ಮೈಸೂರು

ಮೈಸೂರು ನ್ಯಾಯಾಲಯ ಸಂಕೀರ್ಣಗಳ ಮಾರ್ಗದಲ್ಲಿ ಸಾರಿಗೆ ಸೌಲಭ್ಯಕ್ಕೆ ಚಾಲನೆ
ಮೈಸೂರು

ಮೈಸೂರು ನ್ಯಾಯಾಲಯ ಸಂಕೀರ್ಣಗಳ ಮಾರ್ಗದಲ್ಲಿ ಸಾರಿಗೆ ಸೌಲಭ್ಯಕ್ಕೆ ಚಾಲನೆ

February 25, 2019

ಮೈಸೂರು: ಕೆಎಸ್ ಆರ್‍ಟಿಸಿ ಮೈಸೂರು ನಗರ ಸಾರಿಗೆ ವತಿಯಿಂದ ಮೈಸೂರು ನಗರದ ಹಳೇ ಮತ್ತು ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸೋಮವಾರದಿಂದ ಎರಡು ಮಾರ್ಗ ಗಳಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ. ಮೈಸೂರಿನ ಹಳೇ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಈ ನೂತನ ಬಸ್ ಸಂಚಾರ ವ್ಯವಸ್ಥೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿ ಗೋಡಿ ಇಂದು ಚಾಲನೆ ನೀಡಿದರು. `80 ಎಲ್‍ಸಿ’ ಹಾಗೂ `94 ಎಲ್‍ಸಿ’ ಮಾರ್ಗ ಸಂಖ್ಯೆಯ ಎರಡು ಬಸ್‍ಗಳು ನಗರ ಬಸ್ ನಿಲ್ದಾಣದಿಂದ ಚಾಮ ರಾಜಪುರಂನಲ್ಲಿರುವ…

ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷರಿಗೆ ನೋಟೀಸ್
ಮೈಸೂರು

ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷರಿಗೆ ನೋಟೀಸ್

February 25, 2019

ಮೈಸೂರು: ಹಲವು ಆರೋಪಗಳನ್ನು ಎದುರಿಸುತ್ತಿ ರುವ ಪಶುವೈದ್ಯ, ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ವಿರುದ್ಧ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವಿಚಾರಣೆ ಕೈಗೆತ್ತಿಕೊಂಡಿದ್ದು, ನೋಟೀಸ್ ಜಾರಿ ಮಾಡಿದೆ. ಫೆ.27ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಜಂಟಿ ನಿರ್ದೇಶಕರ (ರಾಜ್ಯ ವಲಯ) ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‍ನಲ್ಲಿ ತಿಳಿಸಲಾಗಿದೆ. ಲೇಖಕ ಹಾಗೂ ಸಾಹಿತಿ ಬನ್ನೂರು ಕೆ.ರಾಜು ಅವರು ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಶು…

ರೇಷ್ಮೆಯಲ್ಲಿ ಆದಾಯಕ್ಕಿಂತ ನಷ್ಟವೇ ಜಾಸ್ತಿ, ನಮಗೂ ಬೆಂಬಲ ಬೆಲೆ ನೀಡಿ ಕಾಪಾಡಿ…
ಮೈಸೂರು

ರೇಷ್ಮೆಯಲ್ಲಿ ಆದಾಯಕ್ಕಿಂತ ನಷ್ಟವೇ ಜಾಸ್ತಿ, ನಮಗೂ ಬೆಂಬಲ ಬೆಲೆ ನೀಡಿ ಕಾಪಾಡಿ…

February 25, 2019

ಮೈಸೂರು: ಮೈಸೂರಿನ ಶ್ರೀರಾಮಪುರದಲ್ಲಿರುವ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಭಾನು ವಾರ ನಡೆದ ರೇಷ್ಮೆ ಕೃಷಿ ಮೇಳ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೇಷ್ಮೆ ಬೆಳೆಗಾರರು ತಮ್ಮ ಸಂಕಷ್ಟ ಪರಿಸ್ಥಿತಿಯನ್ನು ಪರಿ ಪರಿಯಾಗಿ ತೋಡಿ ಕೊಂಡರು. ರೇಷ್ಮೆಗೆ ವೈಜ್ಞಾನಿಕ ದರ ನಿಗದಿ ಮಾಡುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಖಾತೆ, ರೇಷ್ಮೆ ಇಲಾಖೆ ವತಿ ಯಿಂದ ಆಯೋಜಿಸಿದ್ದ…

