ಸಮಾನತೆಗಾಗಿ ಮೀಸಲಾತಿ ಅವಶ್ಯ
ಮೈಸೂರು

ಸಮಾನತೆಗಾಗಿ ಮೀಸಲಾತಿ ಅವಶ್ಯ

February 28, 2019

ಮೈಸೂರು: ಆಧು ನಿಕ ಭಾರತದ ಹೆಸರಿನಲ್ಲಿ ಮೀಸಲಾತಿ ಯನ್ನು ವಿರೋಧಿಸುವ ಜಾತಿ ಮತ್ಸರ ವಾದಿಗಳು ಶತಮಾನಗಳಿಂದ ಶೋಷ ಣೆಗೆ ಒಳಗಾಗಿರುವ ತಳ ಸಮುದಾಯ ವನ್ನು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಿಂದ ದೂರವಿಟ್ಟು ಚಾಕರಿಗೆ ಮಾತ್ರ ಬಳಸಿಕೊಳ್ಳುವ ಸಂಚು ನಡೆಸುತ್ತಿ ದ್ದಾರೆ ಎಂದು ಪ್ರಗತಿಪರ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ದೂರಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗವು ಹರ್ಮನ್ ಮೋಗ್ಲಿಂಗ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ `ಪ್ರಸಕ್ತ ಮೀಸ ಲಾತಿ ನೀತಿ, ಸಮಸ್ಯೆಗಳು ಮತ್ತು ಅವ ಕಾಶಗಳು’ ಕುರಿತ ಒಂದು ದಿನದ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತ ನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೀಸಲಾತಿ ವಿರೋಧಿಸುವ ಮಾತುಗಳು ಕೇಳಿ ಬರುತ್ತಿವೆ. ಜನಸಂಖ್ಯೆಗೆ ಅನುಗುಣ ವಾಗಿ ಮೀಸಲಾತಿ ಸೌಲಭ್ಯ ನೀಡಿದ್ದರೂ ಕೇವಲ ದಲಿತರು ಹಾಗೂ ಶೋಷಿತ ಸಮುದಾಯಕ್ಕೆ ನೀಡಿರುವ ಮೀಸಲಾತಿ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಎಲ್ಲರೂ ಮೀಸಲಾತಿ ಪಡೆಯಬೇಕೆಂದು ಬಯಸುತ್ತಿರುವುದು ಎಷ್ಟು ತರ್ಕಬದ್ಧ ಮತ್ತು ಅನಾನುಕೂಲಕರ ಎನ್ನುವುದನ್ನು ಆಲೋಚಿ ಸಬೇಕು. ಮೀಸಲಾತಿಯ ಹಿನ್ನೆಲೆ ಮತ್ತು ಅಸ್ತಿತ್ವದ ಕಾರಣವನ್ನು ಮರೆತು ಆಲೋ ಚನೆ ಮಾಡಿದರೆ, ಮೀಸ ಲಾತಿ ಅರ್ಥವಾಗು ವುದಿಲ್ಲ. ಪ್ರಪಂಚದ ಬಹಳಷ್ಟು ದೇಶಗ ಳಲ್ಲಿ ಮೀಸಲಾತಿ, ಜಾತಿ ವ್ಯವಸ್ಥೆಯಿಲ್ಲ. ಕಾರಣ ಆ ದೇಶಗಳಲ್ಲಿ ಸಮಾನತೆಯನ್ನು ಕಾಣಬಹುದು. ಆದರೆ ಸಾಮಾಜಿಕ ತಾರತಮ್ಯದ ಪರಂಪರೆಯನ್ನು ಹೊಂದಿರುವ ಭಾರತಕ್ಕೆ ಮೀಸಲಾತಿ ಎನ್ನುವ ಮದ್ದು ನೀಡಿ, ಶತ ಮಾನಗಳಿಂದ ಶೋಷಣೆಗೆ ಒಳಗಾಗಿ ರುವ ಸಮುದಾಯಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಮೀಸಲಾತಿಯು ಯಾರನ್ನೂ ಮೇಲಕ್ಕೇರಿಸುವುದಿಲ್ಲ, ಯಾರನ್ನೂ ಕೆಳಗಿಳಿಸುವುದಿಲ್ಲ. ಅದು ಎಲ್ಲರನ್ನೂ ಸರಿಸಮಾನವಾಗಿಸುವ ಪ್ರಯತ್ನ ವಷ್ಟೆ. ಪ್ರತಿಯೊಂದು ಜಾತಿ, ಸಮುದಾಯವು ಮೀಸಲಾತಿ ಬೇಕು ಎನ್ನುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮೀಸ ಲಾತಿಯನ್ನು ಸಂಪೂರ್ಣವಾಗಿ ರದ್ದು ಪಡಿಸುವ ಆಕಾಂಕ್ಷಿ ಗುಂಪು ಗುಪ್ತವಾಗಿ ಕಾರ್ಯ ನಿರ್ವಹಿಸುತ್ತಿದೆ. ಮೀಸಲಾತಿ ಕೇಳುವ ಮುನ್ನಾ ಸುಮಾರು 1500 ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಸತತವಾಗಿ ಕೆಲವು ಸಮುದಾಯಗಳನ್ನು ಪ್ರಾತಿನಿಧ್ಯ ದಿಂದ ಹೊರಗಿಡಲಾಗಿತ್ತು.

ಪ್ರಜಾಪ್ರಭುತ್ವ, ರಾಜಪ್ರಭುತ್ವಕ್ಕೆ ವಿರುದ್ಧವಾಗಿದ್ದು, ಭಾರತದ ಎಲ್ಲಾ ಸಮುದಾಯಗಳಿಗೂ, ಎಲ್ಲಾ ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿಧ್ಯವನ್ನು ಒದಗಿಸಲಾಗಿದೆ. ಮೀಸಲಾತಿಯನ್ನು ಕೆಲವು ಸಮುದಾಯಗಳಿಗೆ ಮಾತ್ರ ನೀಡ ಲಾಗಿದೆ ಎಂದು ಅನೇಕರು ಭಾವಿಸಿದ್ದಾರೆ. ಅದು ಸರಿಯಲ್ಲ. ಎಲ್ಲಾ ಸಮುದಾಯ ಗಳಿಗೂ, ಸ್ತ್ರೀಯರಿಗೂ, ವಿಶೇಷಚೇತನ ರಿಗೂ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ ಎಂದರು.

ಇದೇ ವೇಳೆ ರಾಯಚೂರು ವಿವಿ ವಿಶೇಷಾಧಿಕಾರಿ ಪ್ರೊ.ಮುಜಾಫರ್ ಅಸ್ಸಾದಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜಾತಿ ಗಟ್ಟಿಯಾಗಿದ್ದು, ನಗರ ಭಾಗದಲ್ಲಿ ಸ್ವಲ್ಪ ಸಡಿಲಗೊಂಡಿದೆ. ಒಂದು ಗಂಟೆಗೆ ಒಬ್ಬ ದಲಿತರ ಹತ್ಯೆಯಾಗುತ್ತಿದೆ. ಇಂದಿಗೂ ನೀರಿನ ಬಾವಿ, ಮಾರುಕಟ್ಟೆ, ದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲ. ಹಾಗಾಗಿ, ಜಾತಿಯ ಶೋಷಣೆ ನಿಲ್ಲುವವ ರೆವಿಗೂ ಮೀಸಲಾತಿ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾ ಪಕ ಪ್ರೊ.ಹೆಚ್.ಎಂ.ರಾಜಶೇಖರ್ ಭಾರತದಲ್ಲಿ ಮೀಸಲಾತಿ ನೀತಿಯ ಸಂವಿ ಧಾನಿಕ ನಿಬಂಧನೆಗಳು ಕುರಿತು ಮಾತನಾಡಿ ದರೆ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಕೃಷ್ಣ ಹೊಂಬಾಳ್, ಪ್ರೊ.ಜಿ.ಟಿ.ರಾಮ ಚಂದ್ರಪ್ಪ ಉಪಸ್ಥಿತರಿದ್ದರು.

Translate »