ನಂಜನಗೂಡು: ಇದೇ ಪ್ರಥಮ ಬಾರಿಗೆ ಈ ವರ್ಷ ಸುತ್ತೂರು ಜಾತ್ರೆಯಲ್ಲಿ ಪ್ರಮುಖವಾಗಿ ಯುವ ಮನಸ್ಸುಗಳನ್ನು ಸೆಳೆಯಲು ಸಿದ್ಧವಾಗಿರುವ ‘ಸೆಲ್ಫಿ ತೋಟ’ಕ್ಕೆ ಯುವ ಹೃದಯಗಳು ತಮ್ಮ ಚಿತ್ರವನ್ನು ಸೆರೆಹಿಡಿಯಲು ಮುಗಿಬೀಳುತ್ತಿದ್ದರು. ಹೊಸ ಯುಗದ ಯುವಜನರ ಆಸಕ್ತಿ ಆರಂಭವಾಗಿದೆ. ಇದನ್ನು ಮನಗಂಡು ಸುತ್ತೂರು ಜಾತ್ರೆಯಲ್ಲಿ ಕೃಷಿ ಬ್ರಹ್ಮಾಂಡದ ಪಕ್ಕ ವಿಶೇಷವಾಗಿ ಹೂಗಳನ್ನು ಬೆಳೆಸಿ ಸೆಲ್ಫಿ ತೋಟವನ್ನು ಸಿದ್ಧಪಡಿಸಲಾಗಿದೆ. ಮೈಸೂರು ಭಾಗದಲ್ಲಿ ಜಾತ್ರೆಯೆಂದ ಕೂಡಲೇ ನೆನಪಿಗೆ ಬರುವುದು ಸುತ್ತೂರು ಜಾತ್ರೆ. ಈ ಜಾತ್ರೆಗೆ ಮೆರಗು ತರುವುದೇ ವಿವಿಧ ಮಳಿಗೆಗಳು. ಈ ವರ್ಷದ…
ಸಾಧನೆಗೈದ ರೈತರಿಗೆ ಪ್ರಶಸ್ತಿ ಪ್ರದಾನ
February 2, 2019ಮೈಸೂರು: ಇಂದು ಆರಂಭವಾದ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ವಿವಿಧ ಬೆಳೆ ಪದ್ಧತಿಯಲ್ಲಿ ಅತ್ಯುತ್ತಮ ಸಾಧನೆಗೈದ ನಂಜನಗೂಡು ತಾಲೂಕು ಮತ್ತು ಚಾಮರಾಜ ನಗರ ಜಿಲ್ಲೆಯ 10 ಮಂದಿ ರೈತರಿಗೆ ಯಳಂದೂರು ತಾಲೂಕಿನ ಶ್ರೀಮತಿ ಸುಂದರಮ್ಮ ವೀರಭದ್ರಪ್ಪ ಪ್ರತಿಷ್ಠಾನ ಸ್ಥಾಪಿಸಿರುವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸುತ್ತೂರು ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾ ರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ವಾಸು ಅವರು ರೈತರಿಗೆ ಪ್ರಶಸ್ತಿ ನೀಡಿ, ಹಸಿರು ಶಾಲು ಹೊದಿಸುವ ಮೂಲಕ ಅಭಿನಂದಿಸಿದರು. ಎಕರೆಗೆ 23 ರಿಂದ 27 ಕ್ವಿಂಟಾಲ್…
ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ
February 2, 2019ಮೈಸೂರು: ಜಾತ್ರಾ ಮಹೋತ್ಸವದ ಅಂಗವಾಗಿ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಾಳೆ (ಫೆ.2) ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸುವರು. ಬೆಂಗಳೂರಿನಿಂದ ಇಂದು ರಾತ್ರಿ ವಿಶೇಷ ವಿಮಾನ ದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮುಖ್ಯಮಂತ್ರಿಗಳು, ಮೈಸೂರಲ್ಲಿ ರಾತ್ರಿ ವಾಸ್ತವ್ಯ ಹೂಡಿ, ಶನಿವಾರ ಬೆಳಿಗ್ಗೆ ರಸ್ತೆ ಮಾರ್ಗ ವಾಗಿ ಸುತ್ತೂರಿಗೆ ತೆರಳುವರು ಎಂದು ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಸುತ್ತೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮೈಸೂರಿಗೆ ಬಂದು…
ಸುತ್ತೂರು ಜಾತ್ರೆಯಲ್ಲಿ ನಂದಿನಿ ತುಪ್ಪ, ಮೈಸೂರು ಪೇಡ ಮಳಿಗೆ ಉದ್ಘಾಟನೆ
February 2, 2019ಸುತ್ತೂರು: ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಅಂಗವಾಗಿ ನಂದಿನಿ ಉತ್ಪನ್ನ ಮಾರಾಟ ಮಳಿಗೆಯನ್ನು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳಿಗಾಗಿ ನಂದಿನಿ ಉತ್ಪನ್ನ ಮಾರಾಟ ಕೇಂದ್ರವನ್ನು ತೆರೆಯಲಾಗಿದೆ ಎಂದರು. ಈ ಸಂದರ್ಭ ದಲ್ಲಿ ಸುತ್ತೂರು ಜೆಎಸ್‍ಎಸ್ ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಪೇಡ ಹಾಗೂ ಮಜ್ಜಿಗೆ ವಿತರಿಸಲಾಯಿತು. ನಿರ್ದೇಶಕರಾದ ಕೆ.ಸಿ.ಬಲರಾಮ್, ಹೀರೇಗೌಡ, ಲೀಲಾ ನಾಗರಾಜು, ದ್ರಾಕ್ಷಾಯಿಣಿ, ಕುಮಾರ್, ವ್ಯವಸ್ಥಾಪಕ…
ಕುಂಭಮೇಳ: ಶಾಸಕರ ಜತೆ ಡಿಸಿ ಸಿದ್ಧತೆ ಪರಿಶೀಲನೆ
February 2, 2019ತಿ.ನರಸೀಪುರ:ಕುಂಭಮೇಳದ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಹಾಗೂ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಅಗತ್ಯ ಸೂಚನೆ ನೀಡಿದ್ದೇವೆ. ಸ್ವಚ್ಛತೆಗೆ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇರುವುದರಿಂದ ಹೊರಗುತ್ತಿಗೆ ಮೂಲಕ ಪಡೆಯಲು ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ತಿರಮಕೂಡಲಿನ ಆದಿಚುಂಚನಗಿರಿ ಭವನದಲ್ಲಿ ನಡೆದ ಕುಂಭಮೇಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿ ಅಗತ್ಯ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿದ್ದೇವೆ. ಮೂರ್ನಾಲ್ಕು ಬಾರಿ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕಾಮಗಾರಿ ಪ್ರಗತಿಯಲ್ಲಿದೆ….
ಕೇಂದ್ರ ಬಜೆಟ್ ರೈತರಿಗೆ ಅನುಕೂಲವಾಗಿಲ್ಲ ಕಬ್ಬು ಬೆಳೆಗಾರ ಹಳೇಮಿರ್ಲೆ ಸುನಯ್‍ಗೌಡ ಅಭಿಮತ
February 2, 2019ಭೇರ್ಯ: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಸಂಪೂರ್ಣ ರೈತ ಸಮೂಹವನ್ನು ಕಡೆಗಣಿಸಿ ದ್ರೋಹ ಮಾಡಿದೆ. ರೈತರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ರೈತರಿಗೆ ಯಾವುದೇ ಅನುಕೂಲಕರವಾಗಿಲ್ಲ ಎಂದು ಕೇಂದ್ರ ಬಜೆಟ್ ವಿರುದ್ಧ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಳೇಮಿರ್ಲೆ ಸುನಯ್‍ಗೌಡ ವಾಗ್ದಾಳಿ ನಡೆಸಿದರು. ಸಿರಿವಂತರ ಪರವಾಗಿರುವ ಮೋದಿ ಸರ್ಕಾರ, ಸಿರಿವಂತರ ತೆರಿಗೆ ಕಡಿತ ಮಾಡಿದೆ. ರೈತ ಸಮೂಹ ಸಂಪೂರ್ಣ ಸಾಲ ಮನ್ನಾ, ರೈತರ ಪರವಾದ ಯೋಜನೆಗಳ ಬಗ್ಗೆ, ರೈತರು ಬೆಳೆದ…
ಮೈಸೂರಲ್ಲಿ ನಾಳೆ ಲಯನ್ಸ್ ಸಂಸ್ಥೆಯ ಪ್ರಾಂತೀಯ ಸಮ್ಮೇಳನ
February 2, 2019ಮೈಸೂರು: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಜಿಲ್ಲೆ-317ಎ, 8ನೇ ಪ್ರಾಂತದ ಪ್ರಾಂತೀಯ ಸಮ್ಮೇಳನ ಫೆ.3ರಂದು ಮೈಸೂರಿನ ಬಂಬೂ ಬಜಾರ್ ಸಯ್ಯಾಜಿರಾವ್ ರಸ್ತೆ ಹೋಟೆಲ್ ರಿಯೋ ಮೆರಿಡಿಯನ್‍ನಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಆತಿಥೇಯ ಸಮಿತಿಯ ಅಧ್ಯಕ್ಷ ಡಿ.ಟಿ.ಪ್ರಕಾಶ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ವಿವರ ಗಳನ್ನು ನೀಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. `ಮರೆಯಾಗುತ್ತಿರುವ ಕುಟುಂಬದ ಸಂಬಂಧಗಳು’ ಘೋಷ ವಾಕ್ಯ ಕುರಿತು ಪ್ರಾಧ್ಯಾಪಕ, ಹಾಸ್ಯ ಭಾಷಣಕಾರ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಲಿದ್ದಾರೆ….
ನಾಳೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ
February 2, 2019ಪದಗ್ರಹಣ, ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಮೈಸೂರು: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಹುಬ್ಬಳ್ಳಿ, ಮೈಸೂರು ಜಿಲ್ಲಾ ಘಟಕ, ಧಾರವಾಡದ ಅಪ್ನಾ ದೇಶ ಬಳಗದ ಜಂಟಿ ಆಶ್ರಯದಲ್ಲಿ ಫೆ.3ರಂದು ಮೈಸೂರು ತಾಲೂಕಿನ ಜಯಪುರ ಹೋಬಳಿಯ ಬರಡನಪುರ ಮಠದಲ್ಲಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿ ಸಲಾಗಿದೆ ಎಂದು ಸಂಘದ ಮೈಸೂರು ಜಿಲ್ಲಾಧ್ಯಕ್ಷ ಬಿ.ಎಸ್.ಮಂಜುನಾಥ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ…
ಸೆ.4ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ವಿದ್ಯಾರ್ಥಿ ಜಾಥಾ, `ಬದುಕಿ ಬಂದವರು’ ಕೃತಿ ಬಿಡುಗಡೆ, ಉಪನ್ಯಾಸ
February 2, 2019ಮೈಸೂರು,: ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಶ್ರಯದಲ್ಲಿ ಫೆ.4ರಂದು ಕ್ಯಾನ್ಸರ್ ಜಾಗೃತಿ ಜಾಥಾ ಮತ್ತು ಅಧ್ಯಾಪಕ ರಮೇಶ್ ಬಿಳಿಕೆರೆ ಅವರ `ಬದುಕಿ ಬಂದವರು’ ಕೃತಿ ಬಿಡುಗಡೆ, ಕ್ಯಾನ್ಸರ್ ಕುರಿತ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋ ಜಿಸಲಾಗಿದೆ. ಅಂದು ಬೆಳಿಗ್ಗೆ 8.50ಕ್ಕೆ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾನ್ಸರ್ ಜಾಗೃತಿ ಜಾಥಾ ನಡೆಸಲಿದ್ದಾರೆ. ಮೇಯರ್ ಪುಷ್ಪಲತಾ ಜಗನ್ನಾಥ್, ಎಂಸಿಡಿಸಿಸಿ…
ರಾಜ್ಯ ಮಟ್ಟದ ಅಬಾಕಸ್ ವಿಜೇತರಿಗೆ ನಾಳೆ ಬಹುಮಾನ ವಿತರಣೆ
February 2, 2019ಮೈಸೂರು: ಮೈಸೂರಿನ ಐ ಕ್ಯೂ ಪ್ಲಸ್ ಅಕಾಡೆಮಿ ಜನವರಿ 20ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯ ಬಹುಮಾನ ವಿತರಣಾ ಹಾಗೂ ಪದವಿ ಪ್ರದಾನ ಕಾರ್ಯಕ್ರಮ ಫೆ.3ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ನಿವೇದಿತನಗರದ ಅಕ್ಮಿ ಸ್ಕೂಲ್‍ನಲ್ಲಿ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ನಿರ್ದೇಶಕ ಶ್ರೀಕಾಂತ್ ಭಟ್ ತಿಳಿಸಿದರು. ಆ ದಿನದ ಕಾರ್ಯಕ್ರಮದಲ್ಲಿ ಕೌಟಿಲ್ಯ ವಿದ್ಯಾ ಲಯದ ಪ್ರಾಂಶುಪಾಲರಾದ ಡಾ.ಎಲ್.ಸವಿತಾ, ಮೈಸೂರಿನ ಬಿಜಿಎಸ್ ಅಪೊಲೋ ಆಸ್ಪತ್ರೆಯ ಡಾ.ನಾರಾಯಣ ಹೆಗ್ಡೆ, ಬಾಲೋದ್ಯಾನ ಶಾಲೆಯ ಅಧ್ಯಕ್ಷ ವಾಸುದೇವರಾವ್ ಅರೂರ್, ಎಸಿಎಂಇ ಶಾಲೆಯ…