ವೇತನ ಬಾಕಿಗೆ ಆಗ್ರಹಿಸಿ ಮೈಸೂರಿನಲ್ಲಿ ಬಿಎಸ್‍ಎನ್‍ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಮೈಸೂರು

ವೇತನ ಬಾಕಿಗೆ ಆಗ್ರಹಿಸಿ ಮೈಸೂರಿನಲ್ಲಿ ಬಿಎಸ್‍ಎನ್‍ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

February 25, 2019

ಮೈಸೂರು: ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಬಿಎಸ್‍ಎನ್‍ಎಲ್ ಸಂಸ್ಥೆಯ ಗುತ್ತಿಗೆ ಕಾರ್ಮಿಕರು ಬಿಎಸ್‍ಎನ್‍ಎಲ್ ನಾನ್ ಪರ್ಮನೆಂಟ್ ಎಂಪ್ಲಾಯಿಸ್ ಯೂನಿಯನ್‍ನ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಘಟಕ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮೈಸೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಜಯಲಕ್ಷ್ಮೀಪುರಂನ ಬಿಎಸ್‍ಎನ್‍ಎಲ್ ಸಂಸ್ಥೆಯ ದೂರ ಸಂಪರ್ಕ ಮಹಾಪ್ರಬಂಧಕರ ಕಾರ್ಯಾಲಯದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಕಳೆದ ಆರು ತಿಂಗಳಿಂದ…

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಮೋದಿ ಚಾಲನೆ
ಮೈಸೂರು

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಮೋದಿ ಚಾಲನೆ

February 25, 2019

ಲಖನೌ: ಒಂದು ಕೋಟಿಗೂ ಅಧಿಕ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ.ಗಳ ಮೊದಲ ಕಂತಿನ ಹಣವನ್ನು ನೇರ ವರ್ಗಾವಣೆ ಮಾಡುವುದರೊಂದಿಗೆ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಯೋಜನೆಗೆ ಚಾಲನೆ ನೀಡಿದ ಅವರು, 1.01 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 2 ಸಾವಿರ ರೂ.ಗಳ ಮೊದಲ ಕಂತಿನ ಹಣವನ್ನು ನೇರ ನಗದು ವರ್ಗಾವಣೆ ಮಾಡಿ ದರು. ಉಳಿದ ಫಲಾನುಭವಿಗಳಿಗೆ ಒಂದೆ…

ಸಫಾಯಿ ಕರ್ಮಚಾರಿಗಳ ಪಾದ ತೊಳೆದ ಪ್ರಧಾನಿ
ಮೈಸೂರು

ಸಫಾಯಿ ಕರ್ಮಚಾರಿಗಳ ಪಾದ ತೊಳೆದ ಪ್ರಧಾನಿ

February 25, 2019

ಪ್ರಯಾಗ್‍ರಾಜ್: ಉತ್ತರ ಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕುಂಭಮೇಳದಲ್ಲಿ ಭಾನುವಾರ ಪವಿತ್ರ ಸ್ನಾನ ಮಾಡಿದರು. ಗೋರಖ್‍ಪುರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ಪ್ರಯಾಗ್ ರಾಜ್‍ಗೆ ಆಗಮಿಸಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಗಂಗಾ, ಯಮುನಾ ಹಾಗೂ ಸರಸ್ವತಿ ಸಂಗಮವಾಗುವ ಸ್ಥಳದಲ್ಲಿ ಪ್ರಧಾನಿ ಮೋದಿ ಮಿಂದೆದ್ದರು. ತ್ರಿವೇಣಿ ಘಾಟ್‍ನಲ್ಲಿ ಗಂಗಾ ಆರತಿಯನ್ನೂ ನೆರವೇರಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಹಾಜರಿದ್ದರು. ನಂತರ ಪ್ರಧಾನಿ ಮೋದಿ ಸ್ವಚ್ಛ…

