ಮಾ.20ರಿಂದ ಮೈಸೂರು ರಂಗಾಯಣದಿಂದ ಮತ್ತೆ ರಾಮಾಯಣ ರಂಗ ಯಾತ್ರೆ
ಮೈಸೂರು

ಮಾ.20ರಿಂದ ಮೈಸೂರು ರಂಗಾಯಣದಿಂದ ಮತ್ತೆ ರಾಮಾಯಣ ರಂಗ ಯಾತ್ರೆ

February 28, 2019

ಮೈಸೂರು: ವೈಚಾರಿಕ ದೃಷ್ಟಿಕೋನದೊಂದಿಗೆ ಸಮಾನತೆ ಸಂದೇಶ ಸಾರಿರುವ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ರಂಗರೂಪ ಕೊಟ್ಟು ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿ 30 ಪ್ರದರ್ಶನ ನೀಡಿದ ರಂಗಾಯಣ ಇದೀಗ ಮತ್ತೊಮ್ಮೆ ರಾಮಾಯಣದ ರಂಗಯಾತ್ರೆಗೆ ಸಜ್ಜುಗೊಂಡಿದೆ.

ರಾಷ್ಟ್ರಕವಿ ಕುವೆಂಪು ಅವರ `ಶ್ರೀರಾಮಾ ಯಣ ದರ್ಶನಂ’ ಮಹಾಕಾವ್ಯ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿ 50 ವರ್ಷಗಳು ಸಂದಿದ ಸ್ಮರ ಣಾರ್ಥ ಮೈಸೂರು ರಂಗಾಯಣ ವತಿಯಿಂದ `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ರಂಗದ ಸ್ಪರ್ಶ ನೀಡಲಾಗಿತ್ತು. ಆ ಮೂಲಕ ನಾಲ್ಕೂವರೆ ಗಂಟೆಗಳ ಅವಧಿಯಲ್ಲಿ ಪ್ರೇಕ್ಷಕರಿಗೆ ದೃಶ್ಯಕಾವ್ಯದ ದರ್ಶನ ಮಾಡಿಸಿ ರಂಗಾಸಕ್ತರ ಮೆಚ್ಚುಗೆ ಗಳಿಸಲಾಗಿತ್ತು. ಇದರಿಂದ ಉತ್ತೇಜನ ಗೊಂಡ ರಂಗಾಯಣ ಇದೀಗ ಮತ್ತೆ ರಾಜ್ಯದ ನಾನಾ ಭಾಗಗಳಲ್ಲಿ 20 ಪ್ರದರ್ಶನ ನೀಡಲು ಸಜ್ಜಾಗಿದೆ.

ಈ 2ನೇ ಹಂತದ `ಶ್ರೀರಾಮಾಯಣ ದರ್ಶನಂ’ ಯಾತ್ರೆ ಸಂಬಂಧ ರಂಗಾಯಣ ಆವರಣದ ಕುಟೀರದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ವಿವರ ನೀಡಿದ ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, 1ನೇ ಹಂತದ ಯಾತ್ರೆಯಲ್ಲಿ 18 ಜಿಲ್ಲೆ ಗಳಲ್ಲಿ ಒಟ್ಟು 30 ಪ್ರದರ್ಶನಗಳನ್ನು ನೀಡ ಲಾಗಿದೆ. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ 2ನೇ ರಂಗ ಪಯಣ ಮಾ.2ರಿಂದ ಆರಂಭವಾಗುತ್ತಿದೆ. ದಾವಣಗೆರೆಯ ಬಾಪೂಜಿ ಸಭಾಂಗಣದಲ್ಲಿ ಮಾ.2ರ ಸಂಜೆ 6ಕ್ಕೆ ಪ್ರದರ್ಶನ ನಡೆಯಲಿದೆ. ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಏ.21ರವರೆಗೂ ಪ್ರದರ್ಶನಗಳು ನಡೆಯಲಿವೆ ಎಂದು ವಿವರಿಸಿದರು.

