ನಾಳೆ 128 ಕೋಟಿ ವೆಚ್ಚದ ಮೆಗಾ ಡೇರಿ ಲೋಕಾರ್ಪಣೆ
ಮೈಸೂರು

ನಾಳೆ 128 ಕೋಟಿ ವೆಚ್ಚದ ಮೆಗಾ ಡೇರಿ ಲೋಕಾರ್ಪಣೆ

February 28, 2019

ಮೈಸೂರು: 128 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 6 ಲಕ್ಷ ಲೀಟರ್ ಸಾಮಥ್ರ್ಯದ ನೂತನ ಮೆಗಾ ಡೇರಿಯನ್ನು ಮಾ.1ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉದ್ಘಾ ಟಿಸಲಿದ್ದಾರೆ. ಬನ್ನೂರು ರಸ್ತೆಯಲ್ಲಿರುವ ನೂತನ ಡೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಎಸ್.ವಿಜಯಕುಮಾರ್, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಗಳು ನೂತನ ಮೆಗಾ ಡೇರಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಅವರು ಡಾ.ವರ್ಗೀಸ್ ಕುರಿಯನ್ ಪ್ರತಿಮೆ ಅನಾವರಣಗೊಳಿಸುವರು. ಸಚಿವ ರಾದ ಸಾ.ರಾ.ಮಹೇಶ್ ಹಾಲು ಸ್ವೀಕರಣಾ ಘಟಕವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮದ ಅಧ್ಯ ಕ್ಷತೆ ವಹಿಸಲಿದ್ದು, ಸಚಿವರಾದ ಹೆಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪೂರ ಹಾಗೂ ವೆಂಟಕರಾವ್ ನಾಡಗೌಡ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮೇಯರ್ ಪುಷ್ಪಲತಾ ಜಗನ್ನಾಥ್, ಜಿ.ಪಂ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಮ್, ಸಂಸದರಾದ ಪ್ರತಾಪ ಸಿಂಹ, ಆರ್.ಧ್ರುವ ನಾರಾಯಣ್, ಎಲ್.ಆರ್.ಶಿವರಾಮೇಗೌಡ, ಮೈಸೂರು-ಚಾ.ನಗರ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಶಾಸಕ ರಾದ ಎ.ಹೆಚ್.ವಿಶ್ವನಾಥ್, ತನ್ವೀರ್‍ಸೇಠ್, ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಆರ್.ಧರ್ಮಸೇನ, ಕೆ.ಟಿ.ಶ್ರೀಕಂಠೇಗೌಡ, ಕೆ.ವಿ.ನಾರಾಯಣಸ್ವಾಮಿ, ಕೆ.ಮಹದೇವ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ್, ಡಾ.ಯತೀಂದ್ರ, ಎಂ.ಅಶ್ವಿನ್ ಕುಮಾರ್, ಅನಿಲ್ ಚಿಕ್ಕಮಾದು ಅತಿಥಿಗಳಾಗಿ ಭಾಗ ವಹಿಸಲಿದ್ದಾರೆ ಎಂದರು.

ಡೇರಿಗೆ ಇತ್ತೀಚಿನ ದಿನಗಳಲ್ಲಿ ಹಾಲಿನ ಒಳಹರಿವು ಹೆಚ್ಚಾಗಿದ್ದು, ಪ್ರಸ್ತುತ ಪ್ರಧಾನ ಡೇರಿಯಲ್ಲಿರುವ ಸಂಸ್ಕರಣಾ ಸಾಮಥ್ರ್ಯ ವನ್ನು ಈಗಾಗಲೇ 4 ಬಾರಿ ಹೆಚ್ಚಿಸಲಾಗಿದ್ದು, ಮುಂದೆ ವಿಸ್ತರಿಸಲು ಸಾಧ್ಯವಿಲ್ಲದ ಹಿನ್ನೆಲೆ ಯಲ್ಲಿ ನೂತನ ಮೆಗಾ ಡೇರಿ ನಿರ್ಮಿಸ ಲಾಗಿದೆ. ಈ ಡೇರಿಯು 6 ಲಕ್ಷ ಲೀಟರ್ ಸಾಮಥ್ರ್ಯದ (9 ಲಕ್ಷ ಲೀಟರ್‍ಗಳಿಗೆ ವರ್ಧಿಸ ಬಲ್ಲ) ಕರ್ನಾಟಕದಲ್ಲೇ ಅತ್ಯಾಧುನಿಕ ತಂತ್ರ ಜ್ಞಾನವುಳ್ಳ ಮೊದಲ ಘಟಕವಾಗಿದೆ. ಇದ ರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಹಾಗೂ ಹಾಲಿನ ವಿವಿಧ ಉತ್ಪನ್ನ ಗಳು ಲಭ್ಯವಾಗುತ್ತವೆ. ಲಕ್ಷಾಂತರ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಹ ಕಾರಿಯಾಗಲಿದೆ ಎಂದು ವಿವರಿಸಿದರು.

