ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ: ಜೇಟ್ಲಿ
ಮೈಸೂರು

ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ: ಜೇಟ್ಲಿ

February 28, 2019

ನವದೆಹಲಿ: ಭಾರತೀಯ ವಾಯುಸೇನೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಹುಟ್ಟಡಗಿಸಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿಯತೊಡಗಿದ್ದು, ಮತ್ತೊಂದೆಡೆ ಈಗಿನ ಸ್ಥಿತಿಯಲ್ಲಿ ಎಲ್ಲವೂ ಸಾಧ್ಯ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ ನೀಡಿ ರುವ ಹೇಳಿಕೆ ಬಗ್ಗೆ ಚರ್ಚೆ ನಡೆಯತೊಡಗಿದೆ. ಅಲ್ ಖೈದಾ ಭಯೋತ್ಪಾದನೆ ಸಂಘಟನೆಯ ರೂವಾರಿ ಒಸಾಮಾ ಲಾಡೆನ್‍ನನ್ನು ಅಮೆರಿಕ ಅಬೋಟಾಬಾದ್‍ನೊಳಗೆ ನುಗ್ಗಿ ಹೊಡೆದು ಹಾಕಿಲ್ಲವೇ? ಅದೇ ರೀತಿ ಇಂದು ಏನು ಬೇಕಾದರೂ ನಡೆಯಬಹುದು. ನಮಗೆ ಯಾಕೆ ಅದು ಸಾಧ್ಯವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಜೇಟ್ಲಿ ಖಡಕ್ ಉತ್ತರ ನೀಡಿದ್ದಾರೆ. ಒಂದು ವೇಳೆ ಅಮೆರಿಕದ ನೌಕಾ ಸೀಲ್ ಪಡೆ ಒಸಾಮಾನನ್ನು ಕೊಲ್ಲುತ್ತಾರೆಂದ ಮೇಲೆ ಇಂದು ಎಲ್ಲವೂ ಸಾಧ್ಯ. ಆ ನಿಟ್ಟಿನಲ್ಲಿ ನಾವೂ ಯೋಚಿಸಬೇಕಾಗಿದೆ. ನಮಗೂ ಯಾಕೆ ಅದು ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದ್ದರು. ಇಂದು ಬೆಳಿಗ್ಗೆ ವಾಯುಸೀಮೆ ಗಡಿ ಉಲ್ಲಂ ಘಿಸಿದ್ದ 3 ಪಾಕಿಸ್ತಾನದ ವಾಯುಪಡೆ ವಿಮಾನವನ್ನು ಭಾರತದ ವಾಯುಪಡೆ ಹಿಮ್ಮೆಟ್ಟಿಸಿತ್ತು. ಅಲ್ಲದೇ ಪಾಕಿಸ್ತಾನ ವಾಯುಪಡೆಯ ಎಫ್ 16 ವಿಮಾನವನ್ನು ಹೊಡೆದುರುಳಿಸಿತ್ತು. ಪಾಕಿ ಸ್ತಾನದ ಮಾಧ್ಯಮಗಳು ಮಾತ್ರ ಭಾರತದ ವಿರುದ್ಧ ಸುಳ್ಳು ಸುದ್ದಿಯನ್ನು ಬಿತ್ತರಿಸತೊಡ ಗಿವೆ. 2011ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಲಾಡೆನ್ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಅಬೋಟಾಬಾದ್‍ನಲ್ಲಿ ಅಡಗಿ ಕುಳಿತಿದ್ದ ಉಗ್ರ ಲಾಡೆನ್ ಮೇಲೆ ಅಮೆರಿಕದ ಸೀಲ್ ಪಡೆ ಹತ್ಯೆಗೈದಿತ್ತು.

Translate »