ವಿದ್ಯುತ್ ತಂತಿ ತಗುಲಿ ಯುವಕ ಸಾವು
ಮೈಸೂರು

ವಿದ್ಯುತ್ ತಂತಿ ತಗುಲಿ ಯುವಕ ಸಾವು

February 24, 2019

ಮೈಸೂರು: ನಿಂತಿದ್ದ ಗೂಡ್ಸ್ ರೈಲು ಬೋಗಿ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಸುಟ್ಟು ಕರಕಲಾದ ಘಟನೆ ಮೈಸೂರು ತಾಲೂಕು ನಾಗನಹಳ್ಳಿಯಲ್ಲಿ ಗುರುವಾರ ಸಂಭವಿಸಿದೆ.

ಶ್ರೀರಂಗಪಟ್ಟಣ ತಾಲೂಕು, ನಗುವನಹಳ್ಳಿ ಗ್ರಾಮದ ಅಂಬರೀಷ ಅವರ ಮಗ ಪ್ರೀತಮ್ ಗೌಡ(19) ಸಾವನ್ನಪ್ಪಿದ ಯುವಕ. ನಾಹನಹಳ್ಳಿ ರೈಲು ನಿಲ್ದಾಣದ ಬಳಿ ನಿಂತಿದ್ದ ಸರಕು ಸಾಗಣೆ ರೈಲು ಬೋಗಿ ಮೇಲೇರಿ ಮೊಬೈಲ್‍ನಿಂದ ಸೆಲ್ಫಿ ತೆಗೆದುಕೊಳ್ಳ ಲೆತ್ನಿಸಿದಾಗ ಟ್ರಾಕ್ ಮೇಲೆ ಹಾದು ಹೋಗಿರುವ ಎಲೆಕ್ಟ್ರಿಕ್ ವೈರ್ ಸ್ಪರ್ಶವಾಗಿ ಪ್ರೀತಮ್‍ಗೌಡ ಸ್ಥಳದಲ್ಲೇ ಸುಟ್ಟು ಕರಕಲಾಗಿ ಸಾವನ್ನಪ್ಪಿದ ಎಂದು ನಾಗನಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಮೈಸೂರು ರೈಲ್ವೇ ಪೊಲೀಸರು ಹಾಗೂ ಹಿರಿಯ ರೈಲ್ವೇ ಅಧಿಕಾರಿಗಳು, ಮಹಜರು ನಡೆಸಿ ಮೃತ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶುಕ್ರವಾರ ವಾರಸುದಾರರಿಗೆ ಒಪ್ಪಿಸಿದರು. ನೀರು, ಬೆಟ್ಟ-ಗುಡ್ಡ ಹಾಗೂ ಅಪಾಯದ ಸ್ಥಳಗಳಲ್ಲಿ ನಿರ್ಲಕ್ಷ್ಯತೆಯಿಂದ ಸೆಲ್ಫಿ ತೆಗೆದುಕೊಳ್ಳುವುದರಿಂದ ದುರಂತಗಳು ಸಂಭವಿಸಿ ಅಮೂಲ್ಯ ಜೀವ ನಾಶವಾಗುತ್ತದೆ ಎಂಬುದನ್ನು ಯುವಕರು ಅರ್ಥಮಾಡಿಕೊಳ್ಳಬೇಕು.

Translate »