ಇಂದಿನಿಂದ ಕೊಡಗು, ಮೈಸೂರು ಜಿಲ್ಲೆಯಲ್ಲಿ ಸಿಎಂ ಹೆಚ್‍ಡಿಕೆ ಪ್ರವಾಸ
ಮೈಸೂರು

ಇಂದಿನಿಂದ ಕೊಡಗು, ಮೈಸೂರು ಜಿಲ್ಲೆಯಲ್ಲಿ ಸಿಎಂ ಹೆಚ್‍ಡಿಕೆ ಪ್ರವಾಸ

February 28, 2019

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಳೆ (ಫೆ.28) ಹಾಗೂ ಮಾರ್ಚ್ 1ರಂದು ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವರು.

ಫೆಬ್ರವರಿ 28ರಂದು ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣ ದಿಂದ ಹೊರಡುವ ಅವರು, ಸಂಜೆ 4.15 ಗಂಟೆಗೆ ಕೊಡಗು ಜಿಲ್ಲೆ, ಹಾರಂಗಿ ಜಲಾಶಯದ ಹೆಲಿಪ್ಯಾಡ್‍ಗೆ ಆಗಮಿಸಿ, ಅಲ್ಲಿಂದ ಕಾರಿನಲ್ಲಿ ಸೋಮವಾರಪೇಟೆ ತಾಲೂಕು, ಬಸವನ ಹಳ್ಳಿಗೆ ತೆರಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಗಿಡ್ಡಹಳ್ಳಿ ನಿರಾಶ್ರಿತರಿಗೆ ಮನೆಗಳನ್ನು ಹಸ್ತಾಂತರಿಸುವರು. ಅಂದು ರಾತ್ರಿ ಮಡಿಕೇರಿ ಅಥವಾ ಕುಶಾಲನಗರದಲ್ಲಿ ವಾಸ್ತವ್ಯ ಹೂಡುವ ಹೆಚ್.ಡಿ. ಕುಮಾರಸ್ವಾಮಿ ಅವರು, ಮಾ.1ರಂದು ಬೆಳಿಗ್ಗೆ 9.30 ಗಂಟೆಗೆ ಪಿರಿಯಾಪಟ್ಟಣ ತಾಲೂ ಕಿನ ಬೈಲುಕುಪ್ಪೆಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ಮಧ್ಯಾಹ್ನ 2.30 ಗಂಟೆಗೆ ಮೈಸೂರಿಗೆ ಆಗಮಿಸಿ ಆಲನಹಳ್ಳಿಯಲ್ಲಿ ಮೈಸೂರು-ಚಾಮ ರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೂತನ ಮೆಗಾ ಡೈರಿ ಯನ್ನು ಉದ್ಘಾಟಿಸುವರು. ಮಧ್ಯಾಹ್ನ 3.30 ಗಂಟೆಗೆ ಕ್ರಾಫರ್ಡ್ ಭವನದಲ್ಲಿ ಏರ್ಪಡಿಸಿ ರುವ ಸಮಾರಂಭದಲ್ಲಿ ಮೈಸೂರು ವಿವಿ ಕಾನೂನು ಶಾಲಾ, ಸಾವಯವ ರಸಾಯನ ಶಾಸ್ತ್ರ, ಶತಮಾನೋತ್ಸವ ವಸ್ತುಸಂಗ್ರಹಾಲಯ ಕಟ್ಟಡಗಳನ್ನು ಉದ್ಘಾಟಿಸುವರು. ಅದೇ ವೇಳೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲುದ್ದೇಶಿಸಿರುವ ವಿಶ್ವವಿದ್ಯಾನಿಲ ಯದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮುಖ್ಯಮಂತ್ರಿಗಳು, ದೂರ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಂಜೆ 5.30 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿದ ನಂತರ ರಸ್ತೆ ಮೂಲಕ ಬೆಂಗಳೂರಿಗೆ ಹಿಂದಿರುಗುವರು.

Translate »