ಮೈಸೂರು

ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ಇನ್ನಿಲ್ಲ
ಮೈಸೂರು

ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ಇನ್ನಿಲ್ಲ

February 24, 2019

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಾಹಿತಿ ಹಾಗೂ ನಿವೃತ್ತ ನ್ಯಾಯಾಧೀಶರಾದ ನಾಡೋಜ ಕೋ. ಚೆನ್ನಬಸಪ್ಪ(98) ಇಂದು ನಿಧನರಾದರು. ಚೆನ್ನಬಸಪ್ಪ ಅವರು ಐವರು ಮಕ್ಕಳನ್ನು ಅಗಲಿ ದ್ದಾರೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂ ಕಿನ ಕಾನಾಮಡುಗು ಸಮೀಪದ ಆಲೂ ರಿನಲ್ಲಿ ಹುಟ್ಟಿದ ಚೆನ್ನಬಸಪ್ಪ ವಿದ್ಯಾರ್ಥಿ ಯಾಗಿದ್ದಾಗಲೇ ‘ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಚಳವಳಿಯಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸಿದರು. ಕಾನೂನು ಪದವಿ ಓದಿದ ಅವರು ಸಾಹಿತ್ಯ ಪ್ರೇಮಿಯಾಗಿದ್ದರು. ಕುವೆಂಪು ಅವರ ಆಪ್ತ ವರ್ಗದಲ್ಲಿ ಗುರುತಿಸಿಕೊಂಡಿದ್ದ ಕೋ ಚೆನ್ನಬಸಪ್ಪ ಅವರು,…

ಕಾವೇರಿ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಸರ್ಕಾರ ನಿರ್ಧಾರ
ಮೈಸೂರು

ಕಾವೇರಿ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಸರ್ಕಾರ ನಿರ್ಧಾರ

February 24, 2019

ಬೆಂಗಳೂರು: ಕಾವೇರಿ ಜಲವಿವಾದ ಸಂದರ್ಭದಲ್ಲಿ ರೈತ ಸಮುದಾಯದವರು ಪ್ರತಿಭಟನೆ ನಡೆಸಿದಾಗ ದಾಖಲಿಸಲಾಗಿದ್ದ ಪ್ರಕರಣ ಗಳನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷ ಗಳಿಂದ ರೈತರ ಮೇಲೆ ನೂರಾರು ಪ್ರಕರಣ ದಾಖಲಾಗಿವೆ. ಸಾರ್ವ ಜನಿಕರ ಆಸ್ತಿ-ಪಾಸ್ತಿ ಹಾನಿ ಮಾಡಿ ರುವ ಪ್ರಕರಣಗಳನ್ನು ಹೊರತುಪಡಿಸಿ ಶೇ.90 ರಷ್ಟು ಕೇಸುಗಳನ್ನು ಹಿಂದಕ್ಕೆ ಪಡೆಯಲು ಸಚಿವ ಸಂಪುಟಕ್ಕೆ ಶಿಫಾರಸು ಮಾಡಲಾಗಿದೆ ಎಂದರು.ಹಲವಾರು ವರ್ಷಗಳಿಂದ ರೈತರು ನ್ಯಾಯಾಲಯಗಳಿಗೆ ಎಡತಾಕುತ್ತಿ ದ್ದಾರೆ….

