ಮೈಸೂರು

ಇಬ್ಬರು ಮಾವುತರ ಬಲಿ ಪಡೆದಿದ್ದ `ಕಾರ್ತಿಕ್’ ಸಾವು
ಮೈಸೂರು

ಇಬ್ಬರು ಮಾವುತರ ಬಲಿ ಪಡೆದಿದ್ದ `ಕಾರ್ತಿಕ್’ ಸಾವು

February 1, 2019

ಕುಶಾಲನಗರ: ದುಬಾರೆ ಸಾಕಾನೆ ಶಿಬಿರದಲ್ಲಿ ಇಬ್ಬರು ಮಾವುತರ ಬಲಿ ಪಡೆದಿದ್ದ ಪುಂಡಾನೆ ಕಾರ್ತಿಕ ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡು ಕೊನೆಗೆ ಇಂದು ಸಾವಿಗೀಡಾಗಿದ್ದಾನೆ. ಸಾಕಾನೆ ಶಿಬಿರದ ವಿಜಯ ಜನ್ಮ ನೀಡಿದ್ದ, ಹಾಲಿ 9 ವರ್ಷದ ಕಾರ್ತಿಕ್ ಕಳೆದ ವರ್ಷ ಮಾವುತ ಅಣ್ಣು ಹಾಗೂ ಮಣಿಯನ್ನು ಕೊಂದಿತ್ತು. ಅಲ್ಲದೆ ಕಾರ್ಮಿಕ ಚಂದ್ರು ಹಾಗೂ ನವೀನ್ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಇದರಿಂದ ಸಾಕಾನೆ ಶಿಬಿರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾ ಗಿತ್ತು. ನಂತರ ಕಾರ್ತಿಕ್ ಚಲನವಲನ ಕೂಡ ಭಿನ್ನವಾಗಿತ್ತು. ಕಾರ್ತಿಕ…

ನರ ಭಕ್ಷಕ ಹುಲಿಗೆ ಮತ್ತೊಂದು ಬಲಿ
ಮೈಸೂರು

ನರ ಭಕ್ಷಕ ಹುಲಿಗೆ ಮತ್ತೊಂದು ಬಲಿ

February 1, 2019

ಹೆಚ್.ಡಿ.ಕೋಟೆ: ಸಾಕು ಆನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿ ರುವ ಕಾರ್ಯಾಚರಣೆ ನಡುವೆಯೇ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹುಲಿಯ ಅಟ್ಟಹಾಸ ಮುಂದುವರೆದಿದ್ದು, ಕಾಡಂಚಿನ ಗ್ರಾಮಸ್ಥರು ಮತ್ತಷ್ಟು ಭಯಭೀತರಾಗಿದ್ದಾರೆ. ಸೋಮವಾರದಂದು ಹುಲ್ಮಟ್ಲು ಗ್ರಾಮದ ಚಿನ್ನಪ್ಪನನ್ನು ಕೊಂದು ಹಾಕಿದ್ದ ಹುಲಿ, ಇಂದು ಬೆಳಿಗ್ಗೆ ತಿಮ್ಮನ ಹೊಸಳ್ಳಿ ಗ್ರಾಮದ ಕೆಂಚ(55) ಎಂಬಾತನನ್ನು ಬಲಿ ಪಡೆಯುವ ಮೂಲಕ ತನ್ನ ಅಟ್ಟಹಾಸವನ್ನು ಮುಂದು ವರೆಸಿದೆ. ಕಾಡಂಚಿನ ಸೇಬನಕೊಲ್ಲಿ ಎಂಬಲ್ಲಿ ಕೆಂಚ ಮತ್ತು 12 ವರ್ಷದ ಬಳ್ಳ ಎಂಬ ಬಾಲಕ ಇಂದು ಸಂಜೆ…

ರಾಹುಲ್‍ಗಾಂಧಿ ಕಿವಿಮಾತು: ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕ ತೆರೆ
ಮೈಸೂರು

ರಾಹುಲ್‍ಗಾಂಧಿ ಕಿವಿಮಾತು: ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕ ತೆರೆ

February 1, 2019

ಬೆಂಗಳೂರು,: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಾತ್ಕಾಲಿಕ ತಡೆ ಹಾಕಿದ್ದಾರೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಥಮ ಬಾರಿಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು, ಸಾರ್ವಜನಿಕವಾಗಿ ಸಿದ್ದ ರಾಮಯ್ಯ ವಿರುದ್ಧ ಹರಿಹಾಯ್ದು, ದೋಸ್ತಿ ಪಕ್ಷಕ್ಕೆ ಎಚ್ಚರಿಕೆ ನೀಡುತ್ತಿದ್ದಂತೆ, ಎಚ್ಚೆತ್ತ ಕಾಂಗ್ರೆಸ್ ವರಿಷ್ಠರು ಮಧ್ಯ ಪ್ರವೇಶಿಸಿ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದಂತಿದೆ. ಕೆಪಿಸಿಸಿ…

ಹುಣಸೂರು ನಗರಸಭೆ ಪೌರಾಯುಕ್ತ ಶಿವಪ್ಪ ನಾಯಕ ಅಮಾನತು
ಮೈಸೂರು

ಹುಣಸೂರು ನಗರಸಭೆ ಪೌರಾಯುಕ್ತ ಶಿವಪ್ಪ ನಾಯಕ ಅಮಾನತು

February 1, 2019

ಹುಣಸೂರು: ಅಕ್ರಮ ಖಾತೆ, ನಿಯಮ ಉಲ್ಲಂಘನೆ ಹಾಗೂ ಅವ್ಯವಹಾರದ ಆರೋಪದಡಿ ಹುಣಸೂರು ನಗರಸಭೆ ಪೌರಾಯುಕ್ತ ಶಿವಪ್ಪ ನಾಯಕ ಅವರನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಶೇಖರಪ್ಪ ಅಮಾನತುಗೊಳಿಸಿ, ಆದೇಶ ನೀಡಿದ್ದಾರೆ. ಮೂಲತಃ ಸಮುದಾಯ ಸಂಘಟನಾ ಧಿಕಾರಿಯಾದ ಶಿವಪ್ಪ ನಾಯಕ, ಹುಣ ಸೂರು ನಗರ ಸಭೆಯಲ್ಲಿ ಕಳೆದ ಎರಡು ವರ್ಷಗಳಿಂದ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸ್ಥಳೀಯ ರಾಗಿದ್ದು, ಹಲವಾರು ಭ್ರಷ್ಟಾಚಾರಗಳಲ್ಲಿ ತೊಡಗಿದ್ದಾರೆ. ಅವ್ಯವಹಾರ ನಡೆಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟು ಮಾಡಿದ್ದಾರೆ ಎಂದು ರಾಮೇಗೌಡ ಎಂಬುವರು…

ಇಂದಿನಿಂದ ಸುತ್ತೂರು ಜಾತ್ರೆ ಆರಂಭ
ಮೈಸೂರು

ಇಂದಿನಿಂದ ಸುತ್ತೂರು ಜಾತ್ರೆ ಆರಂಭ

February 1, 2019

ನಂಜನಗೂಡು: ಕಪಿಲಾ ನದಿ ತೀರದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಕೃಷಿಗೆ ಪೂರಕವಾಗಿ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಜನ ಸಾಮಾನ್ಯರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಸುತ್ತೂರು ಜಾತ್ರಾ ಮಹೋತ್ಸವದ ಆರು ದಿನಗಳ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಾತ್ರೆಯ ಪ್ರಮುಖ ಆರ್ಕಷಣೆಯಾಗಿರುವ ವಸ್ತು ಪ್ರದರ್ಶನ, ಕೃಷಿ ಮೇಳಕ್ಕೆ ಅಂತಿಮ ಸ್ಪರ್ಶ ನೀಡಲಾ ಗಿದೆ. ಮಹಾ ದಾಸೋಹಕ್ಕಾಗಿ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ. ಜಾತ್ರೆಯನ್ನು ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ…