ಮೈಸೂರಿನಲ್ಲಿ 50ನೇ ಪ್ರದರ್ಶನ: ಮೈಸೂರಿನ ರಂಗಾಯಣದ ಭೂಮಿಗೀತಾದಲ್ಲಿ ಸಂಜೆ 6ಕ್ಕೆ ನಾಟಕ ಪ್ರದರ್ಶನ ನಡೆಯಲಿದ್ದು, ಇದು 1ನೇ ಹಂತದ ಪ್ರದರ್ಶನವೂ ಒಳಗೊಂಡಂತೆ 50ನೇ ಪ್ರದರ್ಶನ ಆಗಲಿದ್ದು, ಈ ಸಂದರ್ಭದಲ್ಲಿ ಹಲವು ವಿಶೇಷಗಳು ಇರಲೆಂದು ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಹಾಗೂ ಅವರ ಪತಿ ಚಿದಾನಂದಗೌಡ ಅವರನ್ನು ಆಹ್ವಾನಿಸಲಾಗು ವುದು. ಜೊತೆಗೆ ಅನೇಕ ಗಣ್ಯರನ್ನು ಆಹ್ವಾನಿಸಲು ಉದ್ದೇ ಶಿಸಲಾಗಿದೆ ಎಂದು ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.

30 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಂದ ವೀಕ್ಷಣೆ: ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಮಾತನಾಡಿ, ಮೊದಲ ಹಂತದಲ್ಲಿ ಒಟ್ಟಾರೆ 30 ಸಾವಿರಕ್ಕೂ ಅಧಿಕ ಪ್ರೇಕ್ಷಕರು ನಾಟಕ ವೀಕ್ಷಿಸಿ ದ್ದಾರೆ. ಕೋಲಾರದಲ್ಲಿ ಹಳ್ಳಿಗಳಲ್ಲಿ ಎತ್ತಿನ ಗಾಡಿ ಗಳಲ್ಲಿ ಬಂದು ನಾಟಕ ನೋಡಿದ್ದಾರೆ. ಇದೀಗ ರಂಗಾಯಣದ ಕಿರಿಯ ಹಾಗೂ ಹಿರಿಯ ಕಲಾ ವಿದರು ಸೇರಿದಂತೆ 40ಕ್ಕೂ ಹೆಚ್ಚು ಕಲಾವಿದರಿಂದ ನಾಟಕ ಪ್ರದರ್ಶನಗಳು ನಡೆಯಲಿವೆ ಎಂದು ಹೇಳಿದರು.
ನಿರಂತರ ಕಾರ್ಯಕ್ರಮ: 50ನೇ ಪ್ರದರ್ಶನಕ್ಕೆ `ಶ್ರೀರಾಮಾಯಣ ದರ್ಶನಂ’ ಸೀಮಿತಗೊಳಿ ಸದೆ, ನಿರಂತರವಾಗಿ ಪ್ರದರ್ಶನ ನೀಡಲು ರೂಪುರೇಷೆ ಸಿದ್ಧಪಡಿಸಲು ಉದ್ದೇಶಿಸಲಾಗಿದೆ. ಕಳೆದ ಬಾರಿಯಂತೆ ಈ ಪ್ರದರ್ಶನಗಳಿಗೂ ಮೈಸೂರಿನಲ್ಲಿ 50 ರೂ. ಟಿಕೆಟ್ ದರ ನಿಗದಿ ಗೊಳಿಸಿದೆ. ಆದರೆ ರಾಜ್ಯದ ಬೇರೆ ಭಾಗಗಳಲ್ಲಿ ಸಹಯೋಗ ನೀಡುವವರು ಟಿಕೆಟ್ ದರ ನಿಗದಿಗೊಳಿಸುವ ಹಿನ್ನೆಲೆಯಲ್ಲಿ ಹೆಚ್ಚೆಂದರೆ 100 ರೂ. ಟಿಕೆಟ್ ದರ ಆಗಬಹುದು. ಮೈಸೂರಿನಲ್ಲಿ 8 ಪ್ರದರ್ಶನಗಳು ನಡೆಯಲಿದ್ದು, ಇದಕ್ಕಾಗಿ ಇಂದಿನಿಂದಲೇ ರಂಗಾಯಣಕ್ಕೆ ಕಚೇರಿ ವೇಳೆ ಯಲ್ಲಿ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಿಕೊ ಳ್ಳಬಹುದು ಎಂದು ತಿಳಿಸಿದರು. ಇದೇ ವೇಳೆ 2ನೇ ರಂಗ ಯಾತ್ರೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ರಂಗಾಯಣದ ಹಿರಿಯ ಕಲಾವಿದರಾದ ಜಗದೀಶ ಮನೆವಾರ್ತೆ, ಕೃಷ್ಣಕುಮಾರ್ ನಾರ್ಣಕಜೆ, ಪ್ರಶಾಂತ ಹೀರೆಮಠ, ಎಂ.ಎಸ್.ಗೀತಾ ಹಾಜರಿದ್ದರು.

Translate »