ಸಫಾಯಿ ಕರ್ಮಚಾರಿಗಳ ಪಾದ ತೊಳೆದ ಪ್ರಧಾನಿ
ಮೈಸೂರು

ಸಫಾಯಿ ಕರ್ಮಚಾರಿಗಳ ಪಾದ ತೊಳೆದ ಪ್ರಧಾನಿ

February 25, 2019

ಪ್ರಯಾಗ್‍ರಾಜ್: ಉತ್ತರ ಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕುಂಭಮೇಳದಲ್ಲಿ ಭಾನುವಾರ ಪವಿತ್ರ ಸ್ನಾನ ಮಾಡಿದರು.

ಗೋರಖ್‍ಪುರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ಪ್ರಯಾಗ್ ರಾಜ್‍ಗೆ ಆಗಮಿಸಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಗಂಗಾ, ಯಮುನಾ ಹಾಗೂ ಸರಸ್ವತಿ ಸಂಗಮವಾಗುವ ಸ್ಥಳದಲ್ಲಿ ಪ್ರಧಾನಿ ಮೋದಿ ಮಿಂದೆದ್ದರು. ತ್ರಿವೇಣಿ ಘಾಟ್‍ನಲ್ಲಿ ಗಂಗಾ ಆರತಿಯನ್ನೂ ನೆರವೇರಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಹಾಜರಿದ್ದರು.

ನಂತರ ಪ್ರಧಾನಿ ಮೋದಿ ಸ್ವಚ್ಛ ಕುಂಭ, ಸ್ವಚ್ಛ ಆಭಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸ್ವಚ್ಛ ಕುಂಭ, ಸ್ವಚ್ಛ ಆಭಾರ್ ಪ್ರಶಸ್ತಿಗಳನ್ನು ಸಫಾಯಿ ಕರ್ಮಚಾರಿಗಳಿಗೆ ನೀಡಿದರು.

ಪೊಲೀಸರು ಮತ್ತು ನಾವಿಕರಿಗೆ ಸ್ವಚ್ಛಗ್ರಹಿ ಪ್ರಶಸ್ತಿಗಳನ್ನು ವಿತರಿಸಿದರು. ಕೆಲವು ಸಫಾಯಿ ಕರ್ಮಚಾರಿಗಳ ಪಾದಗಳನ್ನು ತೊಳೆಯುವ ಮೂಲಕ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Translate »