ಉದ್ಬೂರಲ್ಲಿ ಮಹಿಳೆ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ
ಮೈಸೂರು

ಉದ್ಬೂರಲ್ಲಿ ಮಹಿಳೆ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ

February 28, 2019

ಮೈಸೂರು: ಮಹಿಳೆಯೊಬ್ಬರು ಬೆಂಕಿಗಾಹುತಿ ಯಾಗಿರುವ ದುರಂತ ಮೈಸೂರು ತಾಲೂಕು ಉದ್ಬೂರಲ್ಲಿ ಮಂಗಳ ವಾರ ರಾತ್ರಿ ಸಂಭವಿಸಿದೆ. ಉದ್ಬೂರು ಗ್ರಾಮದ ಸುರೇಶ ಅವರ ಪತ್ನಿ ಶ್ರೀಮತಿ ಭಾಗ್ಯ(26) ತೀವ್ರ ಸುಟ್ಟು ಗಾಯಗಳಾಗಿ ಸಾವನ್ನಪ್ಪಿ ದವರು. ಅದೇ ಗ್ರಾಮದವರಾದ ಭಾಗ್ಯರನ್ನು 5 ವರ್ಷಗಳ ಹಿಂದೆ ಸುರೇಶ್‍ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದ ದಂಪತಿ ನಡುವೆ ಸಾಮರಸ್ಯವಿರಲಿಲ್ಲ ಎಂದಿರುವ ಭಾಗ್ಯ ಪೋಷಕರು, ಆಕೆಯ ಪತಿ ಸುರೇಶ ಹಾಗೂ ಅತ್ತೆ ಮರಿಚಿಕ್ಕಮ್ಮ ಬೆಂಕಿ ಹಚ್ಚಿ ಹತ್ಯೆಗೈದಿದ್ದು, ವರದಕ್ಷಿಣೆಗಾಗಿ ಈ ಕೃತ್ಯವೆಸಗಲಾಗಿದೆ ಎಂದು ಆರೋಪಿಸಿ ಜಯಪುರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಜಯಪುರ ಠಾಣೆ ಪೊಲೀಸರು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

Translate »