ಲೋಕಸಭೆ ಚುನಾವಣೆಯಲ್ಲಿ ರಾಜಕೀಯ  ಪಕ್ಷಗಳಿಂದ ಕಬ್ಬು ಬೆಳೆಗಾರರ ಸಂಘ ದೂರ
ಮೈಸೂರು

ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಂದ ಕಬ್ಬು ಬೆಳೆಗಾರರ ಸಂಘ ದೂರ

February 24, 2019

ಮೈಸೂರು: ಮುಂಬರುವ ಲೋಕಸಭಾ ಚುನಾವಣೆ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಯಾವುದೇ ರಾಜ ಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದೇ ಸಮಾನ ಅಂತರ ಕಾಯ್ದುಕೊಳ್ಳಲು ನಿರ್ಧ ರಿಸಿದೆ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಬ್ಬು ಬೆಳೆಗಾರರ ಸಂಘ ಇದುವರೆಗೂ ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಂಡು ಬಂದಿದೆ. ಬಿಜೆಪಿ, ಕಾಂಗ್ರೆಸ್, ಸ್ವರಾಜ್ ಇಂಡಿಯಾ ಸೇರಿ ದಂತೆ ಯಾವ ಪಕ್ಷದೊಂದಿಗೂ ಗುರುತಿಸಿ ಕೊಳ್ಳದೆ ರೈತ ಸಂಘಟನೆಗೆ ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿ ಯುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಾ ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವುದಿಲ್ಲ ಎಂದರು.

ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿ ಸುವ ಹಾಗೂ ಕೃಷಿ ಅಭಿವೃದ್ಧಿಗೆ ಪೂರಕ ವಾಗುವ ಯೋಜನೆಗಳನ್ನು ಪ್ರಕಟಿಸ ಬೇಕು. ರೈತರ ಸಮಸ್ಯೆಗಳ ಬಗ್ಗೆ ಪ್ರಣಾಳಿಕೆ ಯಲ್ಲಿ ಬೆಳಕು ಚೆಲ್ಲುವಂತೆ ವಿವಿಧ ರಾಜ್ಯ ಗಳ 20 ರೈತ ಮುಖಂಡರು ಫೆ.27, 28 ರಂದು ನವದೆಹಲಿಯಲ್ಲಿ ಪ್ರಮುಖ ರಾಜ ಕೀಯ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದರು.

ಸರ್ಕಾರ ಕೂಡಲೇ ಎಂ.ಎಸ್.ಸ್ವಾಮಿ ನಾಥನ್ ವರದಿ ಜಾರಿಗೊಳಿಸಬೇಕು. ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಕೃಷಿ ಭೂಮಿಯ ಮಾರುಕಟ್ಟೆ ಮೌಲ್ಯಕ್ಕೆ ಅನು ಗುಣವಾಗಿ ಸಾಲ ಲಭಿಸಬೇಕು, ಹೆಚ್ಚಿನ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡ ಬೇಕು. ಬೆಳೆ ವಿಮೆ ಪದ್ಧತಿ ಬದಲಾಯಿಸ ಬೇಕು. ವರ್ಷಕ್ಕೊಮ್ಮೆ ದಕ್ಷಿಣ ಭಾರತದಲ್ಲಿ ಸಂಸತ್ ಅಧಿವೇಶನ ನಡೆಸಬೇಕು, ಕೃಷಿಗೆ ಪ್ರತ್ಯೇಕ ಉಪ ಪ್ರಧಾನಿ ಹುದ್ದೆ ನೇಮಕ ಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಿ ಕೊಂಡು ಅನುಷ್ಠಾನಗೊಳಿಸಬೇಕೆಂದು ರಾಜಕೀಯ ಪಕ್ಷಗಳ ಮುಖಂಡರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಬರಡನ ಪುರ ನಾಗರಾಜ್, ಕನಕಪುರ ರವಿ ಇದ್ದರು.

Translate »