ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷರಿಗೆ ನೋಟೀಸ್
ಮೈಸೂರು

ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷರಿಗೆ ನೋಟೀಸ್

February 25, 2019

ಮೈಸೂರು: ಹಲವು ಆರೋಪಗಳನ್ನು ಎದುರಿಸುತ್ತಿ ರುವ ಪಶುವೈದ್ಯ, ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ವಿರುದ್ಧ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವಿಚಾರಣೆ ಕೈಗೆತ್ತಿಕೊಂಡಿದ್ದು, ನೋಟೀಸ್ ಜಾರಿ ಮಾಡಿದೆ.

ಫೆ.27ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಜಂಟಿ ನಿರ್ದೇಶಕರ (ರಾಜ್ಯ ವಲಯ) ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‍ನಲ್ಲಿ ತಿಳಿಸಲಾಗಿದೆ.

ಲೇಖಕ ಹಾಗೂ ಸಾಹಿತಿ ಬನ್ನೂರು ಕೆ.ರಾಜು ಅವರು ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯಾಧಿಕಾರಿಯಾಗಿರುವ ಡಾ.ವೈ. ಡಿ.ರಾಜಣ್ಣ ವಿರುದ್ಧ ಸರ್ಕಾರಿ ಸೇವೆ ಯನ್ನು ಕಡೆಗಣಿಸಿ ಇನ್ನಿತರ ಚಟುವಟಿಕೆ ಗಳಲ್ಲಿ ಭಾಗಿಯಾಗಿ ಸರ್ಕಾರದ ಕೆಲಸಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಇಲಾ ಖೆಗೆ ದೂರು ನೀಡಿದ್ದರು. ಅಲ್ಲದೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಪಶು ಆಸ್ಪತ್ರೆಯ ಅತ್ಯಗತ್ಯ ಸೇವೆ ಯನ್ನು ಸಂಪೂರ್ಣವಾಗಿ ಕಡೆಗಣಿಸಿ, ತಮ್ಮ ಕಾರ್ಯಚಟುವಟಿಕೆಯನ್ನು ಸಾಹಿತ್ಯ ಪರಿಷತ್‍ಗೆ ಮೀಸಲಾಗಿಟ್ಟಿ ದ್ದಾರೆ. ಹಾಗೂ ಸದಾ ರಾಜಕಾರಣಿಗಳ ಮತ್ತು ಅಧಿಕಾರಸ್ಥರನ್ನು ಓಲೈಸಿ ಕೊಂಡು ಅವರ ಹಿಂಬಾಲಕರಾಗಿ ಓಡಾಡುತ್ತಾ ರಾಜಕೀಯ ಮಾಡುತ್ತಿ ದ್ದಾರೆಂದು ಆರೋಪಿಸಿದ್ದರು.

ಸಾಹಿತಿ ಬನ್ನೂರು ಕೆ.ರಾಜು ಅವರ ದೂರನ್ನು ಗಂಭೀರವಾಗಿ ಪರಿಗಣಿಸಿ ರುವ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಆಯು ಕ್ತರು ದೂರಿನ ಪ್ರಾಥಮಿಕ ವಿಚಾ ರಣೆಯನ್ನು ಕೈಗೆತ್ತಿಕೊಂಡಿದ್ದಾರೆ.

Translate »