ ವತಿಯಿಂದ `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ರಂಗದ ಸ್ಪರ್ಶ ನೀಡಲಾಗಿತ್ತು. ಆ ಮೂಲಕ ನಾಲ್ಕೂವರೆ ಗಂಟೆಗಳ…
ಗಡಿ ಕಾಯುವ ಯೋಧರು ದೇಶ ರಕ್ಷಿಸಿದರೆ.. ಸಫಾಯಿ ಕರ್ಮಚಾರಿ ಯೋಧರಿಂದ ದೇಶದ ಆರೋಗ್ಯ ರಕ್ಷಣೆ
February 28, 2019ಮೈಸೂರು: ಗಡಿ ಕಾಯುವ ಯೋಧರು ದೇಶವನ್ನು ಶತ್ರುಗಳಿಂದ ರಕ್ಷಿಸುತ್ತಿದ್ದರೆ, ದೇಶದೊಳಗಿನ ಆರೋಗ್ಯವನ್ನು ರಕ್ಷಿಸುತ್ತಿರುವವರು ಸಫಾಯಿ ಕರ್ಮಚಾರಿ ಪೌರ ಕಾರ್ಮಿಕ ಯೋಧರು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋ ಗದ ಸದಸ್ಯ ಜಗದೀಶ್ ಹಿರೇಮಣಿ ತಿಳಿಸಿದರು. ಮೈಸೂರು ಮಹಾರಾಜ ಕಾಲೇಜು ಶತಮಾನೋ ತ್ಸವ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಮೈಸೂರು ಮಹಾನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಸ್ಕ್ಯಾವೆಂ ಜರ್ ಮತ್ತು ಸಫಾಯಿ ಕರ್ಮಚಾರಿಗಳಿಗೆ ಜಾಗೃತಿ ಶಿಬಿರ ಹಾಗೂ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು….
ದೇವರಾಜ ಮಾರುಕಟ್ಟೆ ಅಂಗಡಿಗೆ ಬೆಂಕಿ: ಗೃಹ ಬಳಕೆ ವಸ್ತುಗಳ ನಾಶ
February 28, 2019ಮೈಸೂರು: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಅಂಗಡಿ ಮಳಿಗೆ ಯೊಂದು ಸುಟ್ಟುಹೋದ ಘಟನೆ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಸಾದಿಕ್ ಎಂಬುವರಿಗೆ ಸೇರಿದ ಗೃಹಬಳಕೆ ವಸ್ತುಗಳ ಅಂಗಡಿಗೆ ಬೆಂಕಿ ತಗುಲಿದ್ದು, ಇಂದು ಮುಂಜಾನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವ ಮೂಲಕ ಇತರ ಅಂಗಡಿಗಳಿಗೆ ಅಪಾಯ ಸಂಭವಿಸುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸಾದಿಕ್ ಅವರು ಮಂಗಳವಾರ ರಾತ್ರಿ ವ್ಯಾಪಾರ ಮುಗಿಸಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಬೆಳಿಗ್ಗೆ ಸುಮಾರು 6…
ಗಿಡ ನೆಡುವ ಮೂಲಕ ಬಿಎಸ್‍ವೈ ಹುಟ್ಟುಹಬ್ಬ ಆಚರಣೆ
February 28, 2019ಮೈಸೂರು: ಮೈಸೂರಿನ ನರ ಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರ 76ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ‘ಕಾಡು ಉಳಿಸಿ ನಾಡು ಬೆಳೆಸಿ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾಜಕುಮಾರ್ ರಸ್ತೆಯಲ್ಲಿನ ತ್ರಿವೇಣಿ ಉದ್ಯಾನವನದಲ್ಲಿ 50ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು. ನಂತರ ಮಾತನಾಡಿದ ನಗರ ಪಾಲಿಕೆ ಸದಸ್ಯರಾದ ಸಾತ್ವಿಕ್, ಕರ್ನಾಟಕ ರಾಜ್ಯದ ಅಭಿವೃದ್ಧಿಯ ದಿನಗಳು ಎಂದರೆ ಅದು ಯಡಿಯೂರಪ್ಪನವರ ಸರ್ಕಾರದ ದಿನ ಗಳು….