ಮೈಸೂರು ಜಿಲ್ಲಾದ್ಯಂತ ಮತದಾರರ ಮಿಂಚಿನ ನೋಂದಣಿ ಆರಂಭ
ಮೈಸೂರು

ಮೈಸೂರು ಜಿಲ್ಲಾದ್ಯಂತ ಮತದಾರರ ಮಿಂಚಿನ ನೋಂದಣಿ ಆರಂಭ

February 24, 2019

ಮೈಸೂರು: ಯುವ ಮತದಾರರನ್ನು ಸೆಳೆಯಲು ಜಿಲ್ಲಾಡಳಿತವು ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಮಿಂಚಿನ ನೋಂದಣಿ ಕಾರ್ಯವನ್ನು ಆರಂಭಿಸಿದೆ. 18 ವರ್ಷ ಪೂರೈಸಿದ ಪ್ರತಿಯೊಬ್ಬ ಯುವಕ-ಯುವತಿಯರನ್ನು ಮತದಾರರ ಪಟ್ಟಿಗೆ ಸೇರಿಸಲು ಭಾರತ ಚುನಾವಣಾ ಆಯೋಗವು ಇಂದು (ಫೆ.23) ಮತ್ತು ನಾಳೆ (ಫೆ.24) ವಿಶೇಷ ಮತದಾರರ ನೋಂದಣಿ ಅಭಿಯಾನ ಏರ್ಪಡಿಸಿದೆ. ಪ್ರತೀ ಮಟ್ಟಗಳಲ್ಲಿ ಇಬ್ಬಿಬ್ಬರು ಬೂತ್ ಮಟ್ಟದ ಅಧಿಕಾರಿ ಗಳನ್ನು ನಿಯೋಜಿಸಲಾಗಿದ್ದು, ಅಲ್ಲಿಗೆ ಬರುವ ಪ್ರತಿಯೊಬ್ಬ ರಿಂದ ಅಗತ್ಯ ದಾಖಲಾತಿ ಪಡೆದುಕೊಂಡು ನಿಯಮಾನು ಸಾರ ಕ್ರಮ ವಹಿಸಲಾಗಿದೆ. ಮತದಾರರ ಪಟ್ಟಿಗೆ…

ಮೈಸೂರಲ್ಲಿ ಮಹಿಳೆಯರ ಬೃಹತ್ ಮೆರವಣಿಗೆ
ಮೈಸೂರು

ಮೈಸೂರಲ್ಲಿ ಮಹಿಳೆಯರ ಬೃಹತ್ ಮೆರವಣಿಗೆ

February 24, 2019

ಮೈಸೂರು: ಮಹಿಳಾ ಸಬಲೀಕರಣ ಕುರಿತು ಜಾಗೃತಿ ಮೂಡಿ ಸಲು ಮೈಸೂರಲ್ಲಿ ಇಂದು ಮಹಿಳೆಯರ ಬೃಹತ್ ಮೆರವಣಿಗೆ ನಡೆಯಿತು. ಧಾನ್ ಫೌಂಡೇಷನ್ ಮೈಸೂರು ವಲಯ ದಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ನಡೆದ ‘ವಾಕಥಾನ್ 2019’ ಅನ್ನು ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನ ಬಳಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು. ಧಾನ್ ಫೌಂಡೇಷನ್‍ನ ಸಂಯೋಜಕ ರಾದ ಗಜಾನನ ಹೆಗ್ಡೆ, ನಾರಾಯಣ ಹೆಗ್ಡೆ, ಶಿವಶಂಕರ್,…

ದಕ್ಷಿಣ ವಲಯ ಐಜಿಪಿಯಾಗಿ  ಉಮೇಶ್‍ಕುಮಾರ್ ಅಧಿಕಾರ
ಮೈಸೂರು

ದಕ್ಷಿಣ ವಲಯ ಐಜಿಪಿಯಾಗಿ ಉಮೇಶ್‍ಕುಮಾರ್ ಅಧಿಕಾರ

February 24, 2019

ಮೈಸೂರು: ಮೈಸೂರಿನ ದಕ್ಷಿಣ ವಲಯ ಐಜಿಪಿಯಾಗಿ ವರ್ಗಾವಣೆಗೊಂಡಿರುವ ಐಪಿಎಸ್ ಅಧಿಕಾರಿ ಉಮೇಶ್‍ಕುಮಾರ್ ಅವರು ಇಂದು ಅಧಿಕಾರ ವಹಿಸಿ ಕೊಂಡರು. ಕೆ.ವಿ. ಶರತ್‍ಚಂದ್ರ ಅವರ ವರ್ಗಾವಣೆ ನಂತರ ಪ್ರಭಾರ ಜವಾಬ್ದಾರಿ ನಿರ್ವಹಿಸುತ್ತಿದ್ದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ನೂತನ ಐಜಿಪಿ ಉಮೇಶ್‍ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಉಮೇಶ್‍ಕುಮಾರ್, ದಕ್ಷಿಣ ವಲಯದ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಪೊಲೀಸ್ ವ್ಯವಸ್ಥೆ ಯನ್ನು ಸದೃಢಗೊಳಿಸಿ ಕಾನೂನು-ಸುವ್ಯವಸ್ಥೆ ನಿರ್ವಹಣೆ ಅಪ ರಾಧ ತಡೆ ಮತ್ತು ಪತ್ತೆ…