ಇಂದು ಕೇಂದ್ರ ಬಜೆಟ್
ಮೈಸೂರು

ಇಂದು ಕೇಂದ್ರ ಬಜೆಟ್

February 1, 2019

ನವದೆಹಲಿ: ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಶುಕ್ರವಾರ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಎಲ್ಲರ ಗಮನವೂ ಅತ್ತಲೇ ನೆಟ್ಟಿದೆ. ಬಿಪಿಎಲ್ ಕಾರ್ಡು ದಾರರಿಗೆ ಎರಡೂವರೆಯಿಂದ ಮೂರು ಸಾವಿರ ರೂ. ಕನಿಷ್ಟ ವರಮಾನ ತಲು ಪಿಸುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆ ಮುಂದಿರುವಾಗ ಮಂಡನೆ ಯಾಗುತ್ತಿರುವ ಕೇಂದ್ರ ಬಜೆಟ್ ಮೇಲೆ ಕೃಷಿ, ಉದ್ಯಮ, ವಾಣಿಜ್ಯ ವಲಯ ಸೇರಿದಂತೆ ಜನಸಾಮಾನ್ಯರ ನಿರೀಕ್ಷೆ ಗಳೂ ಹೆಚ್ಚಿನದಾಗಿಯೆ ಇವೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಮಧ್ಯಂತರ ವಿತ್ತ ಸಚಿವ ಪಿಯೂಷ್…

ಕುಮಾರಸ್ವಾಮಿ ಜನಮನ್ನಣೆಗಳಿಸಬಾರದು ಎಂಬುದು ಸಿದ್ದರಾಮಯ್ಯ ಉದ್ದೇಶ
ಮೈಸೂರು

ಕುಮಾರಸ್ವಾಮಿ ಜನಮನ್ನಣೆಗಳಿಸಬಾರದು ಎಂಬುದು ಸಿದ್ದರಾಮಯ್ಯ ಉದ್ದೇಶ

February 1, 2019

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕೈಗೊಂಡಿರುವ ಜನಪರ ಕಾರ್ಯಕ್ರಮಗಳು ಜನ ಮನ್ನಣೆ ಗಳಿಸಬಾರದೆಂಬ ಏಕೈಕ ಉದ್ದೇಶ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದಾಗಿದೆ ಎಂಬ ವಿಷಯವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾಂಗ್ರೆಸ್ ರಾಯಭಾರಿಯ ಕಿವಿಗೆ ಹಾಕಿದ್ದಾರೆ. ದೆಹಲಿಯಲ್ಲಿ ನಿನ್ನೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ನಾಯಕರೊಂದಿಗೆ ನಡೆಸಿದ ಮಾತುಕತೆ ವಿವರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜೆಡಿಎಸ್ ವರಿಷ್ಠರಿಗೆ ನೀಡುತ್ತಿದ್ದ ವೇಳೆ ಈ ವಿಚಾರ ಪ್ರಸ್ತಾಪ ವಾಗಿದೆ. ರಾಷ್ಟ್ರಮಟ್ಟದಲ್ಲಿ…

ಜಿ.ಡಿ.ಹರೀಶ್‍ಗೌಡರಿಂದ ಬಡ್ಡಿರಹಿತ ಸಾಲ ವಿತರಣೆ
ಮೈಸೂರು

ಜಿ.ಡಿ.ಹರೀಶ್‍ಗೌಡರಿಂದ ಬಡ್ಡಿರಹಿತ ಸಾಲ ವಿತರಣೆ

February 1, 2019

ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ `ಬಡವರ ಬಂಧು’ ಯೋಜನೆಯಡಿ 112 ಮಂದಿ ಫಲಾನುಭವಿಗಳಿಗೆ 4.02 ಲಕ್ಷ ರೂ. ಸಾಲ ಮಂಜೂರಾತಿ ಪತ್ರವನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ ಇಂದಿಲ್ಲಿ ವಿತರಿಸಿದರು. ಮೈಸೂರಿನ ನೆಹರು ವೃತ್ತದಲ್ಲಿರುವ ಎಂಸಿ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ್ಡಿರಹಿತ ಸಾಲ ವಿತರಿ ಸುವ ಮೂಲಕ ಮೈಸೂರು ಜಿಲ್ಲೆಯಲ್ಲಿ `ಬಡವರ ಬಂಧು’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಯೋಜನೆಯಡಿ ನಗರ, ಪಟ್ಟಣ ಪ್ರದೇಶಗಳ…

ಕೋಟ್ಯಾಂತರ ಅವ್ಯವಹಾರಕ್ಕೆ ಆಸ್ಪದ ಪಾಲಿಕೆ ಇಂಜಿನಿಯರ್‍ಗಳ ವರ್ಗಾವಣೆ
ಮೈಸೂರು

ಕೋಟ್ಯಾಂತರ ಅವ್ಯವಹಾರಕ್ಕೆ ಆಸ್ಪದ ಪಾಲಿಕೆ ಇಂಜಿನಿಯರ್‍ಗಳ ವರ್ಗಾವಣೆ

February 1, 2019

ಮೈಸೂರು: ಮೈಸೂರು ನಗರಪಾಲಿಕೆ ವಲಯ ಕಚೇರಿ-1ರ ಆಯುಕ್ತ ವಿ.ಸುನೀಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಎಂ.ಎನ್.ಮೋಹನ ಕುಮಾರಿ ಅವರನ್ನು ವರ್ಗಾವಣೆ ಮಾಡಿ, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಆದೇಶಿಸಿದ್ದಾರೆ. ಸುನೀಲ್ ಬಾಬು ಅವರನ್ನು ನರ್ಮ್ ವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಹಾಗೂ ಮೋಹನ ಕುಮಾರಿಯನ್ನು ಸೂಯೇಜ್ ಫಾರಂ ಹಾಗೂ ರಾಯನ ಕೆರೆಯಲ್ಲಿನ ಮಲಿನ ನೀರು ಶುದ್ಧೀಕರಣ ಘಟಕ(ಎಸ್‍ಟಿಪಿ) ನಿರ್ವಹಣೆ ಮತ್ತು ಮೇಲ್ವಿಚಾರಣೆ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ವಲಯ ಕಚೇರಿ-8ರ ಆಯುಕ್ತ ಕೆ.ಕುಬೇರಪ್ಪ ಅವರಿಗೆ ವಲಯ ಕಚೇರಿ-1ರ ಕಾರ್ಯಬಾರವನ್ನೂ…

ಬಜೆಟ್‍ಗೂ ಮುನ್ನ ಗಿಫ್ಟ್: ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ 1.46 ರೂ., ಸಬ್ಸಿಡಿ ರಹಿತ 30 ರೂ. ಇಳಿಕೆ!
ಮೈಸೂರು

ಬಜೆಟ್‍ಗೂ ಮುನ್ನ ಗಿಫ್ಟ್: ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ 1.46 ರೂ., ಸಬ್ಸಿಡಿ ರಹಿತ 30 ರೂ. ಇಳಿಕೆ!

February 1, 2019

ನವದೆಹಲಿ: ಬಜೆಟ್‍ಗೂ ಮುನ್ನ ಕೇಂದ್ರ ಸರ್ಕಾರ ದೇಶದ ಜನತೆಗೆ ಭರ್ಜರಿ ಗಿಫ್ಟ್ ನೀಡಿದ್ದು, ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ರೂ. 1.46 ಇಳಿಕೆ, ಸಬ್ಸಿಡಿ ರಹಿತ ರೂ.30 ಇಳಿಕೆ ಮಾಡಿದೆ. ಕೇಂದ್ರ ಸರ್ಕಾರ ಎಲ್‍ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಹೌದು, ಸಬ್ಸಿಡಿ ಸಹಿತ 14 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 1.46 ರೂ.ಗಳ ಕಡಿತ ಮಾಡಿದ್ದು ಇದು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಇದರೊಂದಿಗೆ ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ 493.53 ರೂಪಾಯಿಗೆ ಸಿಗಲಿದೆ. ಇನ್ನು…

1 1,147 1,148 1,149 1,150 1,151 1,611
Translate »