ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು 2019ರ ಜ.16ರವರೆಗಿನ ರಾಜ್ಯದ ಮತದಾರರ ವಿವರಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ 2,54,55,976 ಪುರುಷರು, 2,48,46,488 ಮಹಿಳೆಯರು 28,996 ಇತರರೂ ಸೇರಿದಂತೆ ಒಟ್ಟು 5,03,07,182 ಮತ ದಾರರಿದ್ದಾರೆ. ಅವರಲ್ಲಿ 18ರಿಂದ 19 ವರ್ಷ ವಯಸ್ಸಿನವರಾಗಿದ್ದು, ಇದೇ ಪ್ರಥಮ ಬಾರಿಗೆ 7,12,606 ಮಂದಿ ಮತದಾನದ ಹಕ್ಕನ್ನು ಹೊಂದಿದ್ದಾರೆ. ಬೆಳಗಾವಿ ಜಿಲ್ಲೆ ಹೆಚ್ಚಿನ ಮತದಾರರನ್ನು ಹೊಂದಿ ರುವ ಜಿಲ್ಲೆಯಾಗಿದ್ದು, ಇಲ್ಲಿ 18,71,307 ಪುರುಷರು, 18,30,708 ಮಹಿಳೆಯರು, 123 ಇತರರೂ ಸೇರಿದಂತೆ ಒಟ್ಟು 37,02,138 ಮತದಾರರಿದ್ದಾರೆ. ಇವ ರಲ್ಲಿ 59,059 ಮಂದಿ 18ರಿಂದ 19 ವರ್ಷದವರಾಗಿದ್ದು, ಇದೇ ಪ್ರಥಮ ಬಾರಿಗೆ ಮತ ದಾನದ ಹಕ್ಕನ್ನು ಹೊಂದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಅತೀ ಕಡಿಮೆ ಮತದಾರರನ್ನು ಹೊಂದಿರುವ ಜಿಲ್ಲೆ ಯಾಗಿದ್ದು, ಇಲ್ಲಿ 4,09,767 ಪುರುಷರು, 4,03,015 ಮಹಿಳೆಯರು, 120 ಇತರರೂ ಸೇರಿದಂತೆ ಒಟ್ಟು 8,12,902 ಮತದಾರರಿದ್ದಾರೆ. ಇವರಲ್ಲಿ 16,137 ಮಂದಿ 18ರಿಂದ 19 ವರ್ಷ ವಯಸ್ಸಿನವರಾಗಿದ್ದು, ಇದೇ ಪ್ರಥಮ ಬಾರಿಗೆ ಮತದಾನದ ಹಕ್ಕನ್ನು ಹೊಂದಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 12,35,313 ಪುರುಷರು, 12,29,607 ಮಹಿಳೆಯರು, 182 ಇತರರೂ ಸೇರಿ ದಂತೆ ಒಟ್ಟು 24,65,102 ಮತದಾರರಿದ್ದು, ಅವರಲ್ಲಿ 29,858 ಮಂದಿ ಇದೇ ಪ್ರಥಮ ಬಾರಿಗೆ ಮತದಾನದ ಹಕ್ಕು ಹೊಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ 2,15,977 ಪುರುಷರು, 2,18,254 ಮಹಿಳೆಯರು, 25 ಇತ ರರೂ ಸೇರಿದಂತೆ ಒಟ್ಟು 4,34,256 ಮತದಾರರಿದ್ದು, ಇವರ ಪೈಕಿ 5,147 ಮಂದಿ ಪ್ರಥಮ ಬಾರಿಗೆ ಮತ ದಾನದ ಹಕ್ಕು ಹೊಂದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 7,42,697 ಪುರುಷರು, 7,42,237 ಮಹಿಳೆಯರು, 131 ಇತರರೂ ಸೇರಿ ಒಟ್ಟು 14,85, 065 ಮತದಾರ ರಿದ್ದು, ಇವರ ಪೈಕಿ 18,769 ಮಂದಿ ಪ್ರಥಮ ಬಾರಿಗೆ ಮತದಾನದ ಹಕ್ಕು ಹೊಂದಿದ್ದಾರೆ. ಚಾಮರಾಜ ನಗರ ಜಿಲ್ಲೆಯಲ್ಲಿ 4,13,356 ಪುರುಷರು, 4,16,278 ಮಹಿಳೆ ಯರು, 62 ಇತರರೂ ಸೇರಿ ಒಟ್ಟು 8,29, 696 ಮತದಾರ ರಿದ್ದು, ಅವರ ಪೈಕಿ 11,266 ಮಂದಿ ಪ್ರಥಮ
ಬಾರಿಗೆ ಮತದಾರರ ಹಕ್ಕು ಹೊಂದಿದ್ದಾರೆ. ಹಾಸನ ಜಿಲ್ಲೆ ಯಲ್ಲಿ 7,21,677 ಪುರುಷರು, 7,08,053 ಮಹಿಳೆಯರು, 35 ಇತರರೂ ಸೇರಿ ಒಟ್ಟು 14,29,765 ಮತದಾರರಿದ್ದು, ಇವರ ಪೈಕಿ 14,945 ಮಂದಿ ಪ್ರಥಮ ಬಾರಿಗೆ ಮತದಾನದ ಹಕ್ಕು ಹೊಂದಿದ್ದಾರೆ. 2019ರ ಜ.1ಕ್ಕೆ 18 ವರ್ಷ ತುಂಬಿದವರು ಮತ ದಾರ ರಾಗಲು ಹಕ್ಕುಳ್ಳವರಾಗಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಕಾರ್ಯ ಪ್ರಗತಿಯಲ್ಲಿದೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ನಡೆದಿದ್ದು, ಅದರ ಮೂಲಕ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳದಿದ್ದ 6.35 ಲಕ್ಷ ಅರ್ಹ ಮತದಾರರನ್ನು ನೋಂದಾ ಯಿಸಿಕೊಳ್ಳಲಾಗಿದೆ. ಒಟ್ಟು 7.52 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಅದರಲ್ಲಿ 4.72 ಲಕ್ಷ ಮತದಾರರು ಸ್ಥಳಾಂತರ ಗೊಂಡಿದ್ದು, 1.95 ಲಕ್ಷ ಮತದಾರರು ಮೃತಪಟ್ಟಿದ್ದಾರೆ ಹಾಗೂ 80,010 ಪುನ ರಾವರ್ತನೆಗೊಂಡ ಮತದಾರರನ್ನು ಕೈಬಿಡ ಲಾಗಿದೆ. ಒಟ್ಟು 3.72 ಲಕ್ಷ ವಿಶೇಷ ಚೇತನ ಮತದಾರರನ್ನು ನೋಂದಾಯಿಸಲಾಗಿದೆ.
ಭಾರತ ಚುನಾವಣಾ ಆಯೋಗವು ಮತದಾರರ ವಿವರಗಳ ಪರಿಶೀಲನೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಫೆ.8ರಿಂದ ಜಾರಿಗೆ ತಂದಿದೆ. ಅದರಂತೆ ಮತದಾರರು ತಮಗೆ ಸಂಬಂಧಿಸಿದ ಚುನಾ ವಣಾಧಿಕಾರಿಗಳಾದ ಮತಗಟ್ಟೆ ಅಧಿಕಾರಿ, ಮತದಾರರ ನೋಂದಣಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯವರಿಂದ ಮಾಹಿತಿ ಪಡೆಯಬಹುದಾಗಿದೆ.
ಮತದಾರರಿಗೆ ನೋಂದಾಯಿಸಿಕೊಳ್ಳುವ, ನಮೂನೆಗಳನ್ನು ಸಲ್ಲಿಸುವ ಬಗ್ಗೆ ಹಾಗೂ ಅವುಗಳನ್ನು ಎಲ್ಲಿ, ಹೇಗೆ ಸಲ್ಲಿಸಬೇಕು? ಎಂಬುದರ ಬಗ್ಗೆ ತಿಳುವಳಿಕೆ ನೀಡ ಲಾಗುತ್ತಿದೆ. ವಿಶೇಷ ಚೇತನ ಮತದಾರರು ನೋಂದಾಯಿಸಿಕೊಳ್ಳಲು ಹಾಗೂ ಮತದಾನದ ದಿನ ಗಾಲಿ ಕುರ್ಚಿಯನ್ನು ಕಾಯ್ದಿರಿಸಲು ಮತ್ತು ಅವರಿಗೆ ಸಂಚಾರ ವ್ಯವಸ್ಥೆ ಒದಗಿಸುವ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಆಯೋಗದ ಪ್ರಕಟಣೆ ತಿಳಿಸಿದೆ. ಚುನಾವಣಾ ಆಯೋ ಗವು ಪ್ರತೀ ಮತದಾನ ಕೇಂದ್ರದಲ್ಲಿ ಫೆ.23, 24 ಹಾಗೂ ಮಾ.2 ಮತ್ತು 3ರಂದು ವಿಶೇಷ ಕ್ಯಾಂಪ್‍ಗಳನ್ನು ಆಯೋಜಿಸಲಿದೆ.