ಲೋಕಸಭೆ ಚುನಾವಣೆಯಲ್ಲಿ ರಾಜಕೀಯ  ಪಕ್ಷಗಳಿಂದ ಕಬ್ಬು ಬೆಳೆಗಾರರ ಸಂಘ ದೂರ
ಮೈಸೂರು

ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಂದ ಕಬ್ಬು ಬೆಳೆಗಾರರ ಸಂಘ ದೂರ

February 24, 2019

ಮೈಸೂರು: ಮುಂಬರುವ ಲೋಕಸಭಾ ಚುನಾವಣೆ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಯಾವುದೇ ರಾಜ ಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದೇ ಸಮಾನ ಅಂತರ ಕಾಯ್ದುಕೊಳ್ಳಲು ನಿರ್ಧ ರಿಸಿದೆ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಬ್ಬು ಬೆಳೆಗಾರರ ಸಂಘ ಇದುವರೆಗೂ ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಂಡು ಬಂದಿದೆ. ಬಿಜೆಪಿ, ಕಾಂಗ್ರೆಸ್, ಸ್ವರಾಜ್ ಇಂಡಿಯಾ ಸೇರಿ ದಂತೆ ಯಾವ ಪಕ್ಷದೊಂದಿಗೂ ಗುರುತಿಸಿ ಕೊಳ್ಳದೆ ರೈತ ಸಂಘಟನೆಗೆ…

ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವುದರ  ವಿರುದ್ಧ ರೈತ ಸಂಘ ಹೋರಾಟ
ಮೈಸೂರು

ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವುದರ ವಿರುದ್ಧ ರೈತ ಸಂಘ ಹೋರಾಟ

February 24, 2019

ಮೈಸೂರು: ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕೈಗೊಂಡ ಕ್ರಮ ಹಾಗೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟ್ ಸೂಚಿಸಲು ಮಂಡನೆಯಾದ ಅಸಮರ್ಪಕ ವಾದವು ರೈತರು ಹಾಗೂ ಅರಣ್ಯ ವಾಸಿಗಳಿಗೆ ಮಾರಕವಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ವಿಷಾದಿಸಿ ದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೇ ಅಂಗೀಕರಿಸಿ, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದೆ. ಸ್ವಾಧೀನ ಪಡಿಸಿಕೊಂಡ ಭೂಮಿಗೆ ಮುಕ್ತ ಮಾರುಕಟ್ಟೆಯ…

ಮೆಡಿಕಲ್ ಸೀಟು ಕೊಡಿಸುವುದಾಗಿ ಲಕ್ಷ ರೂ. ವಂಚನೆ ಅಹಮದಾಬಾದ್‍ನಲ್ಲಿ ಆರೋಪಿ ಸೆರೆ
ಮೈಸೂರು

ಮೆಡಿಕಲ್ ಸೀಟು ಕೊಡಿಸುವುದಾಗಿ ಲಕ್ಷ ರೂ. ವಂಚನೆ ಅಹಮದಾಬಾದ್‍ನಲ್ಲಿ ಆರೋಪಿ ಸೆರೆ

February 24, 2019

ಮೈಸೂರು: ಮೆಡಿಕಲ್ ಸೀಟು ಕೊಡಿಸುವುದಾಗಿ ಲಕ್ಷ ರೂ.ಪಡೆದು ವಂಚಿಸಿದ್ದ ವ್ಯಕ್ತಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಅಹಮದಾಬಾದ್‍ನ ಮಹೇಶ್ ಕುಮಾರ್ ಪಟೇಲ್(46) ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಜಯನಗರ ರೈಲ್ವೆ ಬಡಾವಣೆ ನಿವಾಸಿ ವಿಪುಲ್ ಪಾಂಡೆ ಅವರ ಪುತ್ರ ಪಿಯುಸಿ ವ್ಯಾಸಂಗ ಮುಗಿಸಿದ್ದು, ಎಂಬಿಬಿಎಸ್‍ಗೆ ಸೇರಿಸಲು ಅನ್‍ಲೈನ್ ನಲ್ಲಿ ಕಾಲೇಜುಗಳ ಹುಡುಕಾಟ ನಡೆಸಿದ್ದರು. ಈ ವೇಳೆ ಮಹೇಶ್ ಕುಮಾರ್ ಪಟೇಲ್ ಪರಿಚಯವಾಗಿತ್ತು. ನಂತರದಲ್ಲಿ ಆತ ನಾನು ಪರ್ಫೆಕ್ಟ್ ಕೆರೀರ್ ಗೈಡ್ ಸಂಸ್ಥೆ ನಡೆಸು ತ್ತಿದ್ದು, ನಿಮ್ಮ ಮಗನಿಗೆ ಕಸ್ತೂರಿ…

ವಿದ್ಯುತ್ ತಂತಿ ತಗುಲಿ ಯುವಕ ಸಾವು
ಮೈಸೂರು

ವಿದ್ಯುತ್ ತಂತಿ ತಗುಲಿ ಯುವಕ ಸಾವು

February 24, 2019

ಮೈಸೂರು: ನಿಂತಿದ್ದ ಗೂಡ್ಸ್ ರೈಲು ಬೋಗಿ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಸುಟ್ಟು ಕರಕಲಾದ ಘಟನೆ ಮೈಸೂರು ತಾಲೂಕು ನಾಗನಹಳ್ಳಿಯಲ್ಲಿ ಗುರುವಾರ ಸಂಭವಿಸಿದೆ. ಶ್ರೀರಂಗಪಟ್ಟಣ ತಾಲೂಕು, ನಗುವನಹಳ್ಳಿ ಗ್ರಾಮದ ಅಂಬರೀಷ ಅವರ ಮಗ ಪ್ರೀತಮ್ ಗೌಡ(19) ಸಾವನ್ನಪ್ಪಿದ ಯುವಕ. ನಾಹನಹಳ್ಳಿ ರೈಲು ನಿಲ್ದಾಣದ ಬಳಿ ನಿಂತಿದ್ದ ಸರಕು ಸಾಗಣೆ ರೈಲು ಬೋಗಿ ಮೇಲೇರಿ ಮೊಬೈಲ್‍ನಿಂದ ಸೆಲ್ಫಿ ತೆಗೆದುಕೊಳ್ಳ ಲೆತ್ನಿಸಿದಾಗ ಟ್ರಾಕ್ ಮೇಲೆ ಹಾದು ಹೋಗಿರುವ ಎಲೆಕ್ಟ್ರಿಕ್ ವೈರ್ ಸ್ಪರ್ಶವಾಗಿ ಪ್ರೀತಮ್‍ಗೌಡ ಸ್ಥಳದಲ್ಲೇ…

ಡಾ. ಎ.ವಿ.ನರಸಿಂಹಮೂರ್ತಿಯವರ ‘ಇತಿಹಾಸದ ನಕ್ಷತ್ರಗಳು’ ಕೃತಿ ಬಿಡುಗಡೆ
ಮೈಸೂರು

ಡಾ. ಎ.ವಿ.ನರಸಿಂಹಮೂರ್ತಿಯವರ ‘ಇತಿಹಾಸದ ನಕ್ಷತ್ರಗಳು’ ಕೃತಿ ಬಿಡುಗಡೆ

February 24, 2019

ಮೈಸೂರು: ಇಂದಿನ ಸಮಾಜದಲ್ಲಿ ಇತಿಹಾಸದ ಬಗ್ಗೆ ಬಹುತೇಕ ನಿರಾಸಕ್ತಿ ಮೂಡುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವಾಂಸರೂ ತೀರಾ ವಿರಳವಿದ್ದಾರೆ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಹೇಳಿದರು. ಮೈಸೂರು ವಿಜಯನಗರದ ಭಾರ ತೀಯ ವಿದ್ಯಾಭವನದ (ಬಿವಿಬಿ) ಸಭಾಂಗಣದಲ್ಲಿ ಬಿವಿಬಿ, ಭವನ್ಸ್ ಪ್ರಿಯಂವದ ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಸಂಯುಕ್ತಾಶ್ರಯದಲ್ಲಿ ಶನಿ ವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಿವಿಬಿ ಮೈಸೂರು ಕೇಂದ್ರದ ಅಧ್ಯಕ್ಷ ಡಾ. ಎ.ವಿ.ನರಸಿಂಹಮೂರ್ತಿ ಅವರ `ಇತಿಹಾಸದ ನಕ್ಷತ್ರಗಳು’ ಕೃತಿ ಬಿಡುಗಡೆ…

1 1,110 1,111 1,112 1,113 1,114 1,611
Translate »