ಬೈಕ್‍ಗಳ ಮುಖಾಮುಖಿ ಡಿಕ್ಕಿ: ಹೂವಿನ ವ್ಯಾಪಾರಿ ಸಾವು
February 28, 2019ಮೈಸೂರು: ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪ ಘಾತದಲ್ಲಿ ಹೂವಿನ ವ್ಯಾಪಾರಿ ಸಾವನ್ನಪ್ಪಿದ್ದಾರೆ. ಶ್ರೀರಂಗಪಟ್ಟಣ ತಾಲೂಕು, ಪಾಲಹಳ್ಳಿ ಗ್ರಾಮದ ಸಿದ್ದಪ್ಪ ಅವರ ಮಗ ರಘು(22) ಸಾವನ್ನಪ್ಪಿದವರು. ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ರಘು, ವ್ಯಾಪಾರ ಮುಗಿಸಿ ಕೊಂಡು ಮೈಸೂರಿನಿಂದ ಪಾಲಹಳ್ಳಿಗೆ ಬಜಾಜ್ ಪಲ್ಸರ್‍ಬೈಕ್ (ಕೆಎ 11, ಇಕೆ 0769)ನಲ್ಲಿ ಹೋಗುತ್ತಿದ್ದಾಗ ಬೆಂಗಳೂರು-ಮೈಸೂರು ಹೆದ್ದಾರಿಯ ಚೆಕ್‍ಪೋಸ್ಟ್ ಬಳಿ ತಿರುವಿನಲ್ಲಿ ಎದುರಿ ನಿಂದ ಬಂದ ಮತ್ತೊಂದು ದ್ವಿಚಕ್ರ ವಾಹನ ಮಂಗಳವಾರ ಮಧ್ಯರಾತ್ರಿ ಸುಮಾರು 12.10ಗಂಟೆ ವೇಳೆಗೆ ಡಿಕ್ಕಿ…
ಉದ್ಬೂರಲ್ಲಿ ಮಹಿಳೆ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ
February 28, 2019ಮೈಸೂರು: ಮಹಿಳೆಯೊಬ್ಬರು ಬೆಂಕಿಗಾಹುತಿ ಯಾಗಿರುವ ದುರಂತ ಮೈಸೂರು ತಾಲೂಕು ಉದ್ಬೂರಲ್ಲಿ ಮಂಗಳ ವಾರ ರಾತ್ರಿ ಸಂಭವಿಸಿದೆ. ಉದ್ಬೂರು ಗ್ರಾಮದ ಸುರೇಶ ಅವರ ಪತ್ನಿ ಶ್ರೀಮತಿ ಭಾಗ್ಯ(26) ತೀವ್ರ ಸುಟ್ಟು ಗಾಯಗಳಾಗಿ ಸಾವನ್ನಪ್ಪಿ ದವರು. ಅದೇ ಗ್ರಾಮದವರಾದ ಭಾಗ್ಯರನ್ನು 5 ವರ್ಷಗಳ ಹಿಂದೆ ಸುರೇಶ್‍ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದ ದಂಪತಿ ನಡುವೆ ಸಾಮರಸ್ಯವಿರಲಿಲ್ಲ ಎಂದಿರುವ ಭಾಗ್ಯ ಪೋಷಕರು, ಆಕೆಯ ಪತಿ ಸುರೇಶ ಹಾಗೂ ಅತ್ತೆ ಮರಿಚಿಕ್ಕಮ್ಮ ಬೆಂಕಿ ಹಚ್ಚಿ ಹತ್ಯೆಗೈದಿದ್ದು, ವರದಕ್ಷಿಣೆಗಾಗಿ ಈ…
ಪಾಕ್‍ನ ಉಗ್ರರ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ
February 27, 2019ಮಂಗಳವಾರ ನಸುಕಿನ 3.30ರಲ್ಲಿ 21 ನಿಮಿಷಗಳ ಸರ್ಜಿಕಲ್ ಸ್ಟ್ರೈಕ್-2 ಭಾರತದ ವಾಯುಪಡೆ ದಾಳಿಗೆ ಜೈಷ್ ಉಗ್ರರ 3 ಪ್ರಮುಖ ನೆಲೆಗಳು ಧ್ವಂಸ 350 ಉಗ್ರರು ಬಲಿ, ಅಪಾರ ಶಸ್ತ್ರಾಸ್ತ್ರ, ಜೈಷ್ ನಿಯಂತ್ರಣ ಕೊಠಡಿ ನಾಶ ನವದೆಹಲಿ: ಪುಲ್ವಾಮಾ ದಾಳಿ ನಡೆದ 12 ದಿನಗಳಲ್ಲಿಯೇ ಭಾರತ ದೊಡ್ಡ ಮಟ್ಟದಲ್ಲಿಯೇ ಪ್ರತೀಕಾರ ತೀರಿಸಿಕೊಂಡಿದೆ. ನೆರೆಯ ಭಯೋತ್ಪಾದಕ ದೇಶ ಪಾಕಿಸ್ತಾನ ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಗಡಿ ದಾಟಿ ಪಾಕಿಸ್ತಾನದಲ್ಲಿ ಸುರಕ್ಷಿತ ನೆಲೆ ಕಂಡು ಕೊಂಡಿರುವ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ…










