ತಿಂಗಳಲ್ಲಿ ವಿಜಯನಗರ, ಯಾದವಗಿರಿ  ಜಲಸಂಗ್ರಹಾಗಾರ ಕಾಮಗಾರಿ ಪೂರ್ಣಗೊಳಿಸಿ
ಮೈಸೂರು

ತಿಂಗಳಲ್ಲಿ ವಿಜಯನಗರ, ಯಾದವಗಿರಿ ಜಲಸಂಗ್ರಹಾಗಾರ ಕಾಮಗಾರಿ ಪೂರ್ಣಗೊಳಿಸಿ

February 25, 2019

ಮೈಸೂರು: ಮೈಸೂ ರಿನ ಯಾದವಗಿರಿ ಮತ್ತು ವಿಜಯನಗರ ದಲ್ಲಿ ನಿರ್ಮಿಸುತ್ತಿರುವ ಜಲಸಂಗ್ರಹಾಗಾರ ಗಳ ಕಾಮಗಾರಿಗಳನ್ನು ಮಾರ್ಚ್ ಮಾಹೆ ಯೊಳಗಾಗಿ ಪೂರ್ಣಗೊಳಿಸುವಂತೆ ಸಂಸದ ಪ್ರತಾಪ್ ಸಿಂಹ, ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

4ಪ್ರಗತಿ ಹಂತದಲ್ಲಿರುವ ಜಲಸಂಗ್ರಹಾ ಗಾರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ತ್ವರಿತಗತಿ ಯಲ್ಲಿ ಕೆಲಸ ಮಾಡಿಸಿ, ಎರಡೂ ಕಡೆಯ ಜಲ ಸಂಗ್ರಹಾಗಾರಗಳ ಕಾಮಗಾರಿ ಯನ್ನು ಪೂರ್ಣಗೊಳಿಸಿ ಜನರಿಗೆ ದಿನದ 24 ಗಂಟೆಯೂ ನೀರು ಪೂರೈಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಮೃತ ಯೋಜನೆಯಡಿ 10 ಕೋಟಿ ರೂ. ವೆಚ್ಚದಲ್ಲಿ 13 ದಶಲಕ್ಷ ಲೀಟರ್ ಸಾಮಥ್ರ್ಯದ ಜಲ ಸಂಗ್ರಹಾಗಾರವನ್ನು ಯಾದವಗಿರಿಯಲ್ಲಿ ನಿರ್ಮಿಸುತ್ತಿದ್ದು, ಅಲ್ಲಿಂದ ಶಿವರಾತ್ರೀಶ್ವರನಗರ, ಸಿದ್ದಿಖಿ ನಗರ, ಬನ್ನಿಮಂಟಪ ಹುಡ್ಕೋ, ಕಾವೇರಿ ನಗರ, ಜೋಡಿ ತೆಂಗಿನ ಮರದ ರಸ್ತೆ, ತಿಲಕ್‍ನಗರ, ಹನುಮಂತನಗರ, ಮಂಡಿ ಮೊಹಲ್ಲಾ, ಯಾದವಗಿರಿ, ಪಡುವಾರ ಹಳ್ಳಿ ಹಾಗೂ ಜಯಲಕ್ಷ್ಮೀಪುರಂ ಬಡಾ ವಣೆಗಳಿಗೆ ನೀರು ಪೂರೈಸಲು ಸಂಪರ್ಕ ಜಾಲ ವ್ಯವಸ್ಥೆ ಮಾಡಲಾಗಿದೆ.

ಅದೇ ರೀತಿ 2.74 ಕೋಟಿ ರೂ. ವೆಚ್ಚದಲ್ಲಿ 15 ಲಕ್ಷ ಲೀಟರ್ ನೀರು ಸಂಗ್ರಹ ಸಾಮ ಥ್ರ್ಯದ ಮೇಲ್ಮಟ್ಟದ ಟ್ಯಾಂಕ್ ಅನ್ನು ನಿರ್ಮಿ ಸುತ್ತಿದ್ದು, ಯಾದವಗಿರಿಗೆ 3000 ಟಿಎಂಎ ನೀರನ್ನು ಪೂರೈಸಲು ಉದ್ದೇಶಿಸಲಾಗಿದೆ.

2021ಕ್ಕೆ ಮೈಸೂರಲ್ಲಿ 13,43,000 ಜನಸಂಖ್ಯೆಗೆ ಆಗಬಹುದೆಂದು ಅಂದಾ ಜಿಸಿ ಅದಕ್ಕಾಗಿ 274 ಎಂಎಲ್‍ಡಿಯಷ್ಟು ನೀರಿನ ಅಗತ್ಯವಿದೆ. ಕುಡಿಯುವ ನೀರಿನ ಯೋಜನೆಗಾಗಿ 156 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೇಂದ್ರ ಅಮೃತ ಯೋಜನೆಯಡಿ ವಿಜಯನಗರ 2ನೇ ಹಂತದ ನೆಲಮಟ್ಟದ ಜಲಸಂಗ್ರಹಾಗಾರ ದಲ್ಲಿ 18 ಮತ್ತು 27 ಎಂಎಲ್‍ಡಿ ಸಾಮ ಥ್ರ್ಯದ ಹಳೇ ಜಲಸಂಗ್ರಹಾಗಾರಗಳ ದುರಸ್ತಿ ಕಾರ್ಯ ನಡೆಸಲಾಗಿದೆ.

ಉಳಿದ 13 ಮತ್ತು 27 ಎಂಎಲ್‍ಡಿ ಸಾಮ ಥ್ರ್ಯದ ಜಲಸಂಗ್ರಹಾಗಾರದ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಶೇ.85 ರಷ್ಟು ಕೆಲಸ ಮುಗಿದಿದ್ದು, ಫ್ಲೋರಿಂಗ್ ಮಾತ್ರ ಬಾಕಿ ಉಳಿದಿದೆ ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ಬಾಕಿ ಉಳಿದಿರುವ ಜಲಸಂಗ್ರಹಾಗಾ ರದ ಕಾಮಗಾರಿಯನ್ನು ಮಾರ್ಚ್ ಒಳ ಗಾಗಿ ಪೂರ್ಣಗೊಳಿಸಿ ನೀರು ಸರಬ ರಾಜು ಕಾರ್ಯ ಆರಂಭಿಸುವಂತೆ ಸಂಸದ ಪ್ರತಾಪ್ ಸಿಂಹ ಅವರು ಮಂಡಳಿ ಅಧಿಕಾರಿ ಗಳಿಗೆ ಇದೇ ವೇಳೆ ತಾಕೀತು ಮಾಡಿದ್ದಾರೆ.

ಶಾಸಕ ಎಲ್.ನಾಗೇಂದ್ರ, ಪಾಲಿಕೆ ಸದಸ್ಯ ಸುಬ್ಬಯ್ಯ, ಒಳಚರಂಡಿ ಮಂಡಳಿ ಎಕ್ಸಿ ಕ್ಯೂಟಿವ್ ಇಂಜಿನಿಯರ್ ಪ್ರಸನ್ನ ಕುಮಾರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳಾದ ಲಿಂಗರಾಜು, ಜಯಣ್ಣ, ವಾಣಿ ವಿಲಾಸ ವಾಟರ್ ವಕ್ರ್ಸ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹರೀಶ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಜೂನಿಯರ್ ಇಂಜಿನಿಯರ್‍ಗಳು ಈ ಸಂದರ್ಭ ಹಾಜರಿದ್ದರು.

Translate »