ಕಾವೇರಿ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಸರ್ಕಾರ ನಿರ್ಧಾರ
ಮೈಸೂರು

ಕಾವೇರಿ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಸರ್ಕಾರ ನಿರ್ಧಾರ

February 24, 2019

ಬೆಂಗಳೂರು: ಕಾವೇರಿ ಜಲವಿವಾದ ಸಂದರ್ಭದಲ್ಲಿ ರೈತ ಸಮುದಾಯದವರು ಪ್ರತಿಭಟನೆ ನಡೆಸಿದಾಗ ದಾಖಲಿಸಲಾಗಿದ್ದ ಪ್ರಕರಣ ಗಳನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷ ಗಳಿಂದ ರೈತರ ಮೇಲೆ ನೂರಾರು ಪ್ರಕರಣ ದಾಖಲಾಗಿವೆ.

ಸಾರ್ವ ಜನಿಕರ ಆಸ್ತಿ-ಪಾಸ್ತಿ ಹಾನಿ ಮಾಡಿ ರುವ ಪ್ರಕರಣಗಳನ್ನು ಹೊರತುಪಡಿಸಿ ಶೇ.90 ರಷ್ಟು ಕೇಸುಗಳನ್ನು ಹಿಂದಕ್ಕೆ ಪಡೆಯಲು ಸಚಿವ ಸಂಪುಟಕ್ಕೆ ಶಿಫಾರಸು ಮಾಡಲಾಗಿದೆ ಎಂದರು.ಹಲವಾರು ವರ್ಷಗಳಿಂದ ರೈತರು ನ್ಯಾಯಾಲಯಗಳಿಗೆ ಎಡತಾಕುತ್ತಿ ದ್ದಾರೆ. ಅವರ ಕಷ್ಟವನ್ನು ಅರ್ಥೈಸಿ ಕೊಂಡಿರುವ ಸರ್ಕಾರ, ಸಾರ್ವಜನಿಕ ಹಿತದೃಷ್ಟಿಯಿಂದ ಹಾಕಿರುವ ಬಹು ತೇಕ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಶಿಫಾರಸು ಮಾಡಿದೆ ಎಂದು ಅವರು ಸ್ಪಷ್ಪಪಡಿಸಿದರು.

ಮುಂಬರುವ ಲೋಕಸಭಾ ಚುನಾ ವಣೆ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರ ಸ್ಪರ್ಧೆ ವಿಚಾರವನ್ನು ಪಕ್ಷದ ವರಿ ಷ್ಠರು ನಿರ್ಧರಿಸುತ್ತಾರೆ. ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಸೀಟು ಹಂಚಿಕೆ ವಿಚಾರ ಕುರಿತಂತೆ ಸಮಾ ಲೋಚನೆ ನಡೆಸಲಿದ್ದಾರೆ ಎಂದರು.

Translate »