ಮೈಸೂರು ನ್ಯಾಯಾಲಯ ಸಂಕೀರ್ಣಗಳ ಮಾರ್ಗದಲ್ಲಿ ಸಾರಿಗೆ ಸೌಲಭ್ಯಕ್ಕೆ ಚಾಲನೆ
ಮೈಸೂರು

ಮೈಸೂರು ನ್ಯಾಯಾಲಯ ಸಂಕೀರ್ಣಗಳ ಮಾರ್ಗದಲ್ಲಿ ಸಾರಿಗೆ ಸೌಲಭ್ಯಕ್ಕೆ ಚಾಲನೆ

February 25, 2019

ಮೈಸೂರು: ಕೆಎಸ್ ಆರ್‍ಟಿಸಿ ಮೈಸೂರು ನಗರ ಸಾರಿಗೆ ವತಿಯಿಂದ ಮೈಸೂರು ನಗರದ ಹಳೇ ಮತ್ತು ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಸೋಮವಾರದಿಂದ ಎರಡು ಮಾರ್ಗ ಗಳಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ.

ಮೈಸೂರಿನ ಹಳೇ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಈ ನೂತನ ಬಸ್ ಸಂಚಾರ ವ್ಯವಸ್ಥೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿ ಗೋಡಿ ಇಂದು ಚಾಲನೆ ನೀಡಿದರು. `80 ಎಲ್‍ಸಿ’ ಹಾಗೂ `94 ಎಲ್‍ಸಿ’ ಮಾರ್ಗ ಸಂಖ್ಯೆಯ ಎರಡು ಬಸ್‍ಗಳು ನಗರ ಬಸ್ ನಿಲ್ದಾಣದಿಂದ ಚಾಮ ರಾಜಪುರಂನಲ್ಲಿರುವ ಹಳೇ ಜಿಲ್ಲಾ ನ್ಯಾಯಾ ಲಯ ಸಂಕೀರ್ಣ ಹಾಗೂ ಜಯನಗರ ದಲ್ಲಿರುವ (ಮಳಲವಾಡಿ) ನೂತನ ನ್ಯಾಯಾ ಲಯ ಸಂಕೀರ್ಣಕ್ಕೆ ಸಂಚರಿಸಲಿವೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಕೆ.ವಂಟಿಗೋಡಿ ಯವರು, ನಮ್ಮ ಎರಡೂ ನ್ಯಾಯಾ ಲಯ ಸಂಕೀರ್ಣಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಕಕ್ಷಿದಾರರು, ವಕೀಲರಿಗೆ ಮಾತ್ರವಲ್ಲದೆ, ನಾಗರಿಕರಿಗೂ ಅನುಕೂಲ ಆಗಲಿದೆ ಎಂದು ನುಡಿದರು.

ಮೈಸೂರು ನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎನ್.ಸತೀಶ್‍ಕುಮಾರ್ ಮಾತ ನಾಡಿ, ಸದ್ಯ ಪ್ರಾರಂಭಿಕ ಹಂತದಲ್ಲಿ ಎರಡು ಬಸ್‍ಗಳ ಸಂಚಾರಕ್ಕೆ ವ್ಯವಸ್ಥೆ ಮಾಡ ಲಾಗಿದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಮತ್ತಷ್ಟು ಬಸ್‍ಗಳ ವ್ಯವಸ್ಥೆ ಮಾಡಲಾಗುವುದು. ಜೊತೆಗೆ 620 ರೂ. ಮೊತ್ತದ ಮಾಸಿಕ ಪಾಸ್ ಪಡೆಯುವ ಮೂಲಕ ಈ ಮಾರ್ಗಗಳು ಮಾತ್ರವ ಲ್ಲದೆ, ನಗರದಾದ್ಯಂತ ಸಂಚಾರ ಮಾಡಲು ಅವಕಾಶವಿದೆ. ಅಗತ್ಯವಿದ್ದ ವರು ಇದರ ಉಪಯೋಗ ಪಡೆದು ಕೊಳ್ಳಬಹುದು ಎಂದು ತಿಳಿಸಿದರು.

ಮೈಸೂರು ನಗರ ಸಾರಿಗೆ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ ಮರೀ ಗೌಡ ಮಾತನಾಡಿ, `80 ಎಲ್‍ಸಿ’ ಮಾರ್ಗ ಸಂಖ್ಯೆಯ ಬಸ್, ನಗರ ಬಸ್ ನಿಲ್ದಾಣ ದಿಂದ ಅಗ್ರಹಾರ ವೃತ್ತ ಮಾರ್ಗವಾಗಿ ಹಳೇ ನ್ಯಾಯಾಲಯ ಸಂಕೀರ್ಣ, ಹೊಸ ನ್ಯಾಯಾಲಯ ಸಂಕೀರ್ಣ ಮಾರ್ಗದಲ್ಲಿ ಸಂಚರಿಸಿ, ಅಂತಿಮವಾಗಿ ವಿವೇಕಾನಂದ ವೃತ್ತ ತಲುಪಿ ಮತ್ತೆ ಅದೇ ಮಾರ್ಗದ ಮೂಲಕ ನಗರ ಬಸ್ ನಿಲ್ದಾಣಕ್ಕೆ ಬರಲಿದೆ. ಅದೇ ರೀತಿ `94 ಎಲ್‍ಸಿ’ ಮಾರ್ಗ ಸಂಖ್ಯೆಯ ಬಸ್, ನಗರ ಬಸ್ ನಿಲ್ದಾಣದಿಂದ ಚಾಮ ರಾಜ ಜೋಡಿ ರಸ್ತೆಯ ಲಕ್ಷ್ಮೀ ಟಾಕೀಸ್ ಮಾರ್ಗವಾಗಿ ರಾಮಸ್ವಾಮಿ ವೃತ್ತ ಹಾದು ಹಳೇ ನ್ಯಾಯಾಲಯಕ್ಕೆ ತೆರಳಲಿದೆ. ಬಳಿಕ ಹೊಸ ನ್ಯಾಯಾಲಯ ಸಂಕೀರ್ಣ ಮಾರ್ಗ ವಾಗಿ ಕುವೆಂಪುನಗರ ಕಾಂಪ್ಲೆಕ್ಸ್ ತಲುಪಿ, ಮತ್ತೆ ಅದೇ ಮಾರ್ಗವಾಗಿ ನಗರ ಬಸ್ ನಿಲ್ದಾಣಕ್ಕೆ ಬರಲಿದೆ ಎಂದು ವಿವರಿಸಿದರು. ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದಕುಮಾರ್, ಕಾರ್ಯದರ್ಶಿ ಬಿ.ಶಿವಣ್ಣ, ಮೈಸೂರು ನಗರ ಸಾರಿಗೆ ಕಾನೂನು ಅಧಿಕಾರಿ ಡಿ.ಎಂ.ಪೀಟರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »