ಕೆ.ಆರ್.ನಗರ: ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕೆಂಬುದು ರಾಜ್ಯ ಸರ್ಕಾರದ ಆಶಯವಾಗಿದ್ದು, 8 ಕೋಟಿ ರೂ. ವೆಚ್ಚದಲ್ಲಿ ಕೃಷಿ ಉತ್ಪನಗಳ ಶೀತಲೀಕರಣ ಘಟಕ ಆರಂಭಿಸಲು ಮುಂದಾಗಿದೆ. ಬೆಲೆ ಕುಸಿತಗೊಂಡು ರೈತರು ನಷ್ಟಕ್ಕೆ ಒಳಗಾಗುವುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಆಸಕ್ತಿ ವಹಿಸಿದ ಅವರು, ರಾಜ್ಯದಲ್ಲೆ ಪ್ರಥಮವಾಗಿ ಎಂಟು ಕೋಟಿ ರೂ. ವೆಚ್ಚದಲ್ಲಿ ಶೀತಲೀಕರಣ ಘಟಕ ಆರಂಭಿಸಲು ಯೋಜಿಸಿದ್ದಾರೆ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಮತ್ತು ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿದ ಸಾರಾ, ಕೆ.ಆರ್.ನಗರದ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 10ಕೋಟಿ ರೂ. ನೀಡಿದ್ದು, ನಾಳೆ ಭೂಮಿ ಪೂಜೆ ನಡೆಯಲಿದೆ. ಜತೆಗೆ ಗುಂಪು ಮನೆ ನಿರ್ಮಾಣ ಕಾಮಗಾರಿಗೂ ಭೂಮಿ ಪೂಜೆ ಆಗಲಿದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ರಸೀತಿ ಹಣ ಸರ್ಕಾರದ್ದು, ಆದಾಯ ಸೋರಿಕೆಗೆ ಅವಕಾಶ ಕೊಡಬೇಡಿ ಎಂದು ರೈತರನ್ನು ಎಚ್ಚರಿಸಿದರು.
ಈ ತಾಲೂಕಿನ ಇತಿಹಾಸದಲ್ಲೆ ಮೊದಲಬಾರಿಗೆ ರಸ್ತೆ ಕಾಮಗಾರಿಗೆ 16 ಕೋಟಿ ರೂ., ಲಿಫ್ಟ್ ಇರಿಗೇಷನ್‍ಗೆ 20 ಕೋಟಿ ರೂ., ಹಳೆಯ ನಾಲೆಗಳ ನವೀಕರಣ ಮತ್ತು ಕೆರೆಗೆ ನೀರು ತುಂಬಿಸುವ ಕೆಲಸಕ್ಕೆ 80 ಕೋಟಿ ರೂ. ಹಣ ತಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಅತಿಥಿಗೃಹ ಮತ್ತು ಕ್ಯಾಂಟೀನ್ ಕಟ್ಟಡಗಳನ್ನು ಅಭಿವೃದ್ಥಿ ಪಡಿಸುವ ಕಾಮಗಾರಿ ಪ್ರಾಂಗÀಣದ ಅಂಗಳಕ್ಕೆ ಕಾಂಕ್ರೀಟ್ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು. ಮತ್ತು 1000 ಮೆಟ್ರಿಕ್ ಟನ್ ಸಾಮಥ್ರ್ಯದ ಗೋದಾಮು ನಿರ್ಮಾಣ ಕಾಮಗಾರಿಗೆ ಚಾಲನೆ ನಿಡಿದರು.
ಸಚಿವ ಸಾ.ರಾ.ಮಹೇಶರನ್ನು ಕುಪ್ಪಳ್ಳಿ ಸೋಮು ಸನ್ಮಾನಿಸಿದರು. ಎಪಿಎಂಸಿ ಆಡಳಿತ ಮಂಡಳಿಯ ಚುನಾಯಿತ ಪ್ರತಿನಿಧಿ ನಿರ್ದೇಶಕರನ್ನೂ ಇದೇ ವೇಳೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪುರಸಭಾಧ್ಯಕ್ಷೆ ಹರ್ಷಲತಾ ದನಂಜಯ, ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ರವಿಶಂಕರ, ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಮಹೇಶ, ಮೈಸೂರು ಹಾಲು ಒಕ್ಕೂಟದ ಎ.ಟಿ.ಸೋಮಶೇಖರ್, ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕುಪ್ಪಳ್ಳಿ ಸೋಮಣ್ಣ ನಿರ್ದೇಶಕರಾದ ಬಿ.ಗಾಯತ್ರಮ್ಮ, ಹೆಚ್.ಸಿ.ಕೃಷ್ಣೇಗೌಡ, ಹೆಚ್.ಹೆಚ್.ನಾಗೇಂದ್ರ, ಹೆಚ್.ಕೆ.ಗೋವಿಂದೇಗೌಡ, ಕೆ.ಬಿ.ನಟರಾಜು, ಕೆ.ಆರ್.ಹಿರಣ್ಣಯ್ಯ, ಚಂದ್ರಶೇಖರ್, ಎಂ.ಬಿ.ನಾಗರಾಜು, ಮಲ್ಲಿಕಾ, ಸಿದ್ದಲಿಂಗಮ್ಮ, ಸಿದ್ದೇಗೌಡ, ಹೆಚ್.ಪಿ.ಪ್ರಶಾಂತ್, ಹೆಚ್.ಸಿ.ಎಂ.ರಾಣಿ ಇನ್ನಿತರರಿದ್ದರು.