ಬಹುಪಾಲು ಭಸ್ಮವಾಯಿತು ಗೋಪಾಲಸ್ವಾಮಿ ಬೆಟ್ಟ
ಮೈಸೂರು

ಬಹುಪಾಲು ಭಸ್ಮವಾಯಿತು ಗೋಪಾಲಸ್ವಾಮಿ ಬೆಟ್ಟ

February 25, 2019

ಬಂಡೀಪುರ: ಬೆಂಕಿಯ ರೌದ್ರ ನರ್ತನ ಭಾನುವಾರವೂ ಮುಂದುವರೆಯಿತು. ರಭಸವಾಗಿ ಬೀಸಿದ ಗಾಳಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಲವು ಗುಡ್ಡಗಳನ್ನು ಆಹುತಿ ಪಡೆದ ಕಾಳ್ಗಿಚ್ಚು, ಅಪಾರ ಪ್ರಮಾಣದ ವನ್ಯಸಂಪತ್ತನ್ನು ನೋಡ ನೋಡುತ್ತಿದ್ದಂತೆ ಹೊಸಕಿ ಹಾಕಿತು. ಶನಿವಾರ ಮೇಲುಕಾಮನಹಳ್ಳಿಯಿಂದ ಬಂಡೀಪುರದ ಕ್ಯಾಂಪಸ್ ಕಡೆ ಸಾಗಿದ ಬೆಂಕಿಯ ಸಾವಿರಾರು ಎಕರೆ ಕಾಡನ್ನು ಆಹುತಿ ಪಡೆದಿತ್ತು. ನಂತರ ಗಾಳಿ ಬೀಸುತ್ತಿದ್ದ ದಿಕ್ಕಿನತ್ತ ಸಾಗಿದ ಬೆಂಕಿ ರಾತ್ರಿಯಿಡೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸುತ್ತಮುತ್ತ ಲಿನ ಗುಡ್ಡಗಳನ್ನು ಆವರಿಸುತ್ತಾ ಸಾಗಿತು. ಭಾನುವಾರ ಬೆಳಿಗ್ಗೆ 10 ಗಂಟೆವರೆಗೂ…

ಮೈಸೂರಿನ ಎಪಿಎಂಸಿಯಲ್ಲಿ ರೇಷ್ಮೆಗೂಡು ಮಾರಾಟ ಮಾರುಕಟ್ಟೆ ಆರಂಭ
ಮೈಸೂರು

ಮೈಸೂರಿನ ಎಪಿಎಂಸಿಯಲ್ಲಿ ರೇಷ್ಮೆಗೂಡು ಮಾರಾಟ ಮಾರುಕಟ್ಟೆ ಆರಂಭ

February 25, 2019

ಮೈಸೂರು: ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಎರಡು ಎಕರೆ ವಿಸ್ರ್ತೀಣದ ಜಾಗದಲ್ಲಿ ಪ್ರತ್ಯೇಕ ಸುಸಜ್ಜಿತ ಮಾರು ಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಮೈಸೂರಿನ ಬಂಡೀಪಾಳ್ಯದಲ್ಲಿರುವ ಎಪಿಎಂಸಿ ಆವರಣದಲ್ಲಿ ಭಾನುವಾರ ನೂತನವಾಗಿ ಆರಂಭಿಸಿ ರುವ ರೇಷ್ಮೆಗೂಡಿನ ಮಾರುಕಟ್ಟೆಯನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಮೈಸೂರು, ಚಾಮ ರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲೆಂಬ ಕಾರಣ ದಿಂದ ಮೈಸೂರಿನ ಎಪಿಎಂಸಿಯಲ್ಲಿ ಇದೇ ಮೊದಲ…

