ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಮೋದಿ ಚಾಲನೆ
ಮೈಸೂರು

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಮೋದಿ ಚಾಲನೆ

February 25, 2019

ಲಖನೌ: ಒಂದು ಕೋಟಿಗೂ ಅಧಿಕ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ.ಗಳ ಮೊದಲ ಕಂತಿನ ಹಣವನ್ನು ನೇರ ವರ್ಗಾವಣೆ ಮಾಡುವುದರೊಂದಿಗೆ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.

ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಯೋಜನೆಗೆ ಚಾಲನೆ ನೀಡಿದ ಅವರು, 1.01 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 2 ಸಾವಿರ ರೂ.ಗಳ ಮೊದಲ ಕಂತಿನ ಹಣವನ್ನು ನೇರ ನಗದು ವರ್ಗಾವಣೆ ಮಾಡಿ ದರು. ಉಳಿದ ಫಲಾನುಭವಿಗಳಿಗೆ ಒಂದೆ ರಡು ದಿನಗಳಲ್ಲೇ ಕಿಸಾನ್ ಸಮ್ಮಾನ್ ನಿಧಿ ದೊರೆಯಲಿದೆ. ‘ಇದು ನಿಮ್ಮದೇ ಹಣ. ಇದನ್ನು ನಿಮ್ಮಿಂದ ಕಸಿಯಲು ಯಾರಿಗೂ ಸಾಧ್ಯವಿಲ್ಲ’ ಎಂದು ರೈತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ನುಡಿದರು.

ಈ ಯೋಜನೆಯ ಫಲಾನುಭವಿ ವರ್ಗಾವಣೆ ದೋಷರಹಿತವಾಗಿದೆ. ಇಲ್ಲಿ ಯಾರೂ ಮಧ್ಯವರ್ತಿಗಳಿಲ್ಲ. ರೈತರಿಗೆ ಸಲ್ಲುವ ಹಣ ವನ್ನು ಯಾರೂ ಕಸಿಯಲಾರರು. ಸಂಪೂರ್ಣ ಮೊತ್ತ ಅವರಿಗೇ ತಲುಪುತ್ತದೆ ಎಂದು ಪ್ರಧಾನಿ ಹೇಳಿ ದರು. ಕೇಂದ್ರ ಬಜೆಟ್‍ನಲ್ಲಿ ರೈತರ ಬಂಡವಾಳ ಬೆಂಬಲ ಯೋಜನೆಯಡಿ ಮೋದಿ ಸರಕಾರ ಒಟ್ಟು 2 ಕೋಟಿ ರೈತರಿಗೆ ತಲಾ 25 ಸಾವಿರ ರೂ.ಗಳ ನೇರ ನಗದು ವರ್ಗಾವಣೆ ಮಾಡಲು ಮುಂದಾಗಿದೆ. ಇದಕ್ಕಾಗಿ ಒಟ್ಟು 75,000 ಕೋಟಿ ರೂ.ಗಳನ್ನು ತೆಗೆದಿರಿಸ ಲಾಗಿದ್ದು, ಈ ವರೆಗಿನ ಇತಿಹಾಸದಲ್ಲೇ ಅತಿ ದೊಡ್ಡ ನೇರ ನಗದು ವರ್ಗಾವಣೆಯಾ ಗಲಿದೆ. 2 ಹೆಕ್ಟೇರ್‍ವರೆಗೆ ಕೃಷಿಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳ ನಗದು ಹಣವನ್ನು ಈ ಯೋಜನೆಯಡಿ ವರ್ಗಾಯಿಸ ಲಾಗುತ್ತಿದೆ. 3 ಕಂತುಗಳಲ್ಲಿ 2 ಸಾವಿರ ರೂ.ಗಳಂತೆ ಈ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತದೆ. ನರೇಗಾ ಕೂಲಿ ಹಣವನ್ನು ವರ್ಗಾಯಿಸುವ ಮಾದರಿಯಲ್ಲೇ ಸರಕಾರಿ ನಾಮಾಂಕಿತ ಖಾತೆ ಮೂಲಕ ಕೇಂದ್ರ ಸರಕಾರ ಈ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸುತ್ತದೆ. ಉತ್ತರ ಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಒಟ್ಟು 14 ರಾಜ್ಯಗಳ ಒಂದು ಕೋಟಿಗೂ ಅಧಿಕ ರೈತರು ತಮ್ಮ ಮೊದಲ ಕಂತಿನ ಹಣವನ್ನು ಇಂದು ಪಡೆಯುತ್ತಿದ್ದಾರೆ. 28 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಇನ್ನೂ 1 ಕೋಟಿ ಫಲಾನುಭವಿಗಳು ಮುಂದಿನ 2-3 ದಿನಗಳಲ್ಲಿ ಈ ಹಣವನ್ನು ಪಡೆಯಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಯ ರೈತ ಕುಟುಂಬಕ್ಕೆ ಈ ಯೋಜನೆಯ ಫಲಾ ನುಭವ ದೊರೆಯುತ್ತದೆ. 2 ಹೆಕ್ಟೇರ್‍ವರೆಗೆ ಭೂಮಿ ಹೊಂದಿರುವ ಪತಿ, ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳಿರುವ ಕುಟುಂಬಗಳಿಗೆ ಈ ಯೋಜನೆಯ ಲಾಭ ದೊರೆ ಯುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ಹೆಚ್ಚಿಸುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗಿದ್ದು, ಒಟ್ಟಾರೆ 12 ಕೋಟಿ ರೈತರು ಇದರ ಪ್ರಯೋ ಜನ ಪಡೆಯುತ್ತಿದ್ದಾರೆ. ಪಿಎಂ ಕಿಸಾನ್ ಸ್ಕೀಮ್ ಅಡಿಯಲ್ಲಿ ಆಯ್ದ ರೈತರಿಗೆ ಸ್ವತಃ ಮೋದಿ ಅವರೇ ಈ ಕುರಿತ ಪ್ರಮಾಣ ಪತ್ರ ವಿತರಿಸಿದರು. ಜತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಆಯ್ದ ಫಲಾನುಭವಿಗಳ ಜತೆ ಸಂವಾದ ನಡೆಸಿದರು.

Translate »