ಗಡಿ ಕಾಯುವ ಯೋಧರು ದೇಶ ರಕ್ಷಿಸಿದರೆ.. ಸಫಾಯಿ  ಕರ್ಮಚಾರಿ ಯೋಧರಿಂದ ದೇಶದ ಆರೋಗ್ಯ ರಕ್ಷಣೆ
ಮೈಸೂರು

ಗಡಿ ಕಾಯುವ ಯೋಧರು ದೇಶ ರಕ್ಷಿಸಿದರೆ.. ಸಫಾಯಿ ಕರ್ಮಚಾರಿ ಯೋಧರಿಂದ ದೇಶದ ಆರೋಗ್ಯ ರಕ್ಷಣೆ

February 28, 2019

ಮೈಸೂರು: ಗಡಿ ಕಾಯುವ ಯೋಧರು ದೇಶವನ್ನು ಶತ್ರುಗಳಿಂದ ರಕ್ಷಿಸುತ್ತಿದ್ದರೆ, ದೇಶದೊಳಗಿನ ಆರೋಗ್ಯವನ್ನು ರಕ್ಷಿಸುತ್ತಿರುವವರು ಸಫಾಯಿ ಕರ್ಮಚಾರಿ ಪೌರ ಕಾರ್ಮಿಕ ಯೋಧರು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋ ಗದ ಸದಸ್ಯ ಜಗದೀಶ್ ಹಿರೇಮಣಿ ತಿಳಿಸಿದರು.

ಮೈಸೂರು ಮಹಾರಾಜ ಕಾಲೇಜು ಶತಮಾನೋ ತ್ಸವ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಮೈಸೂರು ಮಹಾನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಸ್ಕ್ಯಾವೆಂ ಜರ್ ಮತ್ತು ಸಫಾಯಿ ಕರ್ಮಚಾರಿಗಳಿಗೆ ಜಾಗೃತಿ ಶಿಬಿರ ಹಾಗೂ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

2020ರ ಹೊತ್ತಿಗೆ ಪೌರ ಕಾರ್ಮಿಕರ ಸಮು ದಾಯ ಮೇಲುಸ್ತರಕ್ಕೆ ಹೋಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 5 ಅಂಶಗಳ ಕಾರ್ಯಕ್ರಮವನ್ನು ಕಡ್ಡಾಯ ಅನುಷ್ಟಾನಗೊಳಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೂ ಸ್ಪಷ್ಟ ಸೂಚನೆ ನೀಡಿದೆ. ಪೌರ ಕಾರ್ಮಿಕರ ಖಾಯಂ ಮಾಡಬೇಕು, ಅಲ್ಲಿಯವರೆಗೆ ನೇರ ವೇತನ ನೀಡ ಬೇಕು, ಸ್ವಂತ ಮನೆ ನೀಡಬೇಕು, ಪ್ರತಿ ತಿಂಗಳು ಕಡ್ಡಾಯ ವಾಗಿ ಆರೋಗ್ಯ ತಪಾಸಣೆ ನಡೆಸಬೇಕು, ಪೌರ ಕಾರ್ಮಿ ಕರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಸ್ವಯಂ ಉದ್ಯೋಗ ವನ್ನು ಕಲ್ಪಿಸಿ ಕೊಡಬೇಕು. ಈ ಐದು ಅಂಶಗಳ ಕಡ್ಡಾಯ ಅನುಷ್ಠಾನ ಮಾಡದ ಅಧಿಕಾರಿಗಳ ವಿರುದ್ಧ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಸ್ಕ್ಯಾವೆಂಜರ್‍ಗಳು ಒಳಚರಂಡಿಗಳಿಗೆ ಇಳಿಯ ಬೇಡಿ: ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳು ಯಾವುದೇ ಕಾರಣಕ್ಕೂ ಒಳಚರಂಡಿಯೊಳಗೆ ಇಳಿದು ಕೆಲಸ ಮಾಡ ಬೇಡಿ. ಒಳಚರಂಡಿಗೆ ಇಳಿಯುವುದಿಲ್ಲ ಎಂಬ ಸಂಕಲ್ಪ ವನ್ನು ಅವರು ಮಾಡಬೇಕು ಎಂದು ಕರೆ ನೀಡಿದ ಅವರು, ಗುರ್ತಿಸಲ್ಪಟ್ಟ ಸ್ಕ್ಯಾವೆಂಜರ್‍ಗಳಿಗೆ ಪುನರ್ವಸತಿ ಕಲ್ಪಿ ಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

ಆರೋಗ್ಯ ಕೈ ಕೊಡುವ ಮುನ್ನ ಎಚ್ಚರ ವಹಿಸಿ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಪೌರ ಕಾರ್ಮಿಕರಿಗೆ ಸಲಹೆ ನೀಡಿದ ಅವರು, ನಮ್ಮ ಮಕ್ಕಳಿಗೆ ಇದೇ ಕೆಲಸ ಮಾಡಿಸುವುದಿಲ್ಲ. ಇಂಜಿನಿ ಯರೊ, ಡಾಕ್ಟರೋ ಅಥವಾ ಉನ್ನತ ಹುದ್ದೆಗಳಿಗೆ ಕಳಿಸುವ ಸಂಕಲ್ಪ ಮಾಡಿ ಎಂದು ಸಲಹೆ ನೀಡಿದರು.

ಇಂದಿರಾ ಕ್ಯಾಂಟೀನ್‍ನಲ್ಲಿ ಪೌರ ಕಾರ್ಮಿಕರಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ಬೆಳಗಿನ ತಿಂಡಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗುತ್ತಿಗೆ ಯವರಿಗೆ ತಿಂಗಳಿಗೊಂದು ದಿನ ವೇತನ ಸಹಿತ ರಜೆ ನೀಡುವಂತೆಯೂ ತಿಳಿಸಿದರು. ಪೌರ ಕಾರ್ಮಿ ಕರು ಸಮಸ್ಯೆಗಳಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿ ಸಿದರೆ, ತೊಂದರೆ ಕೊಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ 35 ವರ್ಷಗಳಿಗೂ ಹೆಚ್ಚು ಕಾಲ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿದ ಮಹಾ ಲಕ್ಷ್ಮಿ, ಮಾರಪ್ಪ, ನಾಗಮ್ಮ ಅವರಿಗೆ ಸರ್ವೋತ್ತಮ ಪ್ರಶಸ್ತಿ ಹಾಗೂ ಹೊರಗುತ್ತಿಗೆ ನೌಕರರಾದ ಮಾರ ಮತ್ತು ಶಿವರಾಜು ಅವರನ್ನು ಸನ್ಮಾನಿಸಲಾಯಿತು. ಮೈಸೂರು ನಗರಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ಪಾಲಿಕೆ ಸದಸ್ಯೆ ಅಶ್ವಿನಿ ಶರತ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಇನ್ನಿತರರು ಉಪಸ್ಥಿತರಿದ್ದರು.

Translate »