ಅಪಘಾತಗಳನ್ನು ತಪ್ಪಿಸುತ್ತಿವೆ  ಆಯ್ದ ಸ್ಥಳಗಳ ಕಾನ್ವೆಕ್ಸ್ ಕನ್ನಡಿಗಳು
ಮೈಸೂರು

ಅಪಘಾತಗಳನ್ನು ತಪ್ಪಿಸುತ್ತಿವೆ ಆಯ್ದ ಸ್ಥಳಗಳ ಕಾನ್ವೆಕ್ಸ್ ಕನ್ನಡಿಗಳು

February 28, 2019

ಮೈಸೂರು: ಅಪಘಾತ ಸಂಭವಿಸುವ ಮೈಸೂರಿನ ಆಯ್ದ `ಟಿ’ ಜಂಕ್ಷನ್‍ಗಳಲ್ಲಿ ಸಂಚಾರ ಪೊಲೀ ಸರು ಹಾಗೂ ಕೆಲ ಖಾಸಗಿ ಕಂಪನಿಗಳು ಅಳವಡಿಸಿರುವ ಕಾನ್ವೆಕ್ಸ್ ಕನ್ನಡಿಗಳು (ಉಬ್ಬು ಕನ್ನಡಿಗಳು-ತೀಕ್ಷ್ಣ ಪ್ರತಿಫಲಕ ಗಳು) ಅವಘಡಗಳನ್ನು ತಪ್ಪಿಸುತ್ತಿವೆ.

ಮೂರು ದಾರಿಗಳು ಕೂಡುವ ಸ್ಥಳ ಗಳಲ್ಲಿ ಎಡ ಮತ್ತು ಬಲ ಬದಿ ಬರುವ ವಾಹನಗಳು ಕಾಣಿಸದೇ ಅಪಘಾತಕ್ಕೆ ಕಾರಣವಾಗುತ್ತದೆ. ದುರಂತಗಳನ್ನು ತಡೆ ಯಲು ಈ ಹಿಂದೆಯೇ ಸಂಚಾರ ಪೊಲೀಸರು ಸಾರ್ವಜನಿಕ ರಸ್ತೆಯ ಟಿ-ಜಂಕ್ಷನ್‍ಗಳು ಹಾಗೂ ಖಾಸಗಿ ಕಂಪನಿ ಗಳು ಮುಖ್ಯ ರಸ್ತೆಗೆ ಹೊಂದಿಕೊಂಡಂತಿ ರುವ ತಮ್ಮ ಪ್ರಧಾನ ದ್ವಾರಗಳ ಬಳಿ ಓವೆಲ್ ಆಕಾರದ ಕನ್ನಡಿಗಳನ್ನು ಅಳವಡಿಸಿದ್ದಾರೆ.

ಕಡು ತಿರುವು ಹಾಗೂ ಎರಡೂ ಕಡೆ ಶಾರ್ಪ್ ಕಾಂಪೌಂಡ್ ಗೋಡೆ ಇರುವ ಸ್ಥಳಗಳ ಒಂದು ಮೂಲೆಯಲ್ಲಿ ಗೋಡೆಗೆ ಅಥವಾ ಕಬ್ಬಿಣದ ಕಂಬಗಳಿಗೆ ಕಾನ್ವೆಕ್ಸ್ ಮಿರರ್‍ಗಳನ್ನು ಅಳವಡಿಸಲಾಗಿದೆ. ಮೂರೂ ರಸ್ತೆಗಳಲ್ಲಿ ಬರುವ ವಾಹನ ಸವಾರರಿಗೆ ಉಳಿದೆರಡು ಕಡೆಯಿಂದ ಬರುತ್ತಿರುವ ವಾಹನಗಳು ಸುಮಾರು 50 ಮೀಟರ್ ದೂರದಿಂದಲೇ ಕನ್ನಡಿಯಲ್ಲಿ ಕಾಣಿಸುತ್ತವೆ. ಅದರಿಂದ ಎಚ್ಚೆತ್ತ ಚಾಲ ಕರು ಹಾರ್ನ್ ಮಾಡಿಕೊಂಡು ನಿಧಾನ ವಾಗಿ ಎಡ ಭಾಗದಲ್ಲಿ ಚಲಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದಾಗಿದೆ.

ಮೈಸೂರಿನ ನಜರ್‍ಬಾದ್‍ನಲ್ಲಿರುವ ಮಿರ್ಜಾ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿ ದ್ವಾರ, ಬನ್ನಿಮಂಟ ಪದ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಗೇಟ್, ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯ ತಿರುವು (ಜಾಯ್ ಐಸ್ ಕ್ರೀಂ ಸರ್ಕಲ್ ಕಡೆಗೆ ಹೋಗುವ ರಸ್ತೆ ಜಂಕ್ಷÀನ್ ಬಳಿ), ನಜರ್‍ಬಾದಿನ ವಸಂತ ಮಹಲ್ (ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ) ಬಳಿ, ಟಿ.ಕೆ.ಬಡಾವಣೆಯ ಬಿಎಸ್ ಎನ್‍ಎಲ್ ತರಬೇತಿ ಸಂಸ್ಥೆ ಕ್ರಾಸ್‍ನಲ್ಲಿ, ಹೆಬ್ಬಾಳಿನ ಇನ್‍ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಯ ಪೂರ್ವ ಮತ್ತು ದಕ್ಷಿಣ ಪ್ರಧಾನ ದ್ವಾರಗಳ ಬಳಿ, ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ದ್ವಾರದ ಬಳಿ ಹಾಗೂ ಜಯಲಕ್ಷ್ಮೀ ಪುರಂನ ಮಹಾಜನ ಕಾಲೇಜು ಆಟದ ಮೈದಾನದ ಪ್ರವೇಶ ದ್ವಾರದಲ್ಲಿ ಟ್ರಾಫಿಕ್ ಕಾನ್ವೆಕ್ಸ್ ಮಿರರ್‍ಗಳನ್ನು ಅಳವಡಿಸಲಾಗಿದೆ.
ಸರಿಯಾಗಿ ಕಾಣಿಸುತ್ತಿರಲಿಲ್ಲವಾದ್ದ ರಿಂದ ಯಾದವಗಿರಿಯ ಶ್ರೀ ರಾಮಕೃಷ್ಣ ವಿದ್ಯಾಶಾಲಾ ಮೂಲೆಯಲ್ಲಿದ್ದ ಮಿರರ್ ಅನ್ನು ವಿವಿ ಪುರಂ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಬಿ.ಎಸ್.ಪ್ರಕಾಶ ಅವರು ತೆಗೆಸಿದ್ದು, ಮತ್ತೊಂದು ಮಿರರ್ ಅನ್ನು ಆಯಕಟ್ಟಿನ ಸ್ಥಳದಲ್ಲಿ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Translate »