ರೇಷ್ಮೆಯಲ್ಲಿ ಆದಾಯಕ್ಕಿಂತ ನಷ್ಟವೇ ಜಾಸ್ತಿ, ನಮಗೂ ಬೆಂಬಲ ಬೆಲೆ ನೀಡಿ ಕಾಪಾಡಿ…
ಮೈಸೂರು

ರೇಷ್ಮೆಯಲ್ಲಿ ಆದಾಯಕ್ಕಿಂತ ನಷ್ಟವೇ ಜಾಸ್ತಿ, ನಮಗೂ ಬೆಂಬಲ ಬೆಲೆ ನೀಡಿ ಕಾಪಾಡಿ…

February 25, 2019

ಮೈಸೂರು: ಮೈಸೂರಿನ ಶ್ರೀರಾಮಪುರದಲ್ಲಿರುವ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಭಾನು ವಾರ ನಡೆದ ರೇಷ್ಮೆ ಕೃಷಿ ಮೇಳ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೇಷ್ಮೆ ಬೆಳೆಗಾರರು ತಮ್ಮ ಸಂಕಷ್ಟ ಪರಿಸ್ಥಿತಿಯನ್ನು ಪರಿ ಪರಿಯಾಗಿ ತೋಡಿ ಕೊಂಡರು. ರೇಷ್ಮೆಗೆ ವೈಜ್ಞಾನಿಕ ದರ ನಿಗದಿ ಮಾಡುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಖಾತೆ, ರೇಷ್ಮೆ ಇಲಾಖೆ ವತಿ ಯಿಂದ ಆಯೋಜಿಸಿದ್ದ ರೇಷ್ಮೆ ಕೃಷಿ ಮೇಳ ಹಾಗೂ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡುತ್ತಾ ರೇಷ್ಮೆ ಕೃಷಿ ಲಾಭದಾ ಯಕ. ರೈತರಿಗೆ ಅಧಿಕ ಆದಾಯ ದೊರೆ ಯುತ್ತದೆ ಎಂದು ಹೇಳುತ್ತಿದ್ದಂತೆ, ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದ ಹಲವು ರೈತರು ಆಕ್ಷೇಪ ವ್ಯಕ್ತಪಡಿಸಿದರು. ಅಧಿ ಕಾರಿಗಳ ಬೇಜವಾಬ್ದಾರಿ ಧೋರಣೆ ಯಿಂದಾಗಿ ರೈತರು ಸಂಕಷ್ಟದಲ್ಲಿ ಸಿಲು ಕುವಂತಾಗಿದೆ. ರೇಷ್ಮೆ ಕೃಷಿಗೆ ಮಾಡುವ ಖರ್ಚನ್ನು ರೇಷ್ಮೆ ಮಾರಾಟದಿಂದ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಕೇವಲ ಭಾಷಣದಲ್ಲಿ ಮಾತ್ರ ಆದಾಯ ತರುವ ಬೆಳೆಯಾಗಿದೆ ಎಂದು ದೂರಿದರು.

ಮೇಳಕ್ಕೆ ಭದ್ರಾವತಿಯಿಂದ ಆಗಮಿ ಸಿದ್ದ ರೇಷ್ಮೆ ಬೆಳೆಗಾರರ ಶಿವರಾಜು ಮಾತ ನಾಡಿ, ನಾನೂ ರೇಷ್ಮೆ ಬೆಳೆಯುತ್ತೇನೆ. ಒಂದು ಕೆಜಿ ರೇಷ್ಮೆ ಬೆಳೆಯಲು ಅಂದಾಜು 270 ರೂ. ವೆಚ್ಚವಾಗುತ್ತದೆ. ಅದನ್ನು ಮಾರಾಟ ಮಾಡಲು 30 ರೂ. ಶುಲ್ಕ ಪಾವತಿಸಬೇಕು. ಕೆಜಿವೊಂದಕ್ಕೆ 300 ರೂ. ತಗಲುತ್ತದೆ. ಒಟ್ಟಾರೆ ಕುಟುಂಬದ ಸದಸ್ಯರೆಲ್ಲರ ಶ್ರಮ ಹಾಗೂ ಇನ್ನಿತರ ವೆಚ್ಚ ಸೇರಿಸಿದರೆ ಅದು ಒಂದು ಕೆ.ಜಿಗೆ 400 ರೂ. ತಲುಪುತ್ತದೆ. ಆದರೆ ಮಾರು ಕಟ್ಟೆಯಲ್ಲಿ ಕೆಜಿಗೆ 318 ರೂ. ಮಾತ್ರ ಬೆಲೆ ದೊರೆಯುತ್ತಿದೆ. ನಾವು ಜೀವನಕ್ಕೆ ಏನು ಮಾಡುವುದು. ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಯಾವುದೇ ಸರ್ಕಾರಗಳು ರೈತರ ಹಿತರಕ್ಷಣೆಗೆ ಕ್ರಮ ಕೈಗೊಂಡಿಲ್ಲ. ರೇಷ್ಮೆ ಬೆಳೆಗಾರರ ಹಿತಕಾಯಬೇಕಾದರೆ ಒಂದು ಕೆಜಿಗೆ 450 ರೂ. ಉತ್ತಮ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಮತ್ತೊಬ್ಬ ರೈತರು ಇದಕ್ಕೆ ದನಿಗೂಡಿಸಿ, ಚೀನಾ ದೇಶದಿಂದ ಭಾರತಕ್ಕೆ ರೇಷ್ಮೆ ಆಮದಾಗುತ್ತಿದೆ. ಹಾಗಾಗಿ ಸ್ಥಳೀಯ ರೈತರು ಸಮಸ್ಯೆ ಎದುರಿಸುವಂತಾಗಿದೆ. ದೇಶದಲ್ಲಿ ಉತ್ಪಾದನೆಯಾಗುವ ರೇಷ್ಮೆ ಬೆಳೆಗೆ ಸೂಕ್ತ ಬೆಲೆಯೇ ಸಿಗುತ್ತಿಲ್ಲ. ಸರ್ಕಾರಗಳು ರೇಷ್ಮೆ ಆಮದನ್ನು ಸ್ಥಗಿತಗೊಳಿಸಬೇಕು. ಸ್ಥಳೀಯ ರೈತರನ್ನು ಉತ್ತೇಜಿಸಲು ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿದರು.

