ಮೈಸೂರು: ಉನ್ನತ ಶಿಕ್ಷಣ ಮತ್ತು ಉದ್ಯೋಗ ಪ್ರತಿಯೊಬ್ಬರ ಹಕ್ಕೆಂದು ಪರಿಗಣಿತವಾದರೆ ಮಾತ್ರ ಜವಾ ಬ್ದಾರಿಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜು ಪ್ರಾಧ್ಯಾಪಕ ಜನಾ ರ್ಧನ್ ಕೆಸರುಗದ್ದೆ ಪ್ರತಿಪಾದಿಸಿದರು. ಮೈಸೂರಿನ ಪುರಭವನದಲ್ಲಿ ಭಾರತ ಜ್ಞಾನ-ವಿಜ್ಞಾನ ಸಮಿತಿ (ಬಿಜಿವಿಎಸ್) ರಾಜ್ಯ ಘಟಕದ ವತಿಯಿಂದ ಹಮ್ಮಿ ಕೊಂಡಿರುವ ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬದ ಅಂತಿಮ ದಿನವಾದ ಬುಧವಾರ `ಉನ್ನತ ಶಿಕ್ಷಣದ ಸವಾಲುಗಳು ಮತ್ತು ಭವಿಷ್ಯದಲ್ಲಿ ವಿಶ್ವವಿದ್ಯಾನಿಲಯದ ಶಿಕ್ಷಣ’ ಕುರಿತು ಅವರು ಮಾತನಾಡಿದರು. ಯುವ ಜನರ ಹಕ್ಕುಗಳು…
ಸರ್ಕಾರದಿಂದ 4 ವರ್ಷದ ಅನುದಾನವೇ ಬಂದಿಲ್ಲ!
January 31, 2019ಮೈಸೂರು: ಜೀತ ವಿಮುಕ್ತರಾದ ಫಲಾನುಭವಿಗಳಿಗೆ ಸರ್ಕಾರದಿಂದ ನೀಡುವ ಪರಿಹಾರದ ಮೊತ್ತಕ್ಕಾಗಿ 4 ವರ್ಷಗಳಿಂದ ಪ್ರಸ್ತಾವನೆ ಸಲ್ಲಿಸಿದ್ದರೂ ಸರ್ಕಾರದಿಂದ ಇದುವರೆಗೂ ಹಣ ಬಿಡುಗಡೆಯಾಗಿಲ್ಲ ಎಂಬ ವಿಚಾರ ಬುಧವಾರ ಮೈಸೂರು ಜಿಲ್ಲಾ ಪಂಚಾ ಯಿತಿ ಮಿನಿ ಸಭಾಂಗಣದಲ್ಲಿ ನಡೆದ ಮೈಸೂರು ಜಿಲ್ಲಾ ಜೀತ ವಿಮುಕ್ತರ ಪುನರ್ವಸತಿ ಸಮಿತಿ ಸಭೆಯಲ್ಲಿ ತಿಳಿದುಬಂದಿತು. ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯ ಬೇಕಾಗಿದ್ದ ಸಮಿತಿಯ ಸಭೆಯನ್ನು ನಾಲ್ಕು ವರ್ಷಗಳ ನಂತರ ಇಂದು ಕರೆಯ ಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ…
ಮುಕ್ತ ಮಾರುಕಟ್ಟೆಯಲ್ಲಿ `ಸರ್ವೋದಯ’ ಚಿಂತನೆ ತೆರೆಮರೆಗೆ
January 31, 2019ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟು ಸರ್ವೋದಯದ ಕನಸು ಕಂಡಿದ್ದ ಮಹಾತ್ಮ ಗಾಂಧೀಜಿ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳದ ಜನರು ಜಾಗತೀಕರಣದ ಪ್ರಭಾವ ದಿಂದಾಗಿ ಹೆಚ್ಚು ಸಂಪಾದನೆಯತ್ತ ಮುಖ ಮಾಡಿದ್ದಾರೆ ಎಂದು ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ವಿಷಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನದ ಆವರಣದಲ್ಲಿ ಬುಧವಾರ ಗಾಂಧಿ ಅಧ್ಯಯನ ಕೇಂದ್ರ ಹಾಗೂ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಸಂಯುಕ್ತಾಶ್ರಯ ದಲ್ಲಿ ಜರುಗಿದ 71ನೇ ಸರ್ವೋದಯ ದಿನಾ ಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ…
ಮೈಸೂರಿನ ವಿವಿಧೆಡೆ `ಸರ್ವೋದಯ ದಿನ’ ಆಚರಣೆ
January 31, 2019ಮೈಸೂರು: ಮೈಸೂರಿನ ವಿವಿಧೆಡೆ ಬುಧವಾರ ಸರ್ವೋದಯ ದಿನ ಆಚರಿಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಆತ್ಮಕ್ಕೆ ಶಾಂತಿ ಕೋರಿ ಗೌರವ ನಮನ ಸಲ್ಲಿಸಲಾಯಿತು. ಮೈಸೂರು ಜಿಲ್ಲಾಡಳಿತ, ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘ, ಮೈಸೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಹಾಗೂ ವಿವಿಧ ಕಾಲೇಜುಗಳಲ್ಲಿ 71ನೇ ಸರ್ವೋದಯ ದಿನವನ್ನು ಆಚರಿಸುವ ಮೂಲಕ ರಾಷ್ಟ್ರಪಿತನನ್ನು ಸ್ಮರಿಸಿದರು. ಜಿಲ್ಲಾಡಳಿತ: ಡಿಸಿ ಕಚೇರಿ ಸಭಾಂಗಣ ದಲ್ಲಿ ಸರ್ವೋದಯ ದಿನ ಹಿನ್ನೆಲೆಯಲ್ಲಿ ಮೌನಾಚರಣೆ ಬಳಿಕ, ಗಾಂಧೀಜಿ ತತ್ವಾ ದರ್ಶ ಪಾಲನೆಯ ಪ್ರತಿಜ್ಞೆ…
ಗಾಂಜಾ ಮಾರುತ್ತಿದ್ದ ವ್ಯಕ್ತಿ ಸೆರೆ
January 31, 2019ಮೈಸೂರು: ಮೈಸೂರಿನ ಮಂಡಿ ಮೊಹಲ್ಲಾದ ಕೈಲಾಸಪುರಂ ಸರ್ಕಾರಿ ಶಾಲೆ ಹಿಂಭಾಗ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ. ಮೈಸೂರಿನ ಕೆಸರೆ 2ನೇ ಹಂತದ ಉಸ್ಮಾನಿಯಾ ಬ್ಲಾಕ್ ನಿವಾಸಿ ಅಸ್ಗರ್ ಪಾಷ ಅವರ ಮಗ ಅಪ್ಸರ್ ಪಾಷ(24) ಬಂಧಿತನಾಗಿದ್ದು, ಆತನಿಂದ 310 ಗ್ರಾಂ ಗಾಂಜಾ ಹಾಗೂ 10,500 ರೂ. ನಗದನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕೈಲಾಸಪುರಂ ಪ್ರೌಢಶಾಲೆ ಹಿಂಭಾಗ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಬಳಿ ನಿಂತು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆತನನ್ನು, ಮಾಹಿತಿ ಆಧರಿಸಿ ಕಾರ್ಯಾಚರಣೆ…
ಲೋಕಸಭೆ ಚುನಾವಣೆಗೂ ಮುನ್ನ ಭಾರತದಲ್ಲಿ ಕೋಮುಗಲಭೆ ಸಾಧ್ಯತೆ ಅಮೆರಿಕ ಗುಪ್ತಚರ ಇಲಾಖೆ ವರದಿ
January 31, 2019ವಾಷಿಂಗ್ಟನ್: ಭಾರತದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಬಿಜೆಪಿ ಹಿಂದುತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದರೇ ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೋಮು ಗಲಭೆ ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕಾ ಗುಪ್ತಚರ ಇಲಾಖೆ ವರದಿ ಮಾಡಿದೆ. 2019ರಲ್ಲಿ ಜಗತ್ತಿನಲ್ಲಿ ಉಂಟಾಗಬಹುದಾದ ಅಪಾಯ ಸಂದರ್ಭಗಳ ಪರಿಶೀಲನೆ ಕೈಗೊಂಡಿರುವ ಅಮೆರಿಕಾ ಗುಪ್ತಚರ ಇಲಾಖೆ ಭಾರತದಲ್ಲಿ ಕೋಮು ಗಲಭೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ. ಈ ವರದಿಯನ್ನು ಅಮೆರಿಕಾ ಸೆನೆಟ್‍ಗೆ ತಿಳಿಸಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ…
ಬೀದಿ ನಾಯಿ ದಾಳಿ: ಯುವಕನಿಗೆ ಗಾಯ
January 31, 2019ಮೈಸೂರು: ಮೂತ್ರ ವಿಸರ್ಜನೆ ವೇಳೆ ಯುವಕನ ಮೇಲೆ ನಾಯಿ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸಿರುವ ಘಟನೆ ಯಾದವಗಿರಿ ಚೆಲುವಾಂಬ ಉದ್ಯಾನವನದ ಬಳಿ ಬುಧವಾರ ಸಂಜೆ ನಡೆದಿದೆ. ರಾಜಸ್ಥಾನ ಮೂಲದ ಗೋಕುಲಂ ನಿವಾಸಿ, ಪಾನೀಪುರಿ ವ್ಯಾಪಾರಿ ಶಿವ ಕುಮಾರ್(22), ಬುಧವಾರ ಸಂಜೆ ಚೆಲುವಾಂಬ ಉದ್ಯಾನವನದ ಬಳಿ ಪಾನೀಪುರಿ ವ್ಯಾಪಾರ ಮಾಡುತ್ತಿದ್ದು, ಮೂತ್ರವಿಸರ್ಜನೆ ಮಾಡಲು ರಸ್ತೆ ಪಕ್ಕದಲ್ಲಿದ್ದ ಖಾಲಿ ಜಾಗಕ್ಕೆ ತೆರಳಿದ್ದಾರೆ. ಈ ವೇಳೆ ನಾಯಿ ದಾಳಿ ನಡೆಸಿ, ಕಾಲಿನ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ. ಇದನ್ನು ಕಂಡ ಸಾರ್ವಜನಿಕರು ಯುವಕನ…
ಫೆ.6, ಮೈಸೂರು ಜಿಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿ
January 31, 2019ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಫೆ.6ರಂದು ಚುನಾವಣೆ ನಡೆಸಲು ನಿಗದಿಯಾಗಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಪಂ ಸಿಇಓ ಕೆ.ಜ್ಯೋತಿ ಇಂದಿಲ್ಲಿ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಈ ಸಂಬಂಧ ಈಗಾಗಲೇ ಜಿಪಂನ ಪಕ್ಷವಾರು ಸದಸ್ಯರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರ ಕಚೇರಿಗೆ ಕಳುಹಿಸಲಾಗಿದೆ. ಅಲ್ಲದೆ ಪಂಚಾಯಿತಿಯ ಎಲ್ಲಾ ಸದಸ್ಯರಿಗೂ ಚುನಾವಣೆಯ ನೋಟೀಸು ಕಳುಹಿಸಲಾಗಿದೆ ಎಂದು ಹೇಳಿದರು. ನಯೀಮಾ ಸುಲ್ತಾನಾ ಮತ್ತು ಕೆ.ನಟರಾಜು ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತೆರವಾಗಿದೆ. ಹೀಗಾಗಿ ಫೆ.6ರಂದು…
ನರ್ಸ್ ನಿರ್ಲಕ್ಷ್ಯದಿಂದ ಪತ್ನಿ ಸಾವು
January 31, 2019ಮೈಸೂರು: ಹೆರಿಗೆ ಸಂದರ್ಭದಲ್ಲಿ ನರ್ಸ್‍ವೊಬ್ಬರ ನಿರ್ಲಕ್ಷ್ಯತೆಯಿಂದ ತನ್ನ ಗರ್ಭಿಣಿ ಪತ್ನಿ ಸಾವನ್ನಪ್ಪಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಂತಿನಗರದ ನಿವಾಸಿ ಇಮ್ರಾನ್ ಅಹಮದ್, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (ಡಿಹೆಚ್‍ಓ) ಮನವಿ ಸಲ್ಲಿಸಿದ್ದಾರೆ. ಮೈಸೂರಿನ ನಜರ್‍ಬಾದಿನಲ್ಲಿರುವ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಇಮ್ರಾನ್ ಅಹಮದ್, ಪತ್ನಿ ಯಾಸ್ಮೀನ್ ತಾಜ್ (30) ಸಾವಿಗೆ ನರ್ಸ್‍ವೊಬ್ಬರ ಬೇಜವಾಬ್ದಾರಿತನವೇ ಕಾರಣ. ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜ.12ರಂದು ಬೆಳಿಗ್ಗೆ ಮೈಸೂರಿನ ಕ್ಯಾತ ಮಾರನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿನ…
ನಾಳೆ ಮೈಸೂರಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ
January 31, 2019ಮೈಸೂರು: ಜಿಲ್ಲಾಡಳಿತ, ಶ್ರೀಮಡಿವಾಳ ಮಾಚಿದೇವರ ಜಯಂ ತ್ಯೋತ್ಸವ ಸಮಿತಿ ವತಿಯಿಂದ ಫೆ.1ರಂದು ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯ ಎಂ.ರಾಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೈಸೂರಿನ ಕಲಾಮಂದಿರ ದಲ್ಲಿ ಅಂದು ಬೆಳಿಗ್ಗೆ 10ಕ್ಕೆ ಜಯಂತ್ಯೋತ್ಸವ ಏರ್ಪಡಿಸಲಾಗಿದೆ. ಇದಕ್ಕೂ ಮುನ್ನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕಲಾಮಂದಿರದವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳ ಸಹಿತ ನಡೆಯಲಿರುವ ಮೆರವಣಿಗೆಗೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ…










