ಮೈಸೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಗೈಕ್ಯ ಸಿದ್ಧಗಂಗಾ ಮಠದ ಡಾ. ಶ್ರೀ ಶಿವ ಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯ ಕ್ರಮವನ್ನು ಗುರುವಾರ ಮೈಸೂರಿನಲ್ಲಿ ವಿವಿಧ ಸಂಘ-ಸಂಸ್ಥೆಗಳು ನಡೆಸಿದವು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪ್ರಸಾದ ವಿತರಿಸುವ ಮೂಲಕ ಶ್ರೀಗಳಿಗೆ ಗೌರವ ನಮನ ಸಲ್ಲಿಸಿದವು. ಬಂಡೀಪಾಳ್ಯದಲ್ಲಿ: ಬಂಡೀಪಾಳ್ಯ ಎಪಿ ಎಂಸಿ ಯಾರ್ಡ್‍ನಲ್ಲಿರುವ ತರಕಾರಿ ಮಾರು ಕಟ್ಟೆ ಆವರಣದಲ್ಲಿ ಶ್ರೀಗಳ ಭಾವಚಿತ್ರವನ್ನು ಪೂಜಿಸಿದ ತರಕಾರಿ ವ್ಯಾಪಾರಿಗಳು ಪುಷ್ಪ ನಮನ ಸಲ್ಲಿಸಿದರು. ಬಳಿಕ ಅನ್ನ ಸಂತ ರ್ಪಣೆ ನಡೆಸಲಾಯಿತು. ವರ್ತಕರು,…
ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಸವಿತಾ ಸಮಾಜದ ಉದ್ಧಾರ ಸಾಧ್ಯ
February 1, 2019ಮೈಸೂರು: ಪ್ರತಿ ಯೊಬ್ಬರೂ ಪ್ರಾಮಾಣಿಕ ಸಮಾಜ ಸೇವಕರಾಗಿ ಸಮಾಜದ ಏಳಿಗೆಗೆ ನಿರಂತರವಾಗಿ ದುಡಿದರೆ ಸಮಾಜದ ಉದ್ಧಾರ ಸಾಧ್ಯವಾಗಲಿದೆ ಎಂದು ಶಾಸಕ ತನ್ವೀರ್‍ಸೇಠ್ ಅಭಿಪ್ರಾಯಪಟ್ಟರು. ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾ ಜದ ವತಿಯಿಂದ ನಡೆದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಜಯಂತ್ಯೋತ್ಸವ ಮತ್ತು ಸಮಾಜದ ಮೈಸೂರು ಜಿಲ್ಲಾ ಕಾರ್ಯಕಾರಿ ಸಮಿ ತಿಯ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸೇವೆ ಎಂಬುದು ಒಂದು ಜನಾಂಗಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ವರ್ಗದವರೂ…
ಸಿದ್ದರಾಮಯ್ಯ ಆಡಳಿತದಿಂದಾಗಿ `ಸಾಲದ ಶೂಲ’ದಲ್ಲಿ ರಾಜ್ಯದ ಜನ
February 1, 2019ಮೈಸೂರು: ರಾಜ್ಯ ಸರ್ಕಾರದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದ್ದು, ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೆ ಸರಾಸರಿ ಅರ್ಧ ಲಕ್ಷದಷ್ಟು ಸಾಲದ ಹೊರೆ ಎಂಬುದಾಗಿ ಅಂಕಿ ಅಂಶಗಳು ಬಹಿರಂಗಪಡಿಸಿ ರುವುದನ್ನು ನೋಡಿದರೆ, ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಾಲದ ಮೊತ್ತದಲ್ಲಿ ಏರಿಕೆ ಕಂಡು ಬಂದಿದ್ದು, ಬರೀ ಸಾಲ ಮಾಡಿದ್ದೇ ಅವರ ಸಾಧನೆಯಾಗಿದೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಆರ್.ರಘು ಕೌಟಿಲ್ಯ ಇಂದಿಲ್ಲಿ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ…
ಸ್ವಚ್ಛ ದಂತ ಅಭಿಯಾನದಡಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ದಂತ ಚಿಕಿತ್ಸೆ
February 1, 2019ಮೈಸೂರು: ಸ್ವಚ್ಛ ದಂತ ಅಭಿಯಾನದಡಿ ಗುರುವಾರ ಮೈಸೂ ರಿನ ಮಂಚೇಗೌಡನಕೊಪ್ಪಲಿನ ವಿದ್ಯಾ ವಾಹಿನಿ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ದಂತ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಯಿತು. ಮೈಸೂರಿನ ಅನಿ ಫೌಂಡೇಷನ್, ಮೈಸೂರು ಜಿಲ್ಲೆಯ ಸರ್ಕಾರಿ ಹಾಗೂ ಅನು ದಾನಿತ ಶಾಲೆಗಳ ವಿದ್ಯಾರ್ಥಿಗಳ ದಂತ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ದಂತ ಅಭಿಯಾನ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾವಾಹಿನಿ ಶಾಲೆಯ ನೂರಾರು ವಿದ್ಯಾರ್ಥಿಗಳ ದಂತ ತಪಾಸಣೆ ನಡೆಸಲಾಯಿತು. ಅನಿ ಫೌಂಡೇಷನ್ ಮುಖ್ಯಸ್ಥೆ ದಂತ ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ಎನ್.ಅನುಶ್ರೀ,…
ಮೈಸೂರಲ್ಲಿ ನಾಳೆಯಿಂದ `ಹೆಜ್ಜೆ ಗೆಜ್ಜೆ’ ನೃತ್ಯ ಸಂಭ್ರಮೋತ್ಸವ
February 1, 2019ಮೈಸೂರು: ಮೈಸೂರಿನ ನಿಮಿಷಾಂಬ ಡ್ಯಾನ್ಸ್ ಪ್ರಮೋಟರ್ಸ್‍ನ 23ನೇ ವರ್ಷದ ಗೆಜ್ಜೆ ಹೆಜ್ಜೆ ಸಂಭ್ರಮೋತ್ಸವ ಅಂಗವಾಗಿ ಫೆ.2 ಮತ್ತು 3ರಂದು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಮತ್ತು ಡಾ.ವಿಷ್ಣು ವರ್ಧನ್ ಕುಟುಂಬಕ್ಕೆ ಕರ್ನಾಟಕ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿರುವುದಾಗಿ ಪ್ರಮೋಟರ್ಸ್ ಸಂಸ್ಥಾಪಕ ಶ್ರೀಧರ್ ಜೈನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.2ರಂದು ಬೆಳಿಗ್ಗೆ 9ರಿಂದ ಹೆಜ್ಜೆ ಗೆಜ್ಜೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯ ಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಖ್ಯಾತ…
ಕೇಂದ್ರ ಬಜೆಟ್ ಅಧಿವೇಶನ: ಮೋದಿ ಸರ್ಕಾರ ‘ನವ ಭಾರತ’ ನಿರ್ಮಾಣಕ್ಕಾಗಿ ದುಡಿಯುತ್ತಿದೆ: ರಾಷ್ಟ್ರಪತಿ ಕೋವಿಂದ್
February 1, 2019ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‍ಡಿಎ ಸರ್ಕಾರ ‘ನವ ಭಾರತ’ ನಿರ್ಮಾಣಕ್ಕಾಗಿ ದುಡಿ ಯುತ್ತಿದ್ದು, ಜನರಿಗೆ ಭರವಸೆ ಮೂಡಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಹೇಳಿದ್ದಾರೆ. ಪ್ರಧಾನಿ ಮೋದಿ ಸರ್ಕಾರದ ಕೊನೆಯ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಮನಾಥ್ ಕೋವಿಂದ್ ಭಾಷಣ ಆರಂಭಿಸಿದ್ದಾರೆ. ಪ್ರತೀ ಕ್ಷೇತ್ರದಲ್ಲಿರುವ, ಎಲ್ಲಾ ರೀತಿಯ ಜನರ ಭರವಸೆಗಳು ಹಾಗೂ ಆಸೆಗಳನ್ನು ಈಡೇರಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಮುಸ್ಲಿಂ ಮಹಿಳೆಯರು ಯಾವುದೇ ರೀತಿಯ ಭಯವಿಲ್ಲದೆ ಜೀವನ…
12 ದಿನವಾದ್ರೂ ಅರೆಸ್ಟ್ ಆಗಿಲ್ಲ ಶಾಸಕ ರೌಡಿ ಗಣೇಶ್? ಇತ್ತ ಆನಂದ್ ಸಿಂಗ್ ಸಂಧಾನಕ್ಕೆ ಜಮೀರ್ ಸರ್ವಯತ್ನ
February 1, 2019ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಬಳಿಕ ನಾಪತ್ತೆಯಾಗಿರುವ ಕಂಪ್ಲಿ ಶಾಸಕ ಗಣೇಶ್ 12 ದಿನವಾದ್ರೂ ಪತ್ತೆಯಾಗಿಲ್ಲ. ಹೀಗಾಗಿ ಕರ್ನಾಟಕ, ಗೋವಾ ಬಿಟ್ಟು ಈಗ ಪಕ್ಕದ ಹೈದ್ರಾಬಾದ್‍ಗೆ ಹೋಗಿ ಖಾಕಿಗಳ ಹುಡುಕಾಟ ಶುರು ಮಾಡಿದ್ದಾರೆ. ಎಸ್‍ಪಿ, ಡಿವೈಎಸ್‍ಪಿ ನೇತೃತ್ವದ ತಂಡದಲ್ಲಿ ಹೈದ್ರಾಬಾದ್‍ನಲ್ಲಿ ಹುಡುಕಾಡುತ್ತಿದ್ದು, ‘ರೌಡಿ ಶೀಟರ್’ ಆಗಿದ್ದ ಓರ್ವ ಶಾಸಕನ ಬಂಧನಕ್ಕೆ ಪೆÇಲೀಸರಿಗೆ ಇಷ್ಟೊಂದು ಕಷ್ಟನಾ ಅನ್ನೋ ಪ್ರಶ್ನೆ ಮೂಡಿದೆ. ಇತ್ತ ಸಂಧಾನಕ್ಕೆ ಸಚಿವ ಜಮೀರ್ ಅಹ್ಮದ್ ಸರ್ವ ಪ್ರಯತ್ನ ಮಾಡುತ್ತಿದ್ದಾರೆ ಎನ್ನ ಲಾಗಿದೆ….
ಕೌಟುಂಬಿಕ ಕಲಹ: ಹಾಡಹಗಲೇ ಪತ್ನಿ, ಮಾವನ ಬರ್ಬರ ಹತ್ಯೆ
February 1, 2019ಚನ್ನರಾಯಪಟ್ಟಣ: ಕೌಟುಂಬಿಕ ಕಲಹದ ಹಿನ್ನೆಲೆ ಯಲ್ಲಿ ವ್ಯಕ್ತಿಯೋರ್ವ ಪತ್ನಿ ಮತ್ತು ಮಾವನನ್ನು ಹಾಡ ಹಗಲೇ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಚನ್ನ ರಾಯ ಪಟ್ಟಣದ ಎಸ್‍ಬಿಐ ಬ್ಯಾಂಕ್ ರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ. ತಾಲೂಕಿನ ಎಲಿಯೂರು ಗ್ರಾಮದ ನಂಜೇ ಗೌಡ ಅಲಿಯಾಸ್ ನಂದೀಶ್ ಎಂಬಾತನೇ ತನ್ನ ಮಾವ ಪ್ರಕಾಶ್(55) ಮತ್ತು ಪತ್ನಿ ದಿವ್ಯಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ವಿವರ: ಎಲಿಯೂರಿನ ನಂದೀಶ್‍ಗೆ ಅದೇ ಗ್ರಾಮದ ಪ್ರಕಾಶ್ ಪುತ್ರಿ ದಿವ್ಯಾಳನ್ನು 8 ವರ್ಷದ ಹಿಂದೆ…
`ಅಕ್ಕ’ನಲ್ಲಿನ ಭಕ್ತಿಯನ್ನು ಅರಿಯಬೇಕು
February 1, 2019ಮೈಸೂರು: ವಚನಕಾರ್ತಿ ಅಕ್ಕಮಹಾದೇವಿಯನ್ನು ಒಂದೇ ದೃಷ್ಟಿಕೋನದಲ್ಲಿ ನೋಡದೇ ಮರು ಓದಿನ ಮೂಲಕ ಅವರಲ್ಲಿನ ಭಕ್ತಿಯನ್ನು ಅರಿಯಬೇಕಿದೆ ಎಂದು ಕವಯತ್ರಿ ಪ್ರತಿಭಾ ನಂದಕುಮಾರ್ ಗಮನ ಸೆಳೆದರು. ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಆಯೋಜಿಸಿದ್ದ ಶ್ವೇತಾ ಮಡಪ್ಪಾಡಿ ಅವರಿಂದ ಅಕ್ಕಮಹಾದೇವಿ ಕುರಿತಾದ `ಇತೀ, ಚನ್ನ ಮಲ್ಲಿಕಾರ್ಜುನ ಸತಿ’ ಏಕವ್ಯಕ್ತಿ ರಂಗಪ್ರಯೋಗ ವೇಳೆ ಮಾತನಾಡಿದ ಅವರು, ಇಂದಿನ ಕವಿಗಳು ಅಕ್ಕ ಮಹಾದೇವಿ ಅವರನ್ನು ಕೇವಲ ಮಹಿಳಾ ದೃಷ್ಟಿಕೋನ ದಲ್ಲಿ ನೋಡುತ್ತಾರೆ ಎಂದು ವಿಷಾದಿಸಿದರು. ಚನ್ನಮಲ್ಲಿಕಾರ್ಜುನ ಅಕ್ಕಮಹಾದೇವಿಯ ನಾಡಿ ಯಾಗಿದ್ದು, ಪೂರ್ವ ಪೀಡಿತವಾಗಿ…
ಹಲ್ಲೆ, ಕೊಲೆ ಬೆದರಿಕೆ: ನಾಲ್ವರಿಗೆ ಜೈಲು ಶಿಕ್ಷೆ
February 1, 2019ಮೈಸೂರು: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದ ಆರೋಪಿಗಳಿಗೆ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ನಂಜನಗೂಡು ತಾಲೂಕಿನ ದೇಬೂರಿನ ನಿವಾಸಿಗಳಾದ ನಾಗರಾಜು, ಸುರೇಶ್, ಕುಮಾರ್, ಚನ್ನನಾಯಕ ಶಿಕ್ಷೆಗೊಳಗಾದವರು. ಇವರು 2016 ಸೆ.9ರಂದು ರಾತ್ರಿ ಗಣಪತಿ ವಿಸರ್ಜನೆ ವೇಳೆ ದೇಬೂರಿನ ರಸ್ತೆಯಲ್ಲಿ ರವಿ ಎಂಬುವರ ಮೇಲೆ ಹಲ್ಲೆ ನಡೆಸಿ, ಬ್ಲೇಡಿನಿಂದ ಕುತ್ತಿಗೆ ಭಾಗವನ್ನು ಕೊಯ್ದು ಕೊಲೆ ಬೆದರಿಕೆ ಹಾಕಿದ್ದರು. ಈ ಸಂಬಂಧ…










