ಮೈಸೂರು

ಮರುಳು ಮಾಡಿ ಮಹಿಳೆ ಸರ ಕಳವು
ಮೈಸೂರು

ಮರುಳು ಮಾಡಿ ಮಹಿಳೆ ಸರ ಕಳವು

February 1, 2019

ಮೈಸೂರು: ಸಾರಿಗೆ ಸಂಸ್ಥೆ ಬಸ್‍ನಲ್ಲಿ ಮಹಿಳೆಯೊಬ್ಬರ 80 ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿರುವ ಬಗ್ಗೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ರೂಪಾನಗರ ನಿವಾಸಿ ದಾಕ್ಷಾಯಿಣಿ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರಿನಲ್ಲಿ ಸಂಬಂಧಿಕರ ವಿವಾಹ ಸಮಾರಂಭ ಮುಗಿಸಿಕೊಂಡು ದಾಕ್ಷಾಯಿಣಿ ಅವರು ಜ.28ರಂದು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರಿಗೆ ಬಸ್ ಹತ್ತಿದ್ದಾರೆ. ಇವರ ಪಕ್ಕ ದಲ್ಲೇ ಕುಳಿತ ಯುವತಿಯೊಬ್ಬಳು ಪರಿಚಯಿಸಿಕೊಂಡು ಮಾತನಾಡಿಸಿದ್ದಾರೆ. ಶ್ರೀರಂಗಪಟ್ಟಣ ದಲ್ಲಿ ಬಸ್‍ನಿಂದ ಇಳಿದು…

ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ತಿದ್ದುಪಡಿ ಕಾಯ್ದೆ ಜಾರಿಗೆ ಸಂಪುಟ ಅಸ್ತು
ಮೈಸೂರು

ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ತಿದ್ದುಪಡಿ ಕಾಯ್ದೆ ಜಾರಿಗೆ ಸಂಪುಟ ಅಸ್ತು

January 31, 2019

ಬೆಂಗಳೂರು: ಸರ್ವೋಚ್ಛ ನ್ಯಾಯಾಲಯದ ಅಂತಿಮ ತೀರ್ಪು ಬರುವ ಮುನ್ನವೇ ಎಸ್ಸಿ, ಎಸ್ಟಿ ನೌಕರರ ಬಡ್ತಿ ಮೀಸಲಾತಿ ತಿದ್ದುಪಡಿ ಕಾಯ್ದೆ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಂಚಾಯತ್‍ರಾಜ್ ಸಚಿವ ಕೃಷ್ಣ ಭೈರೇ ಗೌಡ, ಈ ತಿದ್ದುಪಡಿ ಕಾಯಿದೆ ಸುಪ್ರೀಂಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಬದ್ಧವಾಗಿರಲಿದೆ ಎಂದರು. ಬಡ್ತಿ ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಆದೇಶದ ವಿರುದ್ಧ ವ್ಯಾಪಕ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂದಿನ…

ಮೈಸೂರಲ್ಲಿ ಸಿಲ್ಕ್ ಮೆಗಾ ಕ್ಲಸ್ಟರ್, ಎನ್‍ಐಇಗೆ ಪ್ರತ್ಯೇಕ ವಿವಿ ಮಾನ್ಯತೆ
ಮೈಸೂರು

ಮೈಸೂರಲ್ಲಿ ಸಿಲ್ಕ್ ಮೆಗಾ ಕ್ಲಸ್ಟರ್, ಎನ್‍ಐಇಗೆ ಪ್ರತ್ಯೇಕ ವಿವಿ ಮಾನ್ಯತೆ

January 31, 2019

ಬೆಂಗಳೂರು: ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮೈಸೂರಿನಲ್ಲಿ ಸಿಲ್ಕ್ ಮೆಗಾ ಕ್ಲಸ್ಟರ್ ಅನ್ನು ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಇಂದಿಲ್ಲಿ ಅನುಮೋದನೆ ನೀಡಿದೆ. ಇದರ ಜೊತೆ ಜೊತೆಯಲ್ಲೇ ಇಲ್ಲಿನ ಪ್ರಸಿದ್ಧ ಎನ್‍ಐಇ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಖಾಸಗಿ ವಿಶ್ವವಿದ್ಯಾಲಯ ಮಾನ್ಯತೆ ನೀಡುವ ಸಂಬಂಧದ ಕರಡು ಮಸೂದೆಗೂ ಸಮ್ಮತಿ ಸೂಚಿಸಿದೆ. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣ ಭೈರೇಗೌಡ, 49.19 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಿಲ್ಕ್ ಮೆಗಾ ಕ್ಲಸ್ಟರ್ ನಿರ್ಮಾಣ…

ಮೈಸೂರು ವರ್ತಕನ ಸಂಶಯಾಸ್ಪದ ಸಾವು
ಮೈಸೂರು

ಮೈಸೂರು ವರ್ತಕನ ಸಂಶಯಾಸ್ಪದ ಸಾವು

January 31, 2019

ಮೈಸೂರು: ಮೈಸೂರಿನ ಅಡುಗೆ ಎಣ್ಣೆ ವರ್ತಕರೊಬ್ಬರು (ಆಯಿಲ್ ಮರ್ಚೆಂಟ್) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇವರನ್ನು ದುಷ್ಕರ್ಮಿಗಳು ಅಪಹರಿಸಿ ಒತ್ತೆ ಹಣ 2.22 ಲಕ್ಷ ರೂ. ಪಡೆದ ನಂತರವೂ ಹತ್ಯೆಗೈದು ಮೃತ ದೇಹವನ್ನು ನಾಲೆಯಲ್ಲಿ ಎಸೆದಿದ್ದಾರೆ ಎಂದು ಶಂಕಿಸಲಾಗಿದೆ. ಮೈಸೂರಿನ ಫೋರ್ಟ್ ಮೊಹಲ್ಲಾದ ವೀಣೆ ಶೇಷಣ್ಣ ರಸ್ತೆ (ಶಾಂತಲಾ ಟಾಕೀಸ್ ಹಿಂಭಾಗ) ನಿವಾಸಿ ರಾಜು ಎಂಬು ವರ ಪುತ್ರ ಸೆಂಥಿಲ್ (36) ಅನುಮಾನಾ ಸ್ಪದವಾಗಿ ಸಾವನ್ನಪ್ಪಿರುವ ವರ್ತಕ. ಇವರ ಮೃತದೇಹ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಿದರಳ್ಳಿ ಹುಂಡಿ ಬಳಿ…

ಹಳೇ ಉಂಡುವಾಡಿ ಕುಡಿಯುವ ನೀರು ಯೋಜನೆ ವಿಳಂಬಕ್ಕೆ ಜಿಟಿಡಿ ಆಕ್ರೋಶ
ಮೈಸೂರು

ಹಳೇ ಉಂಡುವಾಡಿ ಕುಡಿಯುವ ನೀರು ಯೋಜನೆ ವಿಳಂಬಕ್ಕೆ ಜಿಟಿಡಿ ಆಕ್ರೋಶ

January 31, 2019

ಬೆಂಗಳೂರು: ಕೆಆರ್‍ಎಸ್ ಹಿನ್ನೀರಿನಿಂದ ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಬಹು ನಿರೀಕ್ಷಿತ ಹಳೇ ಉಂಡು ವಾಡಿ ಕುಡಿಯುವ ನೀರು ಯೋಜನೆ ವಿಚಾರದಲ್ಲಿ ಅಧಿಕಾರಿಗಳ ವಿಳಂಬ ಧೋರಣೆ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಿಡಿಕಾರಿದ್ದಾರೆ. ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಳೆದ ಬಜೆಟ್‍ನಲ್ಲಿ ಈ ಯೋಜನೆಗೆ 50 ಕೋಟಿ ಕಾಯ್ದಿರಿಸಲಾಗಿದ್ದರೂ, ಇದುವರೆಗೆ ಯೋಜನೆಯ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದೆ ಮಂಡಿಸದೇ ವಿಳಂಬ…

ಶೇ.82 ರಷ್ಟು ನೌಕರರಿಗೆ ಅನ್ಯಾಯ:ಅಹಿಂಸಾ ಆಕ್ಷೇಪ
ಮೈಸೂರು

ಶೇ.82 ರಷ್ಟು ನೌಕರರಿಗೆ ಅನ್ಯಾಯ:ಅಹಿಂಸಾ ಆಕ್ಷೇಪ

January 31, 2019

ಮೈಸೂರು: ಶೇ.18 ರಷ್ಟು ಸರ್ಕಾರಿ ನೌಕರರ ಒತ್ತಡಕ್ಕೆ ಮಣಿದು, ಶೇ.82ರಷ್ಟು ನೌಕರರ ಬಡ್ತಿಗೆ ಮಾರಕವಾಗಿರುವ `ವೇಗೋತ್ಕರ್ಷ’ ಮುಂಬಡ್ತಿ ಮೀಸಲಾತಿ ಕಾಯಿದೆಯನ್ನು ಜಾರಿ ಮಾಡಲು ರಾಜ್ಯ ಸಚಿವ ಸಂಪುಟ ಅನುಮತಿ ನೀಡಿರುವುದಕ್ಕೆ ಅಹಿಂಸಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ನಂಜಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ(ಅಹಿಂಸಾ) ವರ್ಗದ ನೌಕರರು ಕಳೆದ 27 ವರ್ಷಗಳಿಂದ `ವೇಗೋತ್ಕರ್ಷ’ ಮುಂಬಡ್ತಿ ಕಾಯಿದೆಯಿಂದ ತಮ್ಮ ಸೇವಾ ಹಿರಿತನಕ್ಕೆ ಧಕ್ಕೆಯಾಗುತ್ತಿದೆ ಎಂದು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಅಲ್ಲಿಯೂ ಸುದೀರ್ಘ…

ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಪರೋಕ್ಷ ವಾಗ್ದಾಳಿ
ಮೈಸೂರು

ಸಿದ್ದರಾಮಯ್ಯ ವಿರುದ್ಧ ದೇವೇಗೌಡರ ಪರೋಕ್ಷ ವಾಗ್ದಾಳಿ

January 31, 2019

ಬೆಂಗಳೂರು: ಬೆಂಗಳೂರಿನ ಅರ ಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ರಾಷ್ಟ್ರೀಯ ಮಹಾ ಸಮ್ಮೇಳನ ದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ .ದೇವೇಗೌಡ ಅವರು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಈ ಹಿಂದೆ ಜೆಡಿಎಸ್ ಅಧ್ಯಕ್ಷರಾಗಿದ್ದವರು ಏನೂ ಕೆಲಸ ಮಾಡಿಲ್ಲ. ಸೋನಿಯಾ ಗಾಂಧಿ ಮೇಲೆ ಒತ್ತಡ ಹಾಕಿದ್ದರೆ ಆಗ ನಾನು ಮುಖ್ಯಮಂತ್ರಿ ಆಗುತ್ತಿದ್ದೆ ಎಂದು ಹೇಳಿ ದರು. ಆಗ ನನಗಾದ ನೋವು ದೇವ ರಿಗೆ ಮಾತ್ರ ಗೊತ್ತು….

ಪ್ರಧಾನಿ ಹುದ್ದೆ ಬಿಟ್ಟವರು, ಸಿಎಂ ಸ್ಥಾನಕ್ಕೆ ಅಂಟಿ ಕೂರುತ್ತೇವಾ…!
ಮೈಸೂರು

ಪ್ರಧಾನಿ ಹುದ್ದೆ ಬಿಟ್ಟವರು, ಸಿಎಂ ಸ್ಥಾನಕ್ಕೆ ಅಂಟಿ ಕೂರುತ್ತೇವಾ…!

January 31, 2019

ಬೆಂಗಳೂರು: ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ ಕುಟುಂಬ ನಮ್ಮದು. ಇನ್ನು ಕೇವಲ ಮುಖ್ಯ ಮಂತ್ರಿ ಸ್ಥಾನಕ್ಕೆ ಅಂಟಿ ಕೂರುತ್ತೇವಾ? ಜನರಿಗೆ ಮೋಸ ಮಾಡಿ ನಾನು ಸಿಎಂ ಸ್ಥಾನದಲ್ಲಿ ಇರುತ್ತೇನಾ? ಎಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆಡಿಎಸ್ ರಾಷ್ಟ್ರೀಯ ಅಧಿವೇಶನ ದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಅಂತ ಹೇಳಿದ್ದು ನಿಜ. ಮಿತ್ರ ಪಕ್ಷದವರು ನನ್ನ ಮೇಲೆ ತೀವ್ರ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ….

ಇನ್ಸ್‍ಪೆಕ್ಟರ್ ರವಿ ಉಡುಪಿಗೆ ಎತ್ತಂಗಡಿ; ಒಂದೇ ದಿನದಲ್ಲಿ ವರ್ಗಾವಣೆ ರದ್ದು
ಮೈಸೂರು

ಇನ್ಸ್‍ಪೆಕ್ಟರ್ ರವಿ ಉಡುಪಿಗೆ ಎತ್ತಂಗಡಿ; ಒಂದೇ ದಿನದಲ್ಲಿ ವರ್ಗಾವಣೆ ರದ್ದು

January 31, 2019

ಮೈಸೂರು: ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿ ಕೊಳ್ಳುವ ವಿಚಾರದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ದೂರವಾಣಿ ಮೂಲಕ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವಮಾ ನಿಸಿದರೆಂದು ಆರೋಪಿಸಿ ಐಜಿಪಿಯವರಿಗೆ ಲಿಖಿತ ದೂರು ನೀಡಿದ್ದ ಇನ್ಸ್‍ಪೆಕ್ಟರ್ ರವಿ ಈಗ ಹಿರಿಯ ಐಪಿಎಸ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜನವರಿ 25ರಂದು ರವಿ, ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ ಅವರಿಗೆ ಎಸ್ಪಿ ಅಮಿತ್ ಸಿಂಗ್ ವಿರುದ್ಧ ಲಿಖಿತ ದೂರು ನೀಡಿದ್ದರು. ಈ ದೂರು…

ನಾಳೆ ಕೇಂದ್ರ ಮಧ್ಯಂತರ ಬಜೆಟ್
ಮೈಸೂರು

ನಾಳೆ ಕೇಂದ್ರ ಮಧ್ಯಂತರ ಬಜೆಟ್

January 31, 2019

ನವದೆಹಲಿ: ಮುಂಬರುವ ಲೋಕಸಭೆ ಚುನಾ ವಣೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಫೆ.1 ರಂದು 4 ತಿಂಗಳ ಮಧ್ಯಂತರ ಬಜೆಟ್ ಮಂಡಿಸಲಾಗುವುದು ಎಂದು ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆಬ್ರವರಿ 1ರಂದು ಬಜೆಟ್ ಮಂಡಿಸುತ್ತಿರುವು ದಾಗಿ ತಿಳಿಸಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಫೆ.13ರವರೆಗೆ ನಡೆಯಲಿದ್ದು, ಫೆಬ್ರವರಿ 1ರಂದು ಆಯವ್ಯಯ ಮಂಡನೆಯಾಗಲಿದೆ. ಜನವರಿ 31ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಈ ಮಧ್ಯಂ ತರ ಬಜೆಟ್‍ನಲ್ಲಿ ನರೇಂದ್ರ…

1 1,149 1,150 1,151 1,152 1,153 1,611
Translate »