4 ಲಕ್ಷ ಲೀ. ಹಾಲು ಸರಬರಾಜು: ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟಕ್ಕೆ ನಿತ್ಯ 4 ಲಕ್ಷ ಲೀ. ಹಾಲು ಸರಬರಾಜಾಗುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 65 ಸಾವಿರ ಲೀ. ಹಾಲು ಹೆಚ್ಚಾಗಿದೆ. ಹಾಲು ಉತ್ಪಾದಕ ರಿಗೆ ಲೀ.ಗೆ ಈ ವರ್ಷದಿಂದ 6 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು. ಹಾಲು, ಹಾಲಿನ ಉತ್ಪನ್ನಗಳ ದರ ಏರಿಕೆ ಕುರಿತು ರಾಜ್ಯ ಸರ್ಕಾರ ತೀರ್ಮಾನಿಸ ಲಿದೆ. ಸದ್ಯಕ್ಕೆ ದರ ಏರಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. 38.19 ಎಕರೆ ಜಾಗದಲ್ಲಿ 13 ಎಕರೆ ಪ್ರದೇಶದಲ್ಲಿ ಮೇಗಾ ಡೇರಿ ನಿರ್ಮಿಸಲಾಗಿದೆ., ಮೆಗಾ ಡೇರಿ ಯೋಜನೆ 128 ಕೋಟಿ ರೂ., ಹಾಲಿನ ಪುಡಿ ಘಟಕ ಅಂದಾಜು 59 ಕೋಟಿ ರೂ. (2ನೇ ಹಂತದಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ) ವೆಚ್ಚದ್ದಾಗಿದೆ. ಈ ಯೋಜ ನೆಗೆ ಮೈಸೂರು ಹಾಲು ಒಕ್ಕೂಟ 41.66 ಕೋಟಿ ರೂ., ತೊಡಗಿಸಿದ್ದರೆ, ಆರ್‍ಕೆ ವಿವೈ ಅನುದಾನ 6 ಕೋಟಿ ರೂ. ಗಳ ಷ್ಟಿದೆ. ಎನ್‍ಡಿಡಿಬಿಯಿಂದ 80.34 ಕೋಟಿ ರೂ. ಸಾಲ ಪಡೆಯಲಾಗಿದೆ ಎಂದರು.

ಯೋಜನಾ ವಿವರಗಳು: ಸಿವಿಲ್ ಕೆಲಸ ಗಳಾದ ಮುಖ್ಯಡೇರಿ ಕಟ್ಟಡ, ಯುಟಿಲಿಟಿ ಬ್ಲಾಕ್, ನೂತನ ಆಡಳಿತ ಕಚೇರಿ, ಕ್ಯಾಂಟಿನ್ ಕಟ್ಟಡ, ವಾಟರ್ ಸಂಪ್, ವಾಹನ ಪಾರ್ಕಿಂಗ್, ಭದ್ರತಾ ವಿಭಾಗ, ವೇ ಬ್ರಿಡ್ಜ್, ರಸ್ತೆ, ಶಿಥಲೀ ಕರಣ ಗೋದಾಮು ಕೆಲಸಗಳು ಪೂರ್ಣ ಗೊಂಡಿದೆ. ಮೆಕ್ಯಾನಿಕಲ್, ಪ್ರೊಸೆಸ್, ರೆಫ್ರಿಜ ರೇಷನ್ ಯಂತ್ರಗಳ ಅಳವಡಿಕೆ ಮುಗಿದಿದ್ದು, ಹಂತಹಂತವಾಗಿ ನೀರಿನಲ್ಲಿ ಪ್ರಾಯೋಗಿಕ ವಾಗಿ ಚಾಲನೆ ಕೈಗೊಂಡು ಅಂತಿಮವಾಗಿ ಮಾರ್ಚ್ ತಿಂಗಳಲ್ಲಿ ಮೆಗಾ ಡೇರಿ ಕಾರ್ಯ ನಿರ್ವಹಣೆ ಆರಂಭಿಸಲಿದೆ ಎಂದರು. ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್, ನಿರ್ದೇ ಶಕರಾದ ಎ.ಟಿ.ಸೋಮಶೇಖರ್, ಕೆ.ಎಸ್. ಕುಮಾರ್, ಕೆ.ಸಿ.ಬಲರಾಮ್, ಲೀಲಾ ನಾಗ ರಾಜ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »