ಜಿ.ಡಿ.ಹರೀಶ್‍ಗೌಡರಿಂದ ಬಡ್ಡಿರಹಿತ ಸಾಲ ವಿತರಣೆ
ಮೈಸೂರು

ಜಿ.ಡಿ.ಹರೀಶ್‍ಗೌಡರಿಂದ ಬಡ್ಡಿರಹಿತ ಸಾಲ ವಿತರಣೆ

February 1, 2019

ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ `ಬಡವರ ಬಂಧು’ ಯೋಜನೆಯಡಿ 112 ಮಂದಿ ಫಲಾನುಭವಿಗಳಿಗೆ 4.02 ಲಕ್ಷ ರೂ. ಸಾಲ ಮಂಜೂರಾತಿ ಪತ್ರವನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ ಇಂದಿಲ್ಲಿ ವಿತರಿಸಿದರು.

ಮೈಸೂರಿನ ನೆಹರು ವೃತ್ತದಲ್ಲಿರುವ ಎಂಸಿ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ್ಡಿರಹಿತ ಸಾಲ ವಿತರಿ ಸುವ ಮೂಲಕ ಮೈಸೂರು ಜಿಲ್ಲೆಯಲ್ಲಿ `ಬಡವರ ಬಂಧು’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಯೋಜನೆಯಡಿ ನಗರ, ಪಟ್ಟಣ ಪ್ರದೇಶಗಳ ಬೀದಿ ಬದಿ ವ್ಯಾಪಾರಿ ಗಳಿಗೆ ದೈನಂದಿನ ವ್ಯಾಪಾರಕ್ಕಾಗಿ 10,000 ರೂ.ವರೆಗೆ ಬಡ್ಡಿರಹಿತ ಸಾಲ ನೀಡಲಾಗು ತ್ತದೆ. ಮೈಸೂರು ನಗರಕ್ಕೆ 3000 ಮತ್ತು ಚಾಮರಾಜನಗರಕ್ಕೆ 1000 ಫಲಾನುಭವಿ ಗಳಿಗೆ ಈ ಯೋಜನೆಯಡಿ ಸಾಲ ವಿತರಿ ಸಲು ಗುರಿ ನಿಗದಿಪಡಿಸಲಾಗಿದೆ. ಈ ಪೈಕಿ ಈಗಾಗಲೇ 1226 ಜನ ಫಲಾನುಭವಿಗಳನ್ನು ಗುರುತಿಸಿ ಅರ್ಜಿ ವಿತರಿಸಲಾಗಿದೆ. ಇವ ರಲ್ಲಿ 560 ಮಂದಿ ಬ್ಯಾಂಕ್‍ನ ನಗರ ವ್ಯಾಪ್ತಿಯ ಶಾಖೆಗಳಲ್ಲಿ ಖಾತೆ ತೆರೆದಿದ್ದು, 112 ಜನ ರಿಗೆ 4,02 ಲಕ್ಷ ರೂ. ಮಂಜೂರಾಗಿದೆ.

ಬ್ಯಾಂಕ್‍ನಲ್ಲಿ ಹಲವರಿಗೆ ಸಾಂಕೇತಿಕವಾಗಿ ಸಾಲ ಮಂಜೂರಾತಿ ಪತ್ರ ವಿತರಿಸಿ ಮಾತ ನಾಡಿದ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಸಿಎಂ ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆಯ ಈ ಯೋಜನೆಯಲ್ಲಿ ನೀಡಲಾಗುವ ಸಾಲವು ನಗದು ರೂಪದಲ್ಲಿದ್ದು, ಮೂರು ತಿಂಗಳೊ ಳಗೆ ಮರು ಪಾವತಿ ಮಾಡಬೇಕಾಗುತ್ತದೆ. ನಿಗದಿತ ಅವಧಿಯಲ್ಲಿ ಸಾಲದ ಮಿತಿಗೊಳ ಪಟ್ಟು ಎಷ್ಟು ಬಾರಿಯಾದರೂ ಹಣವನ್ನು ಡ್ರಾ ಮಾಡಬಹುದು, ಜಮಾ ಮಾಡ ಬಹುದಾಗಿದೆ. 3 ತಿಂಗಳ ಅವಧಿಗೆ ಶೂನ್ಯ ಬಡ್ಡಿಯಾಗಿರುವ ಈ ಸಾಲವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪೂರ್ತಿಯಾಗಿ ಮರು ಪಾವತಿಸಿದಲ್ಲಿ ನಂತರ ಸಾಲವನ್ನು ನವೀಕರಿಸಬಹುದು. ಶೇ.10ರಷ್ಟು ಹೆಚ್ಚಿಗೆ ಮಾಡಿ ಮಿತಿಯನ್ನು 15,000 ರೂ.ಗಳಿಗೆ ನಿಗದಿಪಡಿಸಲು ಅವಕಾಶವಿದೆ. ಮೂರು ತಿಂಗಳೊಳಗೆ ಸಾಲ ಮರು ಪಾವತಿ ಸದಿದ್ದಲ್ಲಿ ಶೇ.10ರ ಬಡ್ಡಿ ದರ ವಿಧಿಸ ಲಾಗುವುದು ಎಂದು ಹೇಳಿದರು.

ಈ ವೇಳೆ ಬ್ಯಾಂಕ್‍ನ ಉಪಾಧ್ಯಕ್ಷ ಸದಾನಂದ, ನಿರ್ದೇಶಕರಾದ ಸುಬ್ಬಯ್ಯ, ಡಾ.ಎಂ.ಜಿ.ಮಂಜೇಗೌಡ, ಚಿಕ್ಕಳ್ಳಿ ಕುಮಾರ್, ಬ್ಯಾಂಕ್‍ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ಬಿ.ಲಿಂಗಣ್ಣಯ್ಯ, ಪ್ರಧಾನ ವ್ಯವಸ್ಥಾಪಕ ವಿನೋದ್ ಕುಮಾರ್, ಶಾಖಾ ವ್ಯವಸ್ಥಾಪಕ ರವಿ ಇನ್ನಿತರರು ಉಪಸ್ಥಿತರಿದ್ದರು

Translate »