ಗಿಡ ನೆಡುವ ಮೂಲಕ ಬಿಎಸ್‍ವೈ ಹುಟ್ಟುಹಬ್ಬ ಆಚರಣೆ
ಮೈಸೂರು

ಗಿಡ ನೆಡುವ ಮೂಲಕ ಬಿಎಸ್‍ವೈ ಹುಟ್ಟುಹಬ್ಬ ಆಚರಣೆ

February 28, 2019

ಮೈಸೂರು: ಮೈಸೂರಿನ ನರ ಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರ 76ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ‘ಕಾಡು ಉಳಿಸಿ ನಾಡು ಬೆಳೆಸಿ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ರಾಜಕುಮಾರ್ ರಸ್ತೆಯಲ್ಲಿನ ತ್ರಿವೇಣಿ ಉದ್ಯಾನವನದಲ್ಲಿ 50ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.

ನಂತರ ಮಾತನಾಡಿದ ನಗರ ಪಾಲಿಕೆ ಸದಸ್ಯರಾದ ಸಾತ್ವಿಕ್, ಕರ್ನಾಟಕ ರಾಜ್ಯದ ಅಭಿವೃದ್ಧಿಯ ದಿನಗಳು ಎಂದರೆ ಅದು ಯಡಿಯೂರಪ್ಪನವರ ಸರ್ಕಾರದ ದಿನ ಗಳು. ದೇಶದ ಅರ್ಥಿಕ ಪರಿಸ್ಥಿತಿ ಸುಭದ್ರ ವಾಗಬೇಕಾದರೆ ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಾಗಬೇಕು. ಶಿಕ್ಷಣ, ಕೃಷಿ, ನೀರಾವರಿ, ವೈದ್ಯಕೀಯ, ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಕೊಡುಗೆ ನೀಡಿ ಅಭಿ ವೃದ್ಧಿಯ ಹರಿಕಾರರಾಗಿದ್ದ ಬಿ.ಎಸ್.ಯಡಿ ಯೂರಪ್ಪ ಅವರು ಮತ್ತೊಮ್ಮೆ ಮುಖ್ಯ ಮಂತ್ರಿಯಾದರೆ ಸಾಮಾನ್ಯ ವ್ಯಕ್ತಿಯ ಶ್ರಮಕ್ಕೆ ಸೂಕ್ತ ಬೆಲೆ ಸಿಕ್ಕಂತಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾದ ಆನಂದ್ ಹಾಗೂ ಕಡಕೊಳ ಜಗ ದೀಶ್ ಕಾರ್ಯಕ್ರಮವನ್ನುದ್ದೇಶಿಸಿ ಮಾತ ನಾಡಿದರು. ವಾರ್ಡ್ ಅಧ್ಯಕ್ಷ ಪುಟ್ಟರಾಜು, ನಾಗೇಶ, ಸಾಯಿಪ್ರಸಾದ್, ಮುರಳೀದರ್, ಬಾಲು, ಜಗದೀಶ್, ಧನರಾಜ್, ಶಿವು, ಬಾನು, ಕೃಷ್ಣ, ಆಶಾ ನಾಗಭೂಷಣ್ ಹಾಗೂ ಮತ್ತಿತರರು ಹಾಜರಿದ್ದರು.

 

Translate »