ನಾನು ಸಿಎಂ ಆಗುವುದನ್ನು 3 ಬಾರಿ ತಪ್ಪಿಸಲಾಯಿತು…ಬೇಡ ಎಂದರೂ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ
ಮೈಸೂರು

ನಾನು ಸಿಎಂ ಆಗುವುದನ್ನು 3 ಬಾರಿ ತಪ್ಪಿಸಲಾಯಿತು…ಬೇಡ ಎಂದರೂ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ

February 25, 2019

ದಾವಣಗೆರೆ: ದಲಿತ ಸಮುದಾಯವನ್ನು ತುಳಿಯಲಾಗುತ್ತಿದೆ. ನಾನು ಮುಖ್ಯಮಂತ್ರಿ ಯಾಗುವುದನ್ನು 3 ಬಾರಿ ತಪ್ಪಿಸಲಾಗಿದೆ. ಬೇಡ ಎಂದರೂ ಹಾಗೋ ಹೀಗೋ ಉಪಮುಖ್ಯಮಂತ್ರಿ ಮಾಡಿದ್ದಾರೆ ಎಂದು ಡಾ.ಜಿ.ಪರಮೇ ಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ದಾವಣಗೆರೆಯ ಶಿವಯೋಗಿ ಆಶ್ರಮದಲ್ಲಿ ಛಲವಾದಿ ಮಹಾಸಭಾ ಹಮ್ಮಿ ಕೊಂಡಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರೇ ಆದ ಬಿ.ಬಸವ ಲಿಂಗಪ್ಪ ಮತ್ತು ಎ.ಹೆಚ್.ರಂಗನಾಥ್ ಅವರು ಮುಖ್ಯಮಂತ್ರಿ ಆಗಬೇಕಾಗಿತ್ತು. ಆದರೆ, ಅವರಿಗೆ ಆ ಅವಕಾಶ ತಪ್ಪಿತು. ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯ ಮಂತ್ರಿ ಆಗುವ ನಿಟ್ಟಿನಲ್ಲಿ ಒಂದು…

ಕಟ್ಟುನಿಟ್ಟಿನ ಕಾನೂನಿದ್ದರೂ ಶೇ.23ರಷ್ಟು ಬಾಲ್ಯ  ವಿವಾಹ: ನ್ಯಾಯಾಧೀಶ ಸುನೀಲ್ ಎ.ಶೆಟ್ಟರ್ ಕಳವಳ
ಮೈಸೂರು

ಕಟ್ಟುನಿಟ್ಟಿನ ಕಾನೂನಿದ್ದರೂ ಶೇ.23ರಷ್ಟು ಬಾಲ್ಯ ವಿವಾಹ: ನ್ಯಾಯಾಧೀಶ ಸುನೀಲ್ ಎ.ಶೆಟ್ಟರ್ ಕಳವಳ

February 25, 2019

ಮೈಸೂರು: ಪ್ರಸ್ತುತ ಬಾಲ್ಯವಿವಾಹ ತಡೆಗೆ ಸಂಬಂಧಿಸಿ ಕಟ್ಟುನಿಟ್ಟಿನ ಕಾಯ್ದೆಗಳು ಇದ್ದಾಗ್ಯೂ ರಾಜ್ಯದಲ್ಲಿ ನಡೆಯುವ ಪ್ರತಿ 100 ವಿವಾಹಗಳ ಪೈಕಿ ಕನಿಷ್ಠ 23 ಬಾಲ್ಯವಿವಾಹವಾಗಿರುವ ಅಂಕಿ-ಅಂಶವಿದ್ದು, ಇದು ಆಘಾತಕಾರಿ ಸಂಗತಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ (ಹಿರಿಯ ಶ್ರೇಣಿ) ಸುನೀಲ್ ಎ.ಶೆಟ್ಟರ್ ಆತಂಕ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ `ಬಾಲ್ಯವಿವಾಹ ನಿಷೇಧ ಕಾಯ್ದೆ-2006’, `ಬಾಲ್ಯವಿವಾಹ ನಿಷೇಧ ನಿಯ…

1 1,108 1,109 1,110 1,111 1,112 1,611
Translate »