ಮೈಸೂರು

ಕೃಷಿ ಉತ್ಪನ್ನಗಳಿಗಾಗಿ 8 ಕೋಟಿ ರೂ.ಗಳ ಶೀತಲೀಕರಣ ಘಟಕ: ಸಾರಾ
ಮೈಸೂರು

ಕೃಷಿ ಉತ್ಪನ್ನಗಳಿಗಾಗಿ 8 ಕೋಟಿ ರೂ.ಗಳ ಶೀತಲೀಕರಣ ಘಟಕ: ಸಾರಾ

February 22, 2019

ಕೆ.ಆರ್.ನಗರ: ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕೆಂಬುದು ರಾಜ್ಯ ಸರ್ಕಾರದ ಆಶಯವಾಗಿದ್ದು, 8 ಕೋಟಿ ರೂ. ವೆಚ್ಚದಲ್ಲಿ ಕೃಷಿ ಉತ್ಪನಗಳ ಶೀತಲೀಕರಣ ಘಟಕ ಆರಂಭಿಸಲು ಮುಂದಾಗಿದೆ. ಬೆಲೆ ಕುಸಿತಗೊಂಡು ರೈತರು ನಷ್ಟಕ್ಕೆ ಒಳಗಾಗುವುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಆಸಕ್ತಿ ವಹಿಸಿದ ಅವರು, ರಾಜ್ಯದಲ್ಲೆ ಪ್ರಥಮವಾಗಿ ಎಂಟು ಕೋಟಿ ರೂ. ವೆಚ್ಚದಲ್ಲಿ ಶೀತಲೀಕರಣ ಘಟಕ ಆರಂಭಿಸಲು ಯೋಜಿಸಿದ್ದಾರೆ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಹೇಳಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ…

ರೈಲ್ವೆ ಹಳಿ ಪೆಂಡ್ರಾಲ್ ಕ್ಲಿಪ್ ಖದೀಮರ ಸೆರೆ
ಮೈಸೂರು

ರೈಲ್ವೆ ಹಳಿ ಪೆಂಡ್ರಾಲ್ ಕ್ಲಿಪ್ ಖದೀಮರ ಸೆರೆ

February 22, 2019

ಮೈಸೂರು: ರೈಲು ಹಳಿಗೆ ಅಳವಡಿಸಿದ್ದ ಪೆಂಡ್ರಾಲ್ ಕ್ಲಿಪ್ (ಇಆರ್‍ಸಿ ಕ್ಲಿಪ್)ಗಳನ್ನು ಕಳವು ಮಾಡಿದ್ದ ಮೂವರನ್ನು ರೈಲ್ವೆ ರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ. ಫೆ.1ರಂದು ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ತೆರಳುತ್ತಿದ್ದ ಕಾವೇರಿ ಎಕ್ಸ್‍ಪ್ರೆಸ್ ರೈಲು ಗಾಡಿಯನ್ನು ಮೈಸೂರಿನ ರಿಂಗ್ ರಸ್ತೆ ಸಮೀಪ ಕೆಂಪು ದೀಪ ತೋರಿಸಿ ನಿಲ್ಲಿಸಿದ ಟ್ರ್ಯಾಕ್ ಮ್ಯಾನ್ ರೈಲು ನಿಧಾನವಾಗಿ ಚಲಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಭಾರೀ ರೈಲು ದುರಂತವನ್ನು ತಪ್ಪಿಸಿದ್ದಾರೆ. ರೈಲು ಟ್ರ್ಯಾಕ್‍ಗೆ ಅಳವಡಿಸಿದ್ದ 74 ಕ್ಲಿಪ್‍ಗಳನ್ನು ಕಳವು ಮಾಡಿದ್ದ ಪಶ್ಚಿಮ ಬಂಗಾಳ ಮೂಲದ…

ಮೈಸೂರು-ನರಸೀಪುರ ರಸ್ತೆ ಚತುಷ್ಪಥ-ಮುಂದಿನ ಗುರಿ: ಸಂಸದ ಧ್ರುವನಾರಾಯಣ
ಮೈಸೂರು

ಮೈಸೂರು-ನರಸೀಪುರ ರಸ್ತೆ ಚತುಷ್ಪಥ-ಮುಂದಿನ ಗುರಿ: ಸಂಸದ ಧ್ರುವನಾರಾಯಣ

February 22, 2019

ತಿ.ನರಸೀಪುರ: ಮೈಸೂರು-ನರಸೀಪುರ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ, ಕೇಂದ್ರದಿಂದ ಅನುದಾನ ತರುವುದು ಹಾಗೂ ವಿದ್ಯಾವಂತ ಯುವ ಸಮೂಹಕ್ಕೆ ಉದ್ಯೋಗಕ್ಕೆ ಸಹಕಾರಿಯಾಗುವಂತಹ ಕೌಶಲ ತರಬೇತಿ ಕಲ್ಪಿಸಿಕೊಡಲು ಕಾರ್ಯಕ್ರಮಗಳನ್ನು ರೂಪಿಸುವುದು ನನ್ನ ಮುಂದಿನ ಗುರಿಯಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು. ತಾಲ್ಲೂಕಿನ ಸೋಸಲೆ ಗ್ರಾಮದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 45 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ 419 ಕೋಟಿ ರೂ. ಯೋಜನೆಯಡಿ…

ತಾಂಡವಪುರದಲ್ಲಿಂದು ಬೃಹತ್ ಉದ್ಯೋಗ ಮೇಳ
ಮೈಸೂರು

ತಾಂಡವಪುರದಲ್ಲಿಂದು ಬೃಹತ್ ಉದ್ಯೋಗ ಮೇಳ

February 22, 2019

ತಾಂಡವಪುರ: ನಂಜನಗೂಡು ತಾಲೂಕು ತಾಂಡವಪುರ ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶನಿವಾರ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ನಿರುದ್ಯೋಗಿ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ವರುಣಾ ಕ್ಷೇತ್ರದ ಶಾಸಕ ಡಾ.ಎಸ್.ಯತೀಂದ್ರ ಹೇಳಿದರು. ಉದ್ಯೋಗ ಮೇಳದ ವೇದಿಕೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಹಂತ ಹಂತವಾಗಿ ಈ ಸಮಸ್ಯೆ ಪರಿಹರಿಸಲಾಗುವುದು ಎಂದರು. ಉದ್ಯೋಗ ಮೇಳಕ್ಕೆ ಕೊಳ್ಳೇಗಾಲದ ಅಕ್ಷರ ಫೌಂಡೇಶನ್ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಕರಾಗಿದ್ದು,…

ರಾಜ್ಯದಲ್ಲಿದ್ದಾರೆ 5,03,07,182 ಅರ್ಹ ಮತದಾರರು
ಮೈಸೂರು

ರಾಜ್ಯದಲ್ಲಿದ್ದಾರೆ 5,03,07,182 ಅರ್ಹ ಮತದಾರರು

February 22, 2019

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು 2019ರ ಜ.16ರವರೆಗಿನ ರಾಜ್ಯದ ಮತದಾರರ ವಿವರಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ 2,54,55,976 ಪುರುಷರು, 2,48,46,488 ಮಹಿಳೆಯರು 28,996 ಇತರರೂ ಸೇರಿದಂತೆ ಒಟ್ಟು 5,03,07,182 ಮತ ದಾರರಿದ್ದಾರೆ. ಅವರಲ್ಲಿ 18ರಿಂದ 19 ವರ್ಷ ವಯಸ್ಸಿನವರಾಗಿದ್ದು, ಇದೇ ಪ್ರಥಮ ಬಾರಿಗೆ 7,12,606 ಮಂದಿ ಮತದಾನದ ಹಕ್ಕನ್ನು ಹೊಂದಿದ್ದಾರೆ. ಬೆಳಗಾವಿ ಜಿಲ್ಲೆ ಹೆಚ್ಚಿನ ಮತದಾರರನ್ನು ಹೊಂದಿ ರುವ ಜಿಲ್ಲೆಯಾಗಿದ್ದು, ಇಲ್ಲಿ 18,71,307 ಪುರುಷರು, 18,30,708 ಮಹಿಳೆಯರು, 123 ಇತರರೂ ಸೇರಿದಂತೆ ಒಟ್ಟು 37,02,138…

ಲೋಕಸಭಾ ಚುನಾವಣೆ ಹಿನ್ನೆಲೆ: ಐಎಎಸ್, ಐಪಿಎಸ್ ಸೇರಿದಂತೆ ಅಧಿಕಾರಿಗಳ ಭಾರೀ ವರ್ಗಾವರ್ಗಿ
ಮೈಸೂರು

ಲೋಕಸಭಾ ಚುನಾವಣೆ ಹಿನ್ನೆಲೆ: ಐಎಎಸ್, ಐಪಿಎಸ್ ಸೇರಿದಂತೆ ಅಧಿಕಾರಿಗಳ ಭಾರೀ ವರ್ಗಾವರ್ಗಿ

February 22, 2019

ಬೆಂಗಳೂರು: ಮುಂಬರುವ ಲೋಕ ಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಐಎಎಸ್, ಐಪಿಎಸ್ ಹಾಗೂ ಕೆಳವರ್ಗದ ಅಧಿಕಾರಿಗಳನ್ನು ವರ್ಗಾವರ್ಗಿ ಮಾಡಿದೆ. ಕೇಂದ್ರ ಚುನಾವಣಾ ಆಯೋಗ ನೀಡಿರುವ ಗಡುವು ಮತ್ತು ಮಾರ್ಗಸೂಚಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಗಿರುವ ಅಧಿಕಾರ ಬಳಸಿಕೊಂಡು, ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ವರ್ಗಾವರ್ಗಿಗೆ ಚಾಲನೆ ನೀಡಿದೆ. ನಿನ್ನೆಯಷ್ಟೇ ಸಚಿವಾಲಯ ಹಾಗೂ ಜಿಲ್ಲಾ ಮಟ್ಟದಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾ ವಣೆ ಮಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ತಡರಾತ್ರಿ ಹಿರಿಯ ಐಪಿಎಸ್…

ರಸ್ತೆಬದಿ ಶೌಚಾಲಯಕ್ಕೆ ಕಾರು ಡಿಕ್ಕಿ:ನಾಲ್ವರು ಸಾವು
ಮೈಸೂರು

ರಸ್ತೆಬದಿ ಶೌಚಾಲಯಕ್ಕೆ ಕಾರು ಡಿಕ್ಕಿ:ನಾಲ್ವರು ಸಾವು

February 22, 2019

ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀ ವೇಗವಾಗಿ ಚಲಿಸಿದ ಕಾರು ರಸ್ತೆ ಬದಿಯ ಸೇಫ್ಟಿ ಗಾರ್ಡ್ ಮತ್ತು ತಾತ್ಕಾಲಿಕ ಶೌಚಾಲಯಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿ ಕುಟುಂಬದ ನಾಲ್ವರು ಸಜೀವ ದಹನವಾದ ಹೃದಯವಿದ್ರಾವಕ ಘಟನೆ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಬೆಂಗಳೂರು ಮೂಲದ ಖಾಸಗಿ ಕಂಪನಿಯೊಂದರ ಉದ್ಯೋಗಿ, ವಿವೇಕ್ ನಾಯಕ್ (45) ಅವರ ಪತ್ನಿ ರೇಷ್ಮಾ(38), ಪುತ್ರಿ ವಿನಂತಿ ನಾಯಕ್(10), ಪುತ್ರ ವಿಘ್ನೇಶ್ ನಾಯಕ್(4) ಅಪಘಾತದಲ್ಲಿ ಮೃತಪಟ್ಟವರು. ವಿವರ:…

ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ : ಮತ್ತೆ ಜೆಡಿಎಸ್-ಬಿಜೆಪಿ ದೋಸ್ತಿ
ಮೈಸೂರು

ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ : ಮತ್ತೆ ಜೆಡಿಎಸ್-ಬಿಜೆಪಿ ದೋಸ್ತಿ

February 22, 2019

ಮೈಸೂರು: ತೆರವಾಗಿರುವ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಫೆ.23ರಂದು ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಕಸರತ್ತಿನ ನಡುವೆಯೂ ಜೆಡಿಎಸ್ ಹಾಗೂ ಬಿಜೆಪಿ ದೋಸ್ತಿ ಮುಂದುವರಿಯುವುದು ಖಚಿತವಾಗಿದೆ. ಮೈಸೂರಿನ ಜಲದರ್ಶಿನಿ ಅತಿಥಿಗೃಹ ಹಾಗೂ ಖಾಸಗಿ ಹೋಟೆಲ್‍ನಲ್ಲಿ 2 ಸಭೆ ನಡೆಸಿದ ಜೆಡಿಎಸ್ ನಾಯಕರು, ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸುವ ನಿರ್ಧಾರಕ್ಕೆ ಬಂದಿ ದ್ದಾರೆ. ರಾಜ್ಯದ ದೋಸ್ತಿ ಕಾಂಗ್ರೆಸ್, ಜಿಪಂನಲ್ಲೂ ಜೆಡಿಎಸ್ ಸಖ್ಯ ಬೆಳೆಸಲು ಕಸರತ್ತು ನಡೆಸಿತ್ತು. ಆದರೆ ಈ ಬಗ್ಗೆ ಜೆಡಿಎಸ್ ಸದಸ್ಯರಲ್ಲಿ ಅಸಮಾಧಾನವಿತ್ತು. ಹಾಗಾಗಿ ಬಿಜೆಪಿ…

ರಾಜಕೀಯಕ್ಕಾಗಿ ಮಂಡ್ಯಕ್ಕೆ ಬಂದಿಲ್ಲ, ಮಂಡ್ಯಕ್ಕೆ  ಬರೋದಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ: ಸುಮಲತಾ
ಮಂಡ್ಯ, ಮೈಸೂರು

ರಾಜಕೀಯಕ್ಕಾಗಿ ಮಂಡ್ಯಕ್ಕೆ ಬಂದಿಲ್ಲ, ಮಂಡ್ಯಕ್ಕೆ ಬರೋದಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ: ಸುಮಲತಾ

February 22, 2019

ಭಾರತೀನಗರ: ರಾಜಕೀಯಕ್ಕೆ ಬರಬೇಕೆಂದು ಮಂಡ್ಯಕ್ಕೆ ಬಂದಿಲ್ಲ, ಮಂಡ್ಯಕ್ಕೆ ಬರಬೇಕೆಂದು ರಾಜಕೀಯಕ್ಕೆ ಬರುತ್ತಿದ್ದೇನೆ ಎಂದು ಚಿತ್ರನಟಿ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು. ಗುರುವಾರ ತಮ್ಮ ಮನೆ ದೇವರು ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಂಬರೀಶ್ ಹುಟ್ಟೂರು ಮಂಡ್ಯ ಜಿಲ್ಲೆ ಬಿಟ್ಟರೆ ಇನ್ನೆಲ್ಲೂ ಈ ಪ್ರೀತಿ ನನಗೆ ಸಿಕ್ಕಿಲ್ಲ ಎಂದು ಭಾವುಕರಾದರು. ಜಿಲ್ಲೆಯ ಜನತೆಯ ಋಣ ನಮ್ಮ ಮೇಲಿದೆ. ಅದನ್ನು ತೀರಿಸಲು ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ. ಇದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ತಂದಿದ್ದೇನೆ ಎಂದರು. ಕಾಂಗ್ರೆಸ್…

ಆರೋಪಿ ಗಣೇಶ್ ಜೈಲುಪಾಲು
ಮೈಸೂರು

ಆರೋಪಿ ಗಣೇಶ್ ಜೈಲುಪಾಲು

February 22, 2019

ಬೆಂಗಳೂರು: ಮಾಜಿ ಸಚಿವ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಾಜಿ ರೌಡಿ, ಅದೇ ಪಕ್ಷದ ಶಾಸಕ ಕಂಪ್ಲಿ ಗಣೇಶ್‍ಗೆ ಜೈಲೇ ಗತಿಯಾ ಗಿದೆ. ಆನಂದ್‍ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ, ಸರಿಸುಮಾರು ಒಂದು ತಿಂಗಳಿ ನಿಂದ ತಲೆಮರೆಸಿಕೊಂಡಿದ್ದ ಗಣೇಶ್ ಅವರನ್ನು ಬಿಡದಿ ಪೊಲೀಸರು ನಿನ್ನೆ ಗುಜರಾತ್‍ನ ಅಹಮದಾಬಾದ್‍ನ ಹೊರ ವಲಯದಲ್ಲಿ ಬಂಧಿಸಿ, ಇಂದು ಮುಂಜಾನೆ ಬೆಂಗಳೂರಿಗೆ ಕರೆ ತಂದಿದ್ದರು. ವಿಚಾ ರಣೆ ನಡೆಸಿದ ನಂತರ ಅವರ ಆರೋಗ್ಯ ತಪಾಸಣೆ ಮಾಡಿ, ಹೆಚ್ಚಿನ…

1 1,112 1,113 1,114 1,115 1,116 1,611
Translate »