ಮೈಸೂರಲ್ಲಿ ಮಹಿಳೆಯರ ಬೃಹತ್ ಮೆರವಣಿಗೆ
ಮೈಸೂರು

ಮೈಸೂರಲ್ಲಿ ಮಹಿಳೆಯರ ಬೃಹತ್ ಮೆರವಣಿಗೆ

February 24, 2019

ಮೈಸೂರು: ಮಹಿಳಾ ಸಬಲೀಕರಣ ಕುರಿತು ಜಾಗೃತಿ ಮೂಡಿ ಸಲು ಮೈಸೂರಲ್ಲಿ ಇಂದು ಮಹಿಳೆಯರ ಬೃಹತ್ ಮೆರವಣಿಗೆ ನಡೆಯಿತು.

ಧಾನ್ ಫೌಂಡೇಷನ್ ಮೈಸೂರು ವಲಯ ದಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ನಡೆದ ‘ವಾಕಥಾನ್ 2019’ ಅನ್ನು ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನ ಬಳಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.
ಧಾನ್ ಫೌಂಡೇಷನ್‍ನ ಸಂಯೋಜಕ ರಾದ ಗಜಾನನ ಹೆಗ್ಡೆ, ನಾರಾಯಣ ಹೆಗ್ಡೆ, ಶಿವಶಂಕರ್, ಪ್ರಭುಶಂಕರ್, ಭಾಗ್ಯ, ಹುಸೇನ್, ಶಶಿಧರ್, ಮಹೇಂದರ್, ಕೆಳಂ ಜಿಯಂ ಪರಸ್ಪರ ಚಳುವಳಿಯ ಕಾರ್ಯ ದರ್ಶಿ ಸುಕನ್ಯ ಸೇರಿದಂತೆ ಹಲವರು ವಾಕಥಾನ್‍ನಲ್ಲಿ ಪಾಲ್ಗೊಂಡಿದ್ದರು.

ಮೈಸೂರು, ಮಳವಳ್ಳಿ, ಬನ್ನೂರು, ನಂಜನಗೂಡು, ಪಿರಿಯಾಪಟ್ಟಣ ಹಾಗೂ ಹೆಚ್.ಡಿ.ಕೋಟೆ ಮಹಿಳಾ ಒಕ್ಕೂಟಗಳ 1500ಕ್ಕೂ ಹೆಚ್ಚು ಮಂದಿ ಸ್ವಯಂ ಸೇವ ಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮೆರವಣಿಗೆಯು ಹಾರ್ಡಿಂಗ್ ಸರ್ಕಲ್, ಬಿಎನ್ ರಸ್ತೆ ಮೂಲಕ ವೇದಿಕೆ ಕಾರ್ಯ ಕ್ರಮ ಏರ್ಪಡಿಸಿದ್ದ ದೊಡ್ಡಕೆರೆ ಮೈದಾ ನದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರ ಮೈದಾನಕ್ಕೆ ತಲುಪಿತು.

ಮಹಿಳಾ ಸಬಲೀಕರಣ ಕುರಿತ ವೇದಿಕೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಅವರು ಉದ್ಘಾಟಿ ಸಿದರು. ನಂತರ ಮಾತನಾಡಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ, ಅಂತಹ ಪ್ರಕರಣಗಳಾದ ತಕ್ಷಣ ಮಹಿಳಾ ಆಯೋಗದ ಗಮನಕ್ಕೆ ತರಬೇ ಕೆಂದು ಮಹಿಳೆಯರಿಗೆ ಸಲಹೆ ನೀಡಿದರು.

ಲೈಂಗಿಕ, ಮಾನಸಿಕ ಹಿಂಸೆಗೊಳಗಾ ದಾಗ ತಕ್ಷಣ ಹಿಂದೆ-ಮುಂದೆ ಆಲೋ ಚನೆ ಮಾಡದೆ ಮಾಧ್ಯಮದ ಮುಂದೆ ಹೋಗುವ ಬದಲು ಆಯೋಗಕ್ಕೆ ಸಲ್ಲಿಸು ವುದು ಸೂಕ್ತ ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಡಿಪಿಓ ಮಂಜುಳಾ ಪಾಟೀಲ್ ಮಾತನಾಡಿ, ಮಹಿಳೆಯರು, ಹಿರಿಯ ನಾಗರಿ ಕರು, ಗರ್ಭಿಣಿಯರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದಲಿಸಿರುವ ಕಾರ್ಯಕ್ರಮ ಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸೌಲಭ್ಯಗಳನ್ನು ಬಳಸಿಕೊಂಡು ಮಹಿಳೆ ಯರು ಆರ್ಥಿಕವಾಗಿ ಸಬಲರಾಗುವಂ ತೆಯೂ ಇದೇ ಸಂದರ್ಭ ಕರೆ ನೀಡಿದರು.

Translate »