ರಾಮನಗರದ ರಾಮಕೃಷ್ಣ ಮಾತ ನಾಡಿ, ಚಾಕಿ ಸೆಂಟರ್‍ಗಳನ್ನು ಆರಂಭಿಸಿ ದವರು ಬಹುಮಹಡಿಗಳನ್ನು ಕಟ್ಟಿಸಿ ಕೊಂಡಿದ್ದಾರೆ. ನಾವು ಹಲವು ವರ್ಷ ಗಳಿಂದ ರೇಷ್ಮೆಯನ್ನು ಬೆಳೆಯುತ್ತಿದ್ದರೂ, ನಮ್ಮ ಸ್ಥಿತಿ ಮಾತ್ರ ಹಾಗೆಯೇ ಇದೆ. ರೇಷ್ಮೆ ಮೊಟ್ಟೆಗಳನ್ನು ಇಲಾಖೆ ವತಿ ಯಿಂದ ನೀಡಬೇಕು. ಖಾಸಗಿಯವರಿಗೆ ನೀಡಬಾರದು ಎಂದು ಒತ್ತಾಯಿಸಿದರು.

ಚಾಲನೆ ನೀಡಿದ ಸಚಿವರು: ಸಚಿವ ಜಿ.ಟಿ.ದೇವೇಗೌಡ ರೇಷ್ಮೆ ಕೃಷಿ ಮೇಳ ಉದ್ಘಾಟಿಸಿದರೆ, ರೇಷ್ಮೆ ಸಚಿವ ಸಾ.ರಾ. ಮಹೇಶ್ ರೇಷ್ಮೆ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ಶುಭ ಕೋರಿದರು. ರೇಷ್ಮೆ ವಿಜ್ಞಾನಿ ಗಳು ಹಾಗೂ ಕೃಷಿಕರ ನಡುವೆ ರೇಷ್ಮೆ ಕೃಷಿಗೆ ಸಂಬಂಧಿಸಿ ವಿಚಾರ ವಿನಿಮಯ ಕಾರ್ಯ ಕ್ರಮದಲ್ಲಿ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ರೇಷ್ಮೆ ಕೃಷಿ ಲಾಭದಾಯಕ ವಾಗಿದ್ದು ಯಾಂತ್ರಿಕ ವಿಧಾನ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಮಾಡಿದರೆ ಅಧಿಕ ಆದಾಯ ಬರುತ್ತದೆ. ಸರ್ಕಾರಗಳಿಂದಲೂ ಸಬ್ಸಿಡಿ ಮತ್ತು ಇನ್ನಿತರ ಸೌಲಭ್ಯ ಸಿಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫೀ ಅಹಮ್ಮದ್, ಕೇಂದ್ರ ರೇಷ್ಮೆ ಮಂಡಳಿ ಕೆ.ಮುದ್ದೇಗೌಡ, ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಕೆ.ಎಸ್. ಮಂಜುನಾಥ್, ತರಬೇತಿ ಸಂಸ್ಥೆ ನಿರ್ದೇ ಶಕ ಆರ್.ಎಸ್.ತೆವತಿಯ ಉಪಸ್ಥಿತರಿದ್ದರು